ರಾಜ್ಯಪಾಲರಿಂದ ಹುದ್ದೆಯ ದುರ್ಬಳಕೆ: ಈಶ್ವರಪ್ಪ
ಬೆಂಗಳೂರು
ಫೆ 4 : ಉನ್ನತ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಅವರು ರಾಜ್ಯಪಾಲರಂತೆ ವರ್ತಿಸದೆ ಕಾಂಗ್ರೆಸ್ ಏಜೆಂಟ್ ತರ ಕಾರ್ಯ ನಿರ್ವಹಿಸುತ್ತಿದ್ದಾರೆ. ರವರು ರಾಜೀನಾಮೆ ನೀಡ್ಡುವುದು ಒಳಿತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಆರೋಪಿಸಿದ್ದಾರೆ. ವಿ ಸೋಮಣ್ಣ ಅವರ ನಾಮಪತ್ರವನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಈಶ್ವರಪ್ಪ ಅವರ ಸಿಟ್ಟಿಗೆ ಕಾರಣ . id="toptextpromo">ಪಕ್ಷದ
ಅಧ್ಯಕ್ಷನಾಗಿ ನಾನು ರಾಜ್ಯಪಾಲರನ್ನು ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದೇನೆ. ಅವರು ವಿರೋಧ ಪಕ್ಷದ ನಾಯಕರ ಹಾಗೆ ವರ್ತಿಸುತ್ತಿರುವುದು ವಿಷಾದನೀಯ. ಮಾಜಿ ಸಚಿವ ಸೋಮಣ್ಣ ಅವರನ್ನು ಮೇಲ್ಮನೆಗೆ ನಾಮಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ತಮ್ಮನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರಾಜ್ಯಪಾಲರ ವರ್ತನೆ ಸರಿಯಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಜ್ಯಪಾಲರನ್ನು
ವಾಪಸ್ ಕರೆಸಿಕೊಳ್ಳಿ ಎಂದು ಕೇಂದ್ರವನ್ನು ಒತ್ತಾಯಿಸುವ ಕಾಲ ಇನ್ನೂ ಬಂದಿಲ್ಲ. ನ್ಯಾ. ಸೋಮಶೇಖರ್ ಆಯೋಗದ ವರದಿ ಬಗ್ಗೆ ಪ್ರಸ್ತಾಪಿಸುತ್ತಾ, ಕೆಲವೊಂದು ಸಂಘಟನೆಗಳನ್ನು ಹೆಸರಿಸಿ ಸರಕಾರವನ್ನು ಮುಜಗರಕ್ಕೀಡುಮಾಡುವ ತಂತ್ರ ಇದು ಎಂದು ಜನತೆ ಬಲ್ಲರು. ಸರಕಾರಕ್ಕೆ ಒಪ್ಪಿಸುವ ಮೊದಲೇ ವರದಿ ಬಹಿರಂಗ ಗೊಂಡ ಬಗ್ಗೆ ವಿರೋಧ ಪಕ್ಷಗಳು ಪ್ರತಿಭಟಿಸಬೇಕಿತ್ತು, ಆದರೆ ಕಾಂಗ್ರೆಸ್ ಮತ್ತು ದಳ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.











Click it and Unblock the Notifications