ಸಿ ಅಶ್ವತ್ಥ್ ನಿಧನಕ್ಕೆ ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಶೋಕ

C Ashwath
ಬೆಂಗಳೂರು, ಡಿ. 29 : ಹುಟ್ಟಿದ ದಿನವೇ ಕೊನೆಯುಸಿರೆದ ಸುಗಮ ಸಂಗೀತ ಕ್ಷೇತ್ರದ ಅಪರೂಪದ ಗಾಯಕ ಸಿ ಆಶ್ವತ್ಥ್ (70) ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಸಿ ಅಶ್ವತ್ಥ್ ನಿಧನದಿಂದ ಸುದ್ದಿ ಆಘಾತ ತರಿಸಿದೆ. ಅವರಿಲ್ಲ ಸಂಗೀತ ಕ್ಷೇತ್ರ ಬಡವಾಗಿದೆ. ಸುಗಮ ಸಂಗೀತ, ಚಲನಚಿತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಶ್ವತ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.

ಅಶ್ವತ್ಥ್ ನಿಧನದ ಅಂಗವಾಗಿ ವಿಧಾನಮಂಡಲದ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶ್ವತ್ಥ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ವಿಚಾರಿಸಿದ್ದರು. ಅಲ್ಲದೇ, ಅಶ್ವತ್ಥ್ ಅವರ ಆಸ್ಪತ್ರೆಯ ಅಷ್ಟೂ ಖರ್ಚನ್ನು ಸರಕಾರ ಭರಿಸಲಿದೆ ಎಂದು ಹೇಳಿಕೆ ನೀಡಿದ್ದರು.

ಅಶ್ವತ್ಥ ಅವರ ಪಾರ್ಥೀವ ಶರೀರವನ್ನು ಜೆಸಿ ರಸ್ತೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಹಿಂಭಾಗ ಸಂಸ ಬಯಲು ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ದರುಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಂತ ಶಿಶುನಾಳ ಷರೀಫರ 'ತರವಲ್ಲ ತಗೀ ನಿನ್ನ ತಂಬೂರಿ... 'ಕಾಮನಬಿಲ್ಲು ಚಿತ್ರದ 'ಉಳುವಾ ಯೋಗಿ ನೋಡಲ್ಲಿ 'ಎಂಬ ಮನೋಜ್ಞ ಗೀತೆಗಳನ್ನು ಹಾಡುವ ರಾಜ್ಯದ ಸಂಗೀತ ಪ್ರಿಯರ ಮನೆಮಾತಾಗಿದ್ದ ಅಶ್ವತ್ಥ್ ಅವರು ಗೀತೆ ಮುಗಿಸಿ ಎದ್ದು ಹೋಗಿದ್ದಾರೆ. ಅಶ್ವತ್ಥ್ ಕಂಠಸಿರಿಯಲ್ಲಿ ಹೊರಬಂದಿರುವ ಹಾಡುಗಳು ಮಾತ್ರ ಅಜರಾಮರವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+