ಪ್ರವೀಣ್ ಮಹಾಜನ್ ಗೆ ಮಿದುಳಿನ ಆಘಾತ
ಮುಂಬೈ
ಡಿ 12 : ಬಿಜೆಪಿ ಹಿರಿಯ ಮುಖಂಡ ದಿವಂಗತ ಪ್ರಮೋದ್ ಮಹಾಜನ್ ಅವರ ಸಹೋದರ ಪ್ರವೀಣ್ ಮಹಾಜನ್ ಗೆ ಮಿದುಳಿನ ಆಘಾತಕ್ಕೆ (ಬ್ರೈನ್ ಹ್ಯಾಮರೇಜ್) ಒಳಗಾಗಿದ್ದು, ಥಾಣೆ ನಗರದ ಜ್ಯುಪಿಟರ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. id="toptextpromo">ಮಿದುಳಿನ
ರಕ್ತಸ್ರಾವದಿಂದ ಕೋಮಾ ಸ್ಥಿತಿಗೆ ತಲುಪಿರುವ ಪ್ರವೀಣ್ ಅವರನ್ನು ತುರ್ತು ನಿಗಾ ವಿಭಾಗಲ್ಲಿರಿಸಲಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಹೋದರ ಪ್ರಮೋದ್ ಮಹಾಜನ್ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್ ಕಳೆದ ನವೆಂಬರ್ ತಿಂಗಳ ಕೊನೆಯಿಂದ 14 ದಿನಗಳ ಅವಧಿಗೆ ಪರೋಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications