ಮುಂಬೈ ವಿರುದ್ಧ ಬೆಂಗಳೂರಿಗೆ 9 ವಿಕೆಟ್ ಜಯ
ಜೋಹಾನ್ಸ್ ಬರ್ಗ್, ಮೇ.4: ಶಿಸ್ತುಬದ್ಧ ಬೌಲಿಂಗ್, ಸರಣಿಯಲ್ಲಿ ಇದೇ ಮೊದಲಬಾರಿಗೆ ಶ್ರೇಷ್ಟ ಮಟ್ಟದ ಫೀಲ್ಡಿಂಗ್, ಜ್ಯಾಕ್ ಕಾಲಿಸ್ ಮತ್ತು ರಾಬಿನ್ ಉತ್ತಪ್ಪ ಅವರ ಜುಗಲಬಂಧಿ ನೆರವಿನಿಂದ ಬೆಂಗಳೂರು ರಾಯಲ್ ಚ್ಯಾಲೆಂಜರ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಇನ್ನೂ 11 ಎಸೆತ ಬಾಕಿ ಇರುವಾಗಲೇ 9 ವಿಕೆಟ್ ಗಳಿಂದ ಸೋಲಿಸಿ ಅಗ್ರ ನಾಲ್ಕು ತಂಡಗಳ ಸ್ಥಾನಕ್ಕೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ ನಿಗದಿತ ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಜಯಸೂರ್ಯ 52, ಬ್ರಾವೋ 50 ಮತ್ತು ಅಭಿಷೇಕ್ ನಾಯರ್ 29 ರನ್ ಗಳಿಸಿದರು. ಬೆಂಗಳೂರು ತಂಡದ ಪರವಾಗಿ ಡಿಲೋನ ಪ್ರೀಜ್ ಮೂರು ವಿಕೆಟ್ ಮತ್ತು ವ್ಯಾನ್ ಮರ್ವೇ ಒಂದು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ ವಾಸಿಂ ಜಾಫರ್ ಅವರ ವಿಕೆಟ್ ಬೇಗನೆ ಕಳೆದುಕೊಂಡರೂ ಕಾಲಿಸ್ ಮತ್ತು ಉತ್ತಪ್ಪ ಅವರ ಸಮಯೋಜಿತ ಆಟದಿಂದ ಕೇವಲ ಒಂದು ವಿಕೆಟ್ ಕಳೆದುಕೊಂಡು ಸುಲಭ ಜಯ ಸಾಧಿಸಿತು. ಕಾಲಿಸ್ 69 ಮತ್ತು ಉತ್ತಪ್ಪ 66 ರನ್ ಗಳಿಸಿದರು. ಅಪಾರ ಸಂಖ್ಯೆಯಲ್ಲಿ ನೆರಿದ್ದಿದ್ದ ಅಭಿಮಾನಿಗಳು ಕನ್ನಡ ನಾಮಫಲಕ ಪ್ರದರ್ಶಿಸುವ ಮೂಲಕ ಬೆಂಗಳೂರು ತಂಡವನ್ನು ಹುರಿದುಂಬಿಸಿದರು. ಪಂದ್ಯಶ್ರೇಷ್ಟ ಜ್ಯಾಕ್ ಕಾಲಿಸ್.
(ದಟ್ಸ್ ಕ್ರೀಡಾವಾರ್ತೆ)
ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಗೆ ಜಯ
ಪೀಟರ್ ಸನ್ ರಾಯಲ್ ಚಾಲೆಂಜರ್ಸ್ ನ ಕ್ಯಾಪ್ಟನ್











Click it and Unblock the Notifications