ನಮಗೇಕೆ ಪದ್ಮ ಪ್ರಶಸ್ತಿ ಇಲ್ಲ: ವಿಜೇಂದರ್, ಸುಶೀಲ್
ನವದೆಹಲಿ, ಜ. 27 : ಬೀಜಿಂಗ್ ಒಲಿಪಿಂಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ನಲ್ಲಿ ಪದಕ ಗಳಿಸುವ ಮೂಲಕ ಭಾರತೀಯರೆಲ್ಲರೂ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದ ವಿಜೇಂದರ್ ಸಿಂಗ್ ಮತ್ತು ಸುಶೀಲ್ ಕುಮಾರ್ ಅವರಿಗೆ ತೀವ್ರ ನಿರಾಶೆ ಉಂಟಾಗಿದೆ. 2008ರ ಸಾಲಿನ ಪದ್ಮಶ್ರೀ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಈ ಇಬ್ಬರಿಗೆ ಪ್ರಶಸ್ತಿ ಸಿಗದಿರುವುದು ಅವರ ನಿರಾಶೆಗೆ ಪ್ರಮುಖ ಕಾರಣವಾಗಿದೆ.
ಬಹಿರಂಗವಾಗಿ ತಮ್ಮ ಅಸಮಾಧಾನ ತೋಡಿಕೊಂಡಿರುವ ಕುಸ್ತಿ ಪಟು ಸುಶೀಲ್ ಕುಮಾರ್, ಈ ಸಲದ ಪದ್ಮಶ್ರೀ ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಪಟ್ಟಿಯಿಂದ ನನ್ನ ಹೆಸರು ಮಾಯವಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಭಾರತೀಯರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ ನಮಗೆ ಸರ್ಕಾರದ ಈ ರೀತಿ ಅವಮಾನ ಮಾಡಬಾರದು ಎಂದು ಕಿಡಿಕಾರಿದ್ದಾರೆ. ಒಲಿಂಪಿಕ್ಸ್ ಪ್ರಶಸ್ತಿ ನೀಡುವಲ್ಲಿ ತಾರತಮ್ಯ ಎಣಿಸಲಾಗಿದೆ. ಕಾಣದ ಕೈಗಳಿಂದ ಇದರಲ್ಲಿ ಬಲವಾಗಿ ಕೆಲಸ ಮಾಡಿವೆ ಎಂದು ಅವರು ಆರೋಪಿಸಿದ್ದಾರೆ.
ಬಾಕ್ಸಿಂಗ್ ಪಟು ವಿಜೇಂದರ್ ಕೂಡಾ ಇದೇ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಕ್ರಿಕೆಟ್ಟಿಗ ಮಹೇಂದ್ರ ಸಿಂಗ್ ಧೋನಿ, ಹರ್ಭಜನ್ ಸಿಂಗ್ ಹಾಗೂ ನಟಿ ಐಶ್ವರ್ಯ ರೈ ಗಿಂತ ನಾವು ಯಾವುದರಲ್ಲಿ ಕಡಿಮೆ ಸಾಧನೆ ಮಾಡಿದ್ದೇವೆ. ಒಲಿಂಪಿಕ್ಸ್ ಪದವಿ ಗಳಿಸಿರುವ ಅಭಿನವ್ ಬಿಂದ್ರಾಗೆ ಪದ್ಮವಿಭೂಷಣ ನೀಡುವುದಾದರೆ ನಾವು ಕೂಡ ಅದೇ ಕ್ರೀಡಾಕೂಟದಲ್ಲಿ ಪದಕ ಗಳಿಸಿರುವೆ, ನಮಗೇಕೆ ಪ್ರಶಸ್ತಿ ಇಲ್ಲ ಎಂದು ಪ್ರಶ್ನಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪದ್ಮವಿಭೂಷಣ ಇಸ್ರೊಸಿಬ್ಬಂದಿಗೆ ಅರ್ಪಣೆ: ನಾಯರ್











Click it and Unblock the Notifications