ಬುಧವಾರ ಕಚೇರಿ, ಶಾಲೆಗೆ ರಜಾನಾ?
ಬೆಂಗಳೂರು, ಜ. 27 : ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ನಿಧನದ ದೆಸೆಯಿಂದಾಗಿ ಸರಕಾರಿ ಕಚೇರಿಗಳಿಗೆ, ಶಾಲಾಕಾಲೇಜುಗಳಿಗೆ ನಾಳೆ ಅಂದರೆ ಬುಧವಾರ ರಜೆ ಘೋಷಿಸಲಾಗಿದೆಯೇ ಎಂದು ವಿಚಾರಿಸಿ ನಮ್ಮ ವೆಬ್ ಜಾಲಕ್ಕೆ ಕರೆಗಳು ಬರುತ್ತಿವೆ.
ಇದುವರೆವಿಗೆ ಅಂಥ ಯಾವುದೇ ನಿರ್ಧಾರವನ್ನು ಕೇಂದ್ರ ಸರಕಾರವಾಗಲೀ ರಾಜ್ಯ ಸರಕಾರವಾಗಲೀ ಪ್ರಕಟಿಸುರುವುದಿಲ್ಲ. ಈ ಬಗ್ಗೆ ರಾಜ್ಯ ಸರಕಾರದ ಉನ್ನತ ಅಧಿಕಾರಿಯೊಬ್ಬರನ್ನು ವಿಚಾರಿಸಿದಾಗ 'ನಮಗೆ ಯಾವ ಸೂಚನೆಯೂ ಬಂದಿಲ್ಲ' ಎಂದಷ್ಟೆ ಹೇಳಿದರು.
ಅವರು ಅಂದಾಜು ಮಾಡುವಂತೆ ಮಾಜಿ ರಾಷ್ಟ್ರಪತಿಗಳು ನಿಧನರಾದಾಗ ಶೋಕಾಚರಣೆಗಳು ಇರುತ್ತವೇ ವಿನಾ ರಜೆ ಘೋಷಿಸುವ ಸಾಧ್ಯತೆಗಳಿಲ್ಲ. ಇಷ್ಟಕ್ಕೂ ಕಳೆದ ಎರಡು ದಿವಸ ರಜೆಯಲ್ಲಿ ಮಲಗಿದ್ದ ಕಚೇರಿಗಳಿಗೆ ಮತ್ತೆ ರಜೆ ಕೊಡುವುದರಲ್ಲಿ ಅರ್ಥವಿಲ್ಲ ಎಂಬುದು ಅವರ ವೈಯಕ್ತಿಕ ಅಭಿಪ್ರಾಯ.
ರಜೆ ಘೋಷಣೆ ಬಗೆಗೆ ಬರುವ ಯಾವುದೇ ಅಧಿಕೃತ ಮಾಹಿತಿ ತಡವಾಗಿ ಬಂದಲ್ಲಿ ಇದೇ ಪುಟದಲ್ಲಿ ಪ್ರಕಟಿಸಲಾಗುವುದು- ಸಂಪಾದಕ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ












Click it and Unblock the Notifications