ತೆಲಗಿ,ಆತನಿಗೆ ನೆರವಾದ ವೈದ್ಯರಿಬ್ಬರು 7ವರ್ಷ ಜೈಲಿಗೆ
ಬೆಂಗಳೂರು : ಬಹುಕೋಟಿ ಛಾಪ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ಮತ್ತು ಇಬ್ಬರು ವೈದ್ಯರಿಗೆ, ವಿಶೇಷ ಸಿಬಿಐ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಗುರುವಾರ ಶಿಕ್ಷೆಯನ್ನು ಪ್ರಕಟಿಸಿರುವ ನ್ಯಾಯಲಯ, ತೆಲಗಿಗೆ ಜೈಲಿನ ಜೊತೆಗೆ 25ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ವ್ಯೆದ್ಯಕೀಯ ಕಾರಣಗಳಿಂದ ತೆಲಗಿ ಜಾಮೀನು ಪಡೆಯಲು ಪೂರಕವಾಗುವಂತೆ, ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಡಾ.ಜ್ಲಾನೇಂದ್ರ ಮತ್ತು ಡಾ.ಚಂದ್ರಕೇಶವ ಎಂಬ ಇಬ್ಬರು ಸರ್ಕಾರಿ ವೈದ್ಯರು ಶಿಕ್ಷೆಗೆ ಗುರಿಯಾಗಿದ್ದಾರೆ.
ಛಾಪಾ ಹಗರಣದ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ತೆಲಗಿ, ಪ್ರಸ್ತುತ ಪುಣೆ ಜೈಲಿನಲ್ಲಿದ್ದಾನೆ. ವಿಡಿಯೋ ಟೆಲಿ ಕಾನ್ಫರೆನ್ಸ್ ಮೂಲಕ ತೆಲಗಿ, ನ್ಯಾಯಾಂಗ ವಿಚಾರಣೆಯಲ್ಲಿ ಭಾಗವಹಿಸಿದ್ದ.
(ಯುಎನ್ಐ)












Click it and Unblock the Notifications