ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆ ರಚನೆಗೆ ರಾಜ್ಯ ಸಂಪುಟ ಅಸ್ತು

ಬೆಂಗಳೂರು : ರಾಮನಗರ ಮತ್ತು ಚಿಕ್ಕಬಳ್ಳಾಪುರ ಎರಡು ಹೊಸ ಜಿಲ್ಲೆಗಳಾಗಿ ರಚನೆಯಾಗಲಿವೆ.

ಕೋಲಾರ ಜಿಲ್ಲೆ ಇಬ್ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳನ್ನೊಳಗೊಂಡ ರಾಮನಗರ ಹೊಸ ಜಿಲ್ಲೆಗಳಾಗಿ ರೂಪುಗೊಳ್ಳಲಿವೆ ಎಂದು ಗೃಹ ಸಚಿವ ಎಂ.ಪಿ.ಪ್ರಕಾಶ್ ಸಂಪುಟ ಸಭೆಯ ನಂತರ ಇಂದು ಸುದ್ದಿಗಾರರಿಗೆ ತಿಳಿಸಿದರು.

1514 ಗ್ರಾಮ, 6 ತಾಲೂಕುಗಳನ್ನೊಳಗೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಜನಸಂಖ್ಯೆ 11.49 ಲಕ್ಷ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಿಧಾನಸಭಾ ಕ್ಷೇತ್ರವಾದ ರಾಮನಗರದಲ್ಲಿ 827 ಗ್ರಾಮಗಳಿದ್ದು, 10.08 ಲಕ್ಷ ಜನಸಂಖ್ಯೆ ಹೊಂದಿದೆ. ಹೊಸ ಜಿಲ್ಲೆಗಳಿಗೆ ಮೂಲಸೌಕರ್ಯ ಒದಗಿಸಲು, ಹೊಸ ಕಚೇರಿ ಸ್ಥಾಪನೆ ಮತ್ತು ವಾಹನ ಕೊಳ್ಳಲು 72.58 ಕೋಟಿ ರು.ಗಳನ್ನು ತೆಗೆದಿರಿಸಲಾಗಿದೆ ಎಂದು ಅವರು ಹೇಳಿದರು.

ಇವೆರಡು ಜಿಲ್ಲೆಗಳ ಸೇರ್ಪಡೆಯಿಂದ ಕರ್ನಾಟಕದ ಜಿಲ್ಲೆಗಳ ಸಂಖ್ಯೆ 29ಕ್ಕೇರಲಿದೆ. ಆದರೆ, ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳ ವಿಭಾಗಿಸುವ ಪ್ರಕ್ರಿಯೆಯನ್ನು ಸ್ಥಳೀಯ ನಾಯಕರ ವಿರೋಧದಿಂದಾಗಿ ತಡೆಹಿಡಿಯಲಾಗಿದೆ ಎಂದು ಅವರು ತಿಳಿಸಿದರು.

ಹೊಸ ಇಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ : ರಾಮನಗರ, ಹೂವಿನಹಡಗಲಿ, ಕುಶಾಲನಗರ, ರಾಯಚೂರು ಮತ್ತು ಹಾವೇರಿಯಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಲೂ ಸಂಪುಟ ಅನುಮತಿ ನೀಡಿದೆ ಎಂದು ಪ್ರಕಾಶ್ ಈ ಸಂದರ್ಭದಲ್ಲಿ ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+