ಮುಖ್ಯಮಂತ್ರಿ ಚಂದ್ರು ಮತ್ತು ದೇವೇಗೌಡ ಗುಸುಗುಸು
ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಬಿಜೆಪಿ ನಾಯಕ ಮುಖ್ಯಮಂತ್ರಿ ಚಂದ್ರು ಭೇಟಿ ಹಲವಾರು ಊಹಾಪೋಹಗಳನ್ನು ಹುಟ್ಟುಹಾಕಿದೆ.
ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಬುಧವಾರವಷ್ಟೆ ನಗರಕ್ಕೆ ಆಗಮಿಸಿದ್ದಾರೆ. ಅದೇ ದಿನ ದೇವೇಗೌಡರು ಮುಖ್ಯಮಂತ್ರಿ ಚಂದ್ರು ಮನೆಗೆ ಭೇಟಿ ನೀಡಿದ್ದರಲ್ಲಿ ವಿಶೇಷ ಅರ್ಥವಿದೆ ಎಂದು ರಾಜಕೀಯ ವಲಯದಲ್ಲಿಬಿಸಿ ಚರ್ಚೆ ಆರಂಭವಾಗಿದೆ.
ಮುಖ್ಯಮಂತ್ರಿ ಚಂದ್ರು ಅವರನ್ನು ಜೆಡಿಎಸ್‌ಗೆ ಕರೆತಂದು ಪ್ರಮುಖ ಹುದ್ದೆ ನೀಡಲಾಗುವುದು. ಇದು ಜೆಡಿಎಸ್ ಮತ್ತು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲಎಂಬುದರ ಮುನ್ಸೂಚನೆ ಎಂಬಮಾತುಗಳು ಕೇಳಿಬಂದಿವೆ.
ಅತೃಪ್ತ ಬಿಜೆಪಿ ಶಾಸಕರ ಮೂಲಕ ಬಿಜೆಪಿ ಒಡೆಯಲುದೇವೇಗೌಡ ಯತ್ನಿಸುತ್ತಿದ್ದಾರೆ. ದೇವೇಗೌಡರ ಹೊಸ ಆಟದ ಮೊದಲ ಅಧ್ಯಾಯವಿದು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಈ ಭೇಟಿ ಹಿಂದಿನ ರೂವಾರಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗದಿರುವಂತೆ ಮಾಡಲು ಅನಂತ್‌ಕುಮಾರ್ ಈ ಯೋಜನೆ ರೂಪಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ನೀವು ಒಂಟಿಯಲ್ಲ.. ಪಕ್ಷ ಮತ್ತು ಸರ್ಕಾರದಲ್ಲಿ ನಿಮಗೆ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ನಿಮಗೆ ಸೂಕ್ತ ಸ್ಥಾನ ಮಾನ ನೀಡುವಂತೆ ಜೆಡಿಎಸ್ ಷರತ್ತು ಹಾಕಲಿದೆ. ನೀವು ಒಂಟಿಯಲ್ಲ.. ನಿಮ್ಮೊಂದಿಗೆ ನಾವಿದ್ದೇವೆ ಎಂದು ದೇವೇಗೌಡರು, ಮುಖ್ಯಮಂತ್ರಿ ಚಂದ್ರುಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಚಂದ್ರು ಹಳೆಯ ಗೆಳೆಯ.ಉಪಾಹಾರಕ್ಕೆ ಕರೆದಿದ್ದರು, ಹೋಗಿದ್ದೆ ಅಷ್ಟೆ. ಯಡಿಯೂರಪ್ಪನವರು ಕರೆದರೂ ಹೋಗುತ್ತೇನೆ. ಭೇಟಿ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications