Tricolor Barfi Recipe: ತ್ರಿವರ್ಣ ಬರ್ಫಿ ತಯಾರಿಸಿ ಮನೆಯವರಿಂದ ಮೆಚ್ಚುಗೆ ಪಡೆಯಿರಿ
ನಾವು ಇಂದು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ. ಸಾಮಾನ್ಯವಾಗಿ ಈ ದಿನ ನಾವೆಲ್ಲಾ ಸಿಹಿ ಹಂಚಿ ಸಂಭ್ರಮಿಸುತ್ತೇವೆ. ಸ್ವಾತಂತ್ರ್ಯ ದಿನ ಪ್ರತಿಯೊಬ್ಬ ಭಾರತೀಯನಿಗೂ ಬಹಳ ಮುಖ್ಯವಾದ ದಿನವಾಗಿದೆ. ಈ ದಿನ ನೀವು ನಿಮ್ಮ ಕುಟುಂಬ ಸದಸ್ಯರಿಗೆ ಸಿಹಿತಿಂಡಿಗಳನ್ನು ತಯಾರಿಸಿಕೊಡಲು ಬಯಸಿದ್ದರೆ ತ್ರಿವರ್ಣ ಸಿಹಿಯನ್ನು ತಯಾರಿಸಿ.
ಸಾಮಾನ್ಯವಾಗಿ ಮನೆಯಲ್ಲಿ ವಿಶೇಷ ದಿನಗಳಲ್ಲಿ ಪಾಯಸ, ಕೇಸರಿಬಾತ್ ಮಾಡುವುದು ರೂಢಿ. ಆದರೆ ಅದರ ಬದಲಿಗೆ ಇಂದು ಮನೆಯಲ್ಲಿ ದೇಶಭಕ್ತಿಯನ್ನು ವ್ಯಕ್ತಪಡಿಸಲು ತ್ರಿವರ್ಣ ಬರ್ಫಿ ತಯಾರಿಸಿ. ನೀವು ಇದನ್ನು ಮಾಡಿದಾಗ ಮಕ್ಕಳು ಖುಷಿಯಿಂದ ಅದನ್ನು ಸೇವಿಸುತ್ತಾರೆ. ಜೊತೆಗೆ ಇದರಿಂದ ಮನೆ ಮಂದಿಯೆಲ್ಲರನ್ನು ನೀವು ಖುಷಿ ಪಡಿಸಬಹುದು.

ಹಾಗಾದರೆ ತ್ರಿವರ್ಣ ಬರ್ಪಿಯನ್ನು ಹೇಗೆ ತಯಾರಿಸಬೇಕೆಂದು ತಿಳಿಯೋಣ. ನೀವು ಇದನ್ನು ಮನೆಯಲ್ಲಿ ಒಂದು ಬಾರಿ ಟ್ರೈ ಮಾಡಿ. ಇದರ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಹಾಗಾದರೆ ತಡ ಮಾಡುವುದು ಬೇಡ ತ್ರಿವರ್ಣ ಬರ್ಫಿ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಅಗತ್ಯವಿರುವ ಸಾಮಗ್ರಿಗಳು:
* ತುಪ್ಪ - 1/2 ಕಪ್
* ಮೈದಾ - 1 ಕಪ್
* ಸಕ್ಕರೆ - 2 ಕಪ್
* ನೀರು - 1 ಕಪ್
* ಏಲಕ್ಕಿ ಪುಡಿ - 1/4 ಟೀಸ್ಪೂನ್
* ಹಸಿರು ಆಹಾರ ಬಣ್ಣ - 1/4 ಟೀಸ್ಪೂನ್
* ಕೇಸರಿ ಆಹಾರ ಬಣ್ಣ - 1/4 ಟೀಸ್ಪೂನ್
ಪಾಕವಿಧಾನ:
* ಮೊದಲು ಬಾಣಲೆಯನ್ನು ಒಲೆಯ ಮೇಲೆ ಇಟ್ಟು 1/2 ಕಪ್ ತುಪ್ಪ ಹಾಕಿ ಬಿಸಿ ಮಾಡಿ.
* ನಂತರ 1 ಕಪ್ ಮೈದಾ ಹಿಟ್ಟನ್ನು ಹಾಕಿ 2 ನಿಮಿಷ ಉಂಡೆಗಳಿಲ್ಲದೆ ಚೆನ್ನಾಗಿ ಕದಡಿ.
* ನಂತರ ಇನ್ನೊಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ 2 ಕಪ್ ಸಕ್ಕರೆ ಮತ್ತು 1 ಕಪ್ ನೀರು ಹಾಕಿ ಬೆರೆಸಿ.
* ಸಕ್ಕರೆ ಚೆನ್ನಾಗಿ ಕರಗಿ ಗಟ್ಟಿಯಾಗಲು ಬಂದಾಗ ಮೈದಾ ಮಿಶ್ರಣವನ್ನು ಹಾಕಿ ಉಂಡೆಗಳಿಲ್ಲದೆ ಚೆನ್ನಾಗಿ ಕದಡಿ.
* ನಂತರ ಏಲಕ್ಕಿ ಪುಡಿಯನ್ನು ಹಾಕಿ ಬೆರೆಸಿ, ಸ್ಟವ್ ಆಫ್ ಮಾಡಿ.
* ನಂತರ ಈ ಮಿಶ್ರಣವನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು.
* ನಂತರ ಒಂದು ಭಾಗಕ್ಕೆ ಹಸಿರು ಆಹಾರ ಬಣ್ಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ.
* ಇನ್ನೊಂದರಲ್ಲಿ ಕೇಸರಿ ಫುಡ್ ಕಲರ್ ಹಾಕಿ ಚೆನ್ನಾಗಿ ಕಲಕಿ.
* ನಂತರ ಬಟರ್ ಪೇಪರ್ ಅನ್ನು ಟ್ರೇ ಮೇಲೆ ಹರಡಿ. ಅದರ ಮೇಲೆ ಮೊದಲು ಹಸಿರು ಮಿಶ್ರಣವನ್ನು ಹರಡಿ.

* ನಂತರ ಬಿಳಿ ವಿಶ್ರಣವನ್ನು ಹಾಕಿ ಹರಡಿ.
* ನಂತರ ಕೇಸರಿ ಬಣ್ಣದ ಮಿಶ್ರಣವನ್ನು ಹಾಕಿ ಸಮವಾಗಿ ಹರಡಿ.
* ಕೊನೆಗೆ ಟ್ರೇಯನ್ನು ತಲೆಕೆಳಗಾಗಿ ತಿರುಗಿಸಿ ಬಟರ್ ಪೇಪರ್ ತೆಗೆದು ಆಯತಾಕಾರದ ತುಂಡುಗಳಾಗಿ ಕತ್ತರಿಸಿದರೆ ರುಚಿಕರವಾದ ತ್ರಿವರ್ಣ ಬರ್ಫಿ ರೆಡಿ.












Click it and Unblock the Notifications