Pitru Dosha: ಎಷ್ಟೇ ಕೆಲಸ ಮಾಡಿದರೂ ಫಲ ಸಿಗುತ್ತಿಲ್ಲವೇ... ಕಾರಣ ಪಿತೃ ದೋಷ.. ಮುಕ್ತಿ ಹೇಗೆ ಗೊತ್ತಾ?
ಕೆಲವರು ಎಷ್ಟೇ ಕೆಲಸ ಮಾಡಿದರೂ ಫಲ ಸಿಗುವುದಿಲ್ಲ. ಯಾಕೆಂದರೆ ಆ ಕುಟುಂಬದ ಸದಸ್ಯರಿಗೆ ಪೂರ್ವಜರ ಆಶೀರ್ವಾದ ಇಲ್ಲದಿರಬಹುದು. ಹೀಗಾದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪಿತೃದೋಷವಿದೆ ಎಂದರ್ಥ.. ಈ ಸಂದರ್ಭದಲ್ಲಿ ಪಿತೃ ದೋಷವನ್ನು ತಡೆಯಲು ನೀವು ಕೆಲವು ಪರಿಹಾರಗಳನ್ನು ಅನುಸರಿಸಬೇಕು. ಹಾಗಾದರೆ ಪಿತೃ ದೋಷ ಅಂದರೆ ಏನು ಎನ್ನುವುದರ ಬಗ್ಗೆ ಈಗ ತಿಳಿಯೋಣ.
ಹಿಂದೂ ಧರ್ಮದಲ್ಲಿ ಮಹಾಲಯ ಪಕ್ಷ ಮತ್ತು ಪಿತೃ ಪಕ್ಷ ಬಹಳ ಮುಖ್ಯ. ಈ ಸಮಯದಲ್ಲಿ ಉಪವಾಸ ಮಾಡಿ ದರ್ಪಣ ಮಾಡಿದರೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಎಂಬುದು ಹಲವರ ನಂಬಿಕೆ. ಪಿತೃ ದೋಷವಿದ್ದರೆ ಆಗಾಗ ಮನೆಯಲ್ಲಿ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜಗಳ ಮುಕ್ತ ಜೀವನವನ್ನು ನಡೆಸಲು ಸಮಸ್ಯೆಗಳನ್ನು ನಿಖರವಾಗಿ ಗುರುತಿಸುವುದು ಮತ್ತು ಸಮಯಕ್ಕೆ ಅವುಗಳನ್ನು ಪರಿಹರಿಸುವುದು ಅತ್ಯಗತ್ಯ.

ಮಹಾಲಯ ಪಕ್ಷ ಎಂದರೇನು?
ಮಹಾ + ದೇವಾಲಯ ಎಂದರೆ ಮಹಾಲಯ ಎಂದರೆ ಆತ್ಮಗಳು ಸೇರುವ ಸ್ಥಳ. ಸರಳ ರೀತಿಯಲ್ಲಿ ಹೇಳುವುದಾದರೆ, ಪೂರ್ವಜರ ಆತ್ಮಗಳು ಭೂಮಿಗೆ ಬಂದು ವಿಲೀನಗೊಳ್ಳುವ ದಿನಗಳನ್ನು ಮಹಾಲಯ ಪಕ್ಷವೆಂದು ಕರೆಯಲಾಗುತ್ತದೆ. ಅಂದಹಾಗೆ ಈ ವರ್ಷ ಸೆಪ್ಟೆಂಬರ್ 17 ರಂದು ಮಹಾಲಯ ಪಕ್ಷ ಆರಂಭವಾಯಿತು. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 17 ರವರೆಗಿನ ಅವಧಿಯನ್ನು ಮಹಾಲಯ ಪಕ್ಷ ಎಂದು ಕರೆಯಲಾಗುತ್ತದೆ. ಮಹಾಲಯ ಪಕ್ಷವನ್ನು ಅನುಸರಿಸುವ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ಅಕ್ಟೋಬರ್ 2 ರಂದು ಬರುತ್ತದೆ. ಈ 15 ದಿನಗಳು ಪಿತೃಗಳ ಸಮಯ ಎನ್ನಲಾಗುತ್ತದೆ.
ಪಿತೃ ದೋಷದ ಲಕ್ಷಣಗಳು
ಜೀವನದಲ್ಲಿ ಪಿತೃ ದೋಷವಿದ್ದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ನೀವು ಎಷ್ಟೇ ಕಷ್ಟಪಟ್ಟರೂ ನಿರಂತರ ನಷ್ಟಗಳು, ಯಾವುದರಲ್ಲೂ ಯಶಸ್ಸು ಇಲ್ಲದೇ ಇರುವುದು, ಮನೆಯಲ್ಲಿ ಅನೇಕ ಜಗಳಗಳು ನಡೆಯುವುದು, ಇವೆಲ್ಲಾ ಲಕ್ಷಣಗಳು ನಿಮ್ಮ ಸತ್ತ ಪೂರ್ವಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದರ್ಥ. ಆದ್ದರಿಂದ ಮಹಾಲಯ ಪಕ್ಷದಲ್ಲಿ ಪಿತೃಗಳು ಭೂಮಿಗೆ ಬಂದಾಗ ಪೂಜಿಸುವುದರಿಂದ ಪಿತೃ ಶಾಪ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಪೂರ್ವಜರನ್ನು ಮೆಚ್ಚಿಸಲು ಏನು ಮಾಡಬೇಕು?
ಮಹಾಲಯ ಪಕ್ಷದ ಸಮಯದಲ್ಲಿ ಭೂಮಿಗೆ ಬರುವ ನಮ್ಮ ಪೂರ್ವಜರು ಆಲದ ಮರದಲ್ಲಿ ನೆಲೆಸುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದಲೇ ಈ ಸಮಯದಲ್ಲಿ ಆಲದ ಮರವನ್ನು ನೀರಿನಿಂದ ಪೂಜಿಸುವುದು ಒಳ್ಳೆಯದು ಎನ್ನುತ್ತಾರೆ ವಿದ್ವಾಂಸರು. ಹಾಗೆಯೇ ಏಳು ಬಾರಿ ವೃಕ್ಷದ ಸುತ್ತ ಸುತ್ತುವುದು ಕೂಡ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ವಿದ್ವಾಂಸರು. ಮರಕ್ಕೆ ಎಳ್ಳು ನೀರು ಚಿಮುಕಿಸಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಪೂಜಿಸಿದರೆ ಸತ್ತ ಪೂರ್ವಜರಿಗೆ ಸಂತೋಷವಾಗುತ್ತದೆ ಎಂಬ ನಂಬಿಕೆ ಇದೆ.
ಇದರೊಂದಿಗೆ ಮನೆಯಲ್ಲಿ ದೀಪವನ್ನು ಹಚ್ಚುವುದು ಕೂಡ ಉತ್ತಮ ಫಲಿತಾಂಶವನ್ನು ನೀಡುತ್ತದೆ. ದಕ್ಷಿಣ ಪೂರ್ವಜರ ದಿಕ್ಕು ಎಂದು ಹೇಳಲಾಗುತ್ತದೆ. ಆದ್ದರಿಂದ ಆ ಸ್ಥಳದಲ್ಲಿ ದೀಪವನ್ನು ಬೆಳಗಿಸುವುದರಿಂದ ಅದೃಷ್ಟ ಹೆಚ್ಚಾಗಲಿದೆ. ಪಿತೃ ಪಕ್ಷದಂದು ಪ್ರತಿದಿನ ತರ್ಪಣವನ್ನು ಮಾಡುವುದರಿಮದಲೂ ಪಿತೃದೋಷ ನಿವಾರಣೆಯಾಗುತ್ತದೆ.
ನಿಮ್ಮ ಪೂರ್ವಜರನ್ನು ಸ್ಮರಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಸೂರ್ಯನಲ್ಲಿ ಸ್ನಾನ ಮಾಡಿ. ತಂದೆ ಬದುಕಿಲ್ಲದಿದ್ದಲ್ಲಿ ಅಥವಾ ತಂದೆ-ತಾಯಿ ಅವರಿಬ್ಬರೂ ಇಲ್ಲದಿದ್ದಲ್ಲಿ ದಕ್ಷಿಣ ದಿಕ್ಕಿನಲ್ಲಿ ಪ್ರತಿದಿನ ತರ್ಪಣವನ್ನು ಮಾಡಬೇಕು. ಈ ತರ್ಪಣವನ್ನು ಯಾವಾಗಲೂ ಹಾಲು ಮತ್ತು ಎಳ್ಳಿನ ನೀರಿನಿಂದ ಬೆರೆಸಿ ಮಾಡಬೇಕು.
ಪಿತೃ ಪಕ್ಷದಲ್ಲಿ ಹಸುಗಳಿಗೆ ಪ್ರತಿದಿನ ಹುಲ್ಲು ನೀಡಬೇಕು. ಅವುಗಳಿಗೆ ಹಣ್ಣುಗಳನ್ನು ನೀಡಬಹುದು. ಹೀಗೆ ಮಾಡುವುದರಿಂದ ಪೂರ್ವಿಕರ ಆಶೀರ್ವಾದ ಪಡೆಯಬಹುದು. ಪಿತೃ ಪಕ್ಷದಲ್ಲಿ ಹಸುವಿಗೆ ಆಹಾರ ನೀಡುವುದರಿಂದ ಶ್ರಾದ್ಧ ಕರ್ಮದ ಲಾಭವು ಪೂರ್ಣವಾಗಿ ಲಭಿಸುತ್ತದೆ.
ಪೂರ್ವಜರ ಆತ್ಮವು ಪ್ರಸನ್ನವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಒಳ್ಳೆಯದು ಸಂಭವಿಸುತ್ತದೆ. ನೀವು ಎಲ್ಲದರಲ್ಲಿಯೂ ಯಶಸ್ಸು ಗಳಿಸುತ್ತೀರಿ. ನಿಮ್ಮ ಜೀವನದ ಸಂತೋಷದಿಮದ ಕೂಡಿರುತ್ತದೆ. ಪೂರ್ವಜರ ಆಶೀರ್ವಾದಿಂದ ಎಲ್ಲಾ ಸಮಸ್ಯೆಗಳೂ ದೂರವಾಗುತ್ತವೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications