Get Updates
Get notified of breaking news, exclusive insights, and must-see stories!

ಪ್ರೀತಿ..ಪ್ರೇಮ..ದೈಹಿಕ ಸಂಪರ್ಕ: ಯುವ ಜನತೆ ಆತ್ಮಹತ್ಯೆ ಮಾಡಿಕೊಳ್ಳುವುದು ಏಕೆ?

ಇವತ್ತಿನ ತಂತ್ರಜ್ಞಾನದ ಯುಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿಲ್ಲ ಮಕ್ಕಳಿಂದ ಆರಂಭವಾಗಿ ವೃದ್ಧರವರೆಗೆ ಯಾವುದಾದರೊಂದು ಚಿಕ್ಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಜನ ಬಂದು ಬಿಟ್ಟಿದ್ದಾರೆ. ಇದಕ್ಕೆ ಕಾರಣಗಳು ಅನೇಕ ಇವೆಯಾದರೂ ಬದುಕನ್ನು ಪಾಸಿಟಿವ್ ಆಗಿ ಸ್ವೀಕರಿಸದಿರುವುದೇ ಬಹುಮುಖ್ಯ ಕಾರಣ ಎಂಬುದನ್ನು ತಳ್ಳಿಹಾಕಲಾಗದು.

ಕೆಲವು ತಂದೆ ತಾಯಿಗಳು ಜೀವನದಲ್ಲಿ ತಾವೇನು ಆಗಲಿಲ್ಲವೋ ಅದನ್ನು ಮಕ್ಕಳು ಆಗಬೇಕೆಂದು ಬಯಸುತ್ತಾರೆ. ಹೀಗಾಗಿ ಮಕ್ಕಳ ಮೇಲೆ ಒತ್ತಡ ತರುತ್ತಾರೆ. ಇದರ ಪರಿಣಾಮ ಮಾನಸಿಕವಾಗಿ ದುರ್ಬಲವಾಗುವ ಮಕ್ಕಳು ತಮ್ಮ ಮುಂದಿರುವ ಸಮಸ್ಯೆ ಎದುರಿಸಲಾಗದೆ ಅತ್ಮಹತ್ಯೆಗೆ ಶರಣಾಗಿ ಬಿಡುತ್ತಾರೆ.

Life Tips Why Are The Cases Of Suicide Among Young People Increasing Recently

ಇನ್ನು ಹರೆಯಕ್ಕೆ ಕಾಲಿಡುವ ಯುವಕ ಯುವತಿಯರು ಓದಿ ಬದುಕನ್ನು ಕಟ್ಟಿಕೊಳ್ಳುವ ಕಾಲದಲ್ಲಿ ಪ್ರೀತಿ ಪ್ರೇಮದ ಜೊತೆಗೆ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡು ಎಂಜಾಯ್ ಹೆಸರಲ್ಲಿ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಇದರ ಜತೆಗೆ ಡ್ರಗ್ಸ್, ಗಾಂಜಾಕ್ಕೆ ಬಲಿಯಾಗಿ ಹತಾಶರಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದು ಬಿಡುತ್ತಾರೆ.

ಆತ್ಮಹತ್ಯೆ ಸಂಖ್ಯೆ ಶೇಕಡವಾರು ಹೆಚ್ಚಳ

ಇತ್ತೀಚೆಗಿನ ವರ್ಷಗಳಲ್ಲಿ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಜನಸಂಖ್ಯೆ ಬೆಳವಣಿಗೆ ದರವನ್ನು ಮೀರಿಸುತ್ತಿದೆ ಎಂಬುದು ಹೊಸ ವರದಿಯೊಂದರಿಂದ ಬಹಿರಂಗಗೊಂಡಿದ್ದು ಇದು ನಾಗರಿಕೆ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ವರದಿಯಲ್ಲಿ ಒಟ್ಟಾರೆ ಆತ್ಮಹತ್ಯೆ ಸಂಖ್ಯೆಗಳು ವಾರ್ಷಿಕವಾಗಿ ಶೇ 2 ರಷ್ಟು ಹೆಚ್ಚಾಗಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಶೇ.4ರಷ್ಟು ಹೆಚ್ಚಾಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು ಕಂಡು ಬಂದಿದೆ.

Life Tips Why Are The Cases Of Suicide Among Young People Increasing Recently

2022ಕ್ಕೆ ಹೋಲಿಸಿದರೆ ಒಟ್ಟು ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ 53 ಪ್ರತಿಶತ ಪುರುಷ ವಿದ್ಯಾರ್ಥಿಗಳಿದ್ದರು, 2021 ಮತ್ತು 2022 ರ ನಡುವೆ ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲಿ ಶೇ. 6 ರಷ್ಟು ಇಳಿಕೆ ಕಂಡುಬಂದಿದೆ, ಆದರೆ ವಿದ್ಯಾರ್ಥಿನಿಯರ ಆತ್ಮಹತ್ಯೆಗಳು ಶೇ.7 ರಷ್ಟು ಹೆಚ್ಚಾಗಿದೆ. ಇದು ಭಯ ಬೀಳುವಂತೆ ಮಾಡಿದೆ. ಹೆಣ್ಮಕ್ಕಳು ಆತ್ಮಹತ್ಯೆಗೆ ಶರಣಾಗಳು ಹಲವು ಕಾರಣಗಳಿದ್ದು ಹೆಚ್ಚಿನ ಪ್ರಕರಣಗಳಲ್ಲಿ ಲವ್ ಸೆಕ್ಸ್ ಧೋಖಾ ಎದ್ದು ಕಾಣಿಸುತ್ತಿದೆ.

ವಿದ್ಯಾರ್ಥಿಗಳೇ ಆತ್ಮಹತ್ಯೆಗೆ ಶರಣಾಗುವುದೇಕೆ?

ಕಳೆದ ದಶಕದಲ್ಲಿ 0-24 ವರ್ಷ ವಯಸ್ಸಿನ ಮಕ್ಕಳ ಜನಸಂಖ್ಯೆಯು 582 ಮಿಲಿಯನ್ನಿಂದ 581 ಮಿಲಿಯನ್ಗೆ ಕುಸಿದಿದ್ದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂಖ್ಯೆ 6,654 ರಿಂದ 13,044 ಕ್ಕೆ ಏರಿದೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶಗಳು ಅತಿ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನವು 10 ನೇ ಸ್ಥಾನದಲ್ಲಿದೆ.

ಭಾರತದಲ್ಲಿ 15 ಮತ್ತು 24 ವರ್ಷದೊಳಗಿನ ಏಳು ಯುವಕರಲ್ಲಿ ಒಬ್ಬರು ಖಿನ್ನತೆಯ ಲಕ್ಷಣಗಳು ಮತ್ತು ನಿರಾಸಕ್ತಿ ಸೇರಿದಂತೆ ಮಾನಸಿಕ ಅಸಮತೋಲನ ಅನುಭವಿಸುತ್ತಿದ್ದಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶವು ಈಗ ಅತ್ಯಧಿಕ ವಿದ್ಯಾರ್ಥಿಗಳ ಆತ್ಮಹತ್ಯೆ ದರಗಳನ್ನು ಹೊಂದಿರುವ ಐದು ರಾಜ್ಯಗಳಲ್ಲಿ ಒಂದಾಗಿದೆ. ತಮಿಳುನಾಡು ಮತ್ತು ಜಾರ್ಖಂಡ್ ನಲ್ಲಿ ವಿದ್ಯಾರ್ಥಿಗಳ ಆತಹತ್ಯೆ ಪ್ರಮಾಣ ಹೆಚ್ಚಾಗಿದೆ.

ಆತ್ಮಹತ್ಯೆ ಕೂಡ ಒಂದು ರೋಗದಂತೆ

ಹಾಗಾದರೆ ಆತ್ಮಹತ್ಯೆ ತಡೆಯಲು ಸಾಧ್ಯವಿಲ್ಲವೆ ಎಂಬುದನ್ನು ನೋಡಿದ್ದೇ ಆದರೆ ಬಹುತೇಕ ಆತ್ಮಹತ್ಯೆಗೆ ದುಡುಕಿನ ನಿರ್ಧಾರ, ಮಾನಸಿಕ ದುರ್ಬಲತೆ, ಸಮಸ್ಯೆಯನ್ನು ಎದುರಿಸಿ ನಿಲ್ಲಲಾಗದ ದೌರ್ಬಲ್ಯಗಳು ಕಾರಣಗಳಾಗಿ ಬಿಡುತ್ತಿವೆ. ಹಾಗಾದರೆ ಆತ್ಮಹತ್ಯೆಯನ್ನು ತಡೆಯಲು ಏನು ಮಾಡಬೇಕು ಎಂಬುದನ್ನು ನೋಡಿದ್ದೇ ಆದರೆ ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಮಕ್ಕಳಲ್ಲಿ ಸಮಸ್ಯೆ ಎದುರಿಸುವ ಶಕ್ತಿಯನ್ನು ಬೆಳೆಸಬೇಕು.

ಇದೆಲ್ಲದರ ನಡುವೆ ಮನುಷ್ಯ ಜೀವಿತಾವಧಿಯಲ್ಲಿ ಆರೋಗ್ಯವಾಗಿರಬೇಕೆಂದುಕೊಳ್ಳುವುದು ಸಹಜ. ಏಕೆಂದರೆ ಆರೋಗ್ಯವಾಗಿದ್ದರೆ ಮಾತ್ರ ಬದುಕು ಇಲ್ಲದೆ ಹೋದರೆ ಏನಿದ್ದರೂ ಎಲ್ಲವೂ ಗೌಣವಾಗಿಬಿಡುತ್ತದೆ. ನಮ್ಮನ್ನು ಕಾಡುವ ಬಹಳಷ್ಟು ಕಾಯಿಲೆಗಳು ಹೊರಗಿನವರಿಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ ಔಷಧಿಯೂ ಇದೆ. ಆದರೆ ಬೇರೆಯವರಿಗೆ ಗೊತ್ತೇ ಆಗದೆ ತಮ್ಮಲ್ಲೇ ನೊಂದು, ಬೆಂದು, ಖಿನ್ನತೆಗೊಳಗಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಆತ್ಮಹತ್ಯೆ ಕೂಡ ರೋಗದಂತೆ ಭಾಸವಾಗ ತೊಡಗಿದೆ.

15ರಿಂದ29ರ ವಯೋಮಾನದವರಲ್ಲೇ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟಗಳು ಕಾರಣವಾಗಿದ್ದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಬೇರೆ, ಬೇರೆ ಕಾರಣಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬಹುದು. ಎಲ್ಲ ವಯೋಮಾನದವರು ಆತ್ಮಹತ್ಯೆ ಮಾಡಿಕೊಂಡರೂ ಹೆಚ್ಚಾಗಿ 15ರಿಂದ29ರ ವಯೋಮಾನದವರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಆತ್ಮಹತ್ಯೆಯ ಪ್ರಮುಖ ಚಿಹ್ನೆಗಳೆಂದರೆ ಸಾಯುವ ಬಗೆಗಿನ ಮಾತು, ಓದು, ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದು, ಮಾನಸಿಕ ಕಾಯಿಲೆಗಳು, ಕುಡಿತದ ವ್ಯಸನ, ಈ ಮೊದಲೇ ಆತ್ಮಹತ್ಯೆ ಪ್ರಯತ್ನ, ಕುಟುಂಬದಲ್ಲಿ ಆತ್ಮಹತ್ಯೆ ಪ್ರಕರಣ ನಡೆದಿದ್ದರೆ, ಹತಾಶೆ ಭಾವನೆ ಭವಿಷ್ಯದ ಬಗ್ಗೆ, ನಿರಾಶೆ ಅಸಹನೀಯ ಭಾವನೆ, ಮನಸ್ಸಿನ ಹೊಯ್ದಾಟ, ಹಠಾತ್ ಬದಲಾವಣೆ, ಬಂಡಾಯದ ವ್ಯಕ್ತಿತ್ವ, ನಿರಾಸಕ್ತಿ, ತನ್ನ ಬಗ್ಗೆಯೇ ನಿರ್ಲಕ್ಷ್ಯತನ, ಆಹಾರ, ನಿದ್ರೆಯಲ್ಲಿ ಬದಲಾವಣೆ ಇತ್ಯಾದಿಗಳಾಗಿವೆ.

ಮನಸ್ಸನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕು

ನಾವು ಶರೀರಿಕ ಆರೋಗ್ಯದ ಬಗ್ಗೆ ಮಾತ್ರ ಯೋಚಿಸದೆ ಮಾನಸಿಕ ಆರೋಗ್ಯದ ಬಗ್ಗೆಯೂ ಯೋಚಿಸಬೇಕು. ಮಾನಸಿಕ ಆರೋಗ್ಯ ದೃಢವಾಗಿದ್ದರೆ ಆತ್ಮಹತ್ಯೆಯಂತಹ ಆಲೋಚನೆಗಳು ನಮ್ಮನ್ನು ಸುಳಿಯದೆ, ಎಲ್ಲ ಸಮಸ್ಯೆಗಳನ್ನು ನಿಂತು ಎದುರಿಸುತ್ತೇನೆ ಎಂಬ ಮನೋ ಸ್ಥೈರ್ಯವನ್ನು ತುಂಬುತ್ತದೆ. ಅದು ಸಾಧ್ಯವಾಗಬೇಕಾದರೆ ನಾವು ಸದಾ ಒಳ್ಳೆಯದನ್ನೇ ಯೋಚಿಸುತ್ತಿರಬೇಕು. ನಾವು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸಿದ್ದೇ ಆದರೆ ಮನಸ್ಸು ಪ್ರಫುಲ್ಲವಾಗುವುದರೊಂದಿಗೆ ಆತ್ಮಹತ್ಯೆಯಂತಹ ಆಲೋಚನೆಗಳು ಬಾರದೆ ಎಲ್ಲವನ್ನು ಗೆಲ್ಲುವ ಶಕ್ತಿ ದೊರೆಯುತ್ತದೆ.

Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+