ದೀಪಾವಳಿಯಂದು ಮನೆಗೆ ಸಮೃದ್ಧಿ ಮತ್ತು ಸಂತೋಷ ತರಬಲ್ಲ ಅಡುಗೆ ಮಸಾಲೆಗಳು...
ದೀಪಾವಳಿ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬ. ಇನ್ನು ಕೆಲವೇ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಟಾಕಿ ಸಿಡಿಸಿ ಈ ಹಬ್ಬವನ್ನು ಆಚರಿಸುತ್ತಾರೆ. ಆರೋಗ್ಯಕರ ಮತ್ತು ಸಮೃದ್ಧ ಜೀವನಕ್ಕಾಗಿ ಲಕ್ಷ್ಮಿ ದೇವಿ ಮತ್ತು ಗಣೇಶನನ್ನು ಪೂಜೆ ಮಾಡುತ್ತಾರೆ.
ಈ ಹಬ್ಬವನ್ನು ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಆಚರಿಸಲು ಕೆಲವು ಮಾರ್ಗಗಳಿವೆ. ಹೌದು, ನಿಮ್ಮ ಮನೆಗೆ ಸಮೃದ್ಧಿ ಮತ್ತು ಸಂತೋಷದ ಅಲೆಯನ್ನು ತರಬಲ್ಲ ಕೆಲವು ಅಡಿಗೆ ಮಸಾಲೆಗಳಿವೆ. ಈ ಲೇಖನದಲ್ಲಿ ಆ ಮಸಾಲೆಗಳು ಯಾವುವು ಮತ್ತು ಈ ದೀಪಾವಳಿಯಲ್ಲಿ ಆ ಮಸಾಲೆಗಳೊಂದಿಗೆ ಅದೃಷ್ಟವನ್ನು ಹೇಗೆ ಪಡೆಯಬಹುದು ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಕೇಸರಿ
ನಿಮ್ಮ ಸೌಂದರ್ಯ ಆರೈಕೆಯಲ್ಲಿ ಬಹಳ ಮುಖ್ಯವಾದ ಪದಾರ್ಥ ಕೇಸರಿ. ಕೇಸರಿಯು ಅದರ ಆರೋಗ್ಯಕರ ಪ್ರಯೋಜನಗಳು ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಇದು ನಿಮ್ಮ ದೇಹ ಮತ್ತು ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುವುದಲ್ಲದೆ, ಆಧ್ಯಾತ್ಮಿಕವಾಗಿಯೂ ಸಹ ನಿಮಗೆ ಒಳಿತನ್ನು ಮಾಡುತ್ತದೆ. ಹೀಗಾಗಿ ದೇವರಿಗೆ ಕೇಸರಿಯನ್ನು ಅರ್ಪಿಸುವುದರಿಂದ ಕುಟುಂಬಕ್ಕೆ ಅದೃಷ್ಟ ಬರುತ್ತದೆ. ಏಕೆಂದರೆ ಕೇಸರಿಯನ್ನು ಶುದ್ಧತೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಕರೆಯಲಾಗುತ್ತದೆ.
ಲವಂಗ
ಲವಂಗವನ್ನು ದೀಪಾವಳಿಯ ಸಮಯದಲ್ಲಿ ತಯಾರಿಸುವ ಅಡುಗೆಯಲ್ಲಿ ಪರಿಮಳವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದು ರಕ್ಷಣೆ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ. ಆದ್ದರಿಂದ ಮನೆಯಿಂದ ಹೊರಡುವ ಮೊದಲು ಕೆಲವು ಲವಂಗವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಅಥವಾ ಲವಂಗವನ್ನು ಜಗಿಯುವುದು ಸಮೃದ್ಧಿಯನ್ನು ತರುತ್ತದೆ. ವಾಸ್ತವವಾಗಿ ಈ ದೀಪಾವಳಿಯಲ್ಲಿ ನೀವು ಕರ್ಪೂರದೊಂದಿಗೆ ಲವಂಗವನ್ನು ಸುಟ್ಟರೆ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಬಹುದು. ಜೊತೆಗೆ ಸಂತೋಷ ಮತ್ತು ಶಾಂತಿಯನ್ನು ಆಕರ್ಷಿಸಬಹುದು.
ಏಲಕ್ಕಿ
ಏಲಕ್ಕಿ ದೀಪಾವಳಿಯ ಸಮಯದಲ್ಲಿ ಸಿಹಿತಿಂಡಿಗಳು ಮತ್ತು ಪಾನೀಯಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಪರಿಮಳಯುಕ್ತ ಮಸಾಲೆಯಾಗಿದೆ. ದೀಪಾವಳಿ ಸಿಹಿ ಪ್ರಸಾದವನ್ನು ತಯಾರಿಸುವಾಗ ಇದನ್ನು ಬಳಕೆ ಮಾಡದವರೇ ಇಲ್ಲ. ಜ್ಯೋತಿಷ್ಯದಲ್ಲಿ ಇದು ಸಂತೋಷ ಮತ್ತು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ.

ಅದೃಷ್ಟವನ್ನು ಆಕರ್ಷಿಸುವ ಇನ್ನೊಂದು ವಿಧಾನವೆಂದರೆ ಕೆಲವು ಏಲಕ್ಕಿ ಬೀಜಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು. ಇದು ಆರ್ಥಿಕ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ದೀಪಾವಳಿಯಲ್ಲಿ ಏಲಕ್ಕಿಯನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ನಿಮ್ಮ ಮನೆಗೆ ಅದೃಷ್ಟವನ್ನು ತರುತ್ತದೆ.
ದಾಲ್ಚಿನ್ನಿ
ಸಾಮಾನ್ಯವಾಗಿ ದಾಲ್ಸಿನಿಯನ್ನು ಮಸಾಲೆಯುಕ್ತ ಅಕ್ಕಿ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ವಿವಿಧ ದೀಪಾವಳಿ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ಇದು ಉಷ್ಣತೆ, ಸಂಪತ್ತು ಮತ್ತು ಯೋಗಕ್ಷೇಮದೊಂದಿಗೆ ಸಂಬಂಧಿಸಿದೆ. ಜ್ಯೋತಿಷ್ಯದಲ್ಲಿ ದಾಲ್ಚಿನ್ನಿ ತುಂಡುಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ಆರ್ಥಿಕ ಬೆಳವಣಿಗೆ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ.












Click it and Unblock the Notifications