Skin Care Tips: ಮೊಡವೆ ಸಮಸ್ಯೆಗೆ ಇಲ್ಲಿದೆ 5 ಸರಳ ಮನೆಮದ್ದುಗಳು

ಇತ್ತೀಚಿನ ದಿನಗಳಲ್ಲಿ ಯುವಕರು ಮಾತ್ರವಲ್ಲದೆ ಹಿರಿಯರಲ್ಲಿಯೂ ಮೊಡವೆ ಸಮಸ್ಯೆ ಸಾಮಾನ್ಯವಾಗಿದೆ. ಹಾರ್ಮೋನ್ ಬದಲಾವಣೆ ಧೂಳು, ಮಾಲಿನ್ಯ, ಎಣ್ಣೆಯುಕ್ತ ಚರ್ಮ, ಒತ್ತಡ, ಮತ್ತು ತಪ್ಪಾದ ಆಹಾರ ಪದ್ಧತಿ ಮೊಡವೆಗಳಿಗೆ ಕಾರಣವಾಗುತ್ತವೆ. ಮನೆಯಲ್ಲೇ ಸಿಗುವ ಕೆಲವು ಸರಳ ಪದಾರ್ಥಗಳಿಂದ ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡಬಹುದು. ನೀವು ಈ ತರಹದ ಸಮಸ್ಯೆ ಎದುರಿಸುತ್ತಿದ್ದರೆ ಅದಕ್ಕೆ ಬೇಕಾದಂತಹ 5 ಹೊಮ್ ರೆಮಿಡೀಸ್ ಬಗ್ಗೆ ತಿಳಿದುಕೋಳಲೆಬೇಕಾದ ಅಂಶಗಳು.

1. ಅರಿಶಿನ ಮತ್ತು ಜೇನುತುಪ್ಪ

ಅರಿಶಿನದಲ್ಲಿ ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಒಂದು ಚಿಟಿಕೆ ಅರಿಶಿನಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿ ಮೊಡವೆ ಇರುವ ಜಾಗಕ್ಕೆ ಹಚ್ಚಿ. 15-20 ನಿಮಿಷಗಳ ಬಳಿಕ ತೊಳೆಯಿರಿ. ಇದರಿಂದ ಉರಿಯೂತ ಕಡಿಮೆಯಾಗಲು ಸಹಾಯವಾಗುತ್ತದೆ.

Pimples

2. ಅಲೋವೆರಾ ಜೆಲ್

ಅಲೋವೆರಾ ಚರ್ಮಕ್ಕೆ ತಂಪು ನಿಡುವ ಗುಣ ಹೊಂದಿದೆ, ತಾಜಾ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮಕ್ಕೆ ತಂಪು ನೀಡುವುದರ ಜೊತೆಗೆ ಮೊಡವೆಗಳಿಂದ ಉಂಟಾಗುವ ಕೆಂಪುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಬೇವಿನ ಎಲೆ ಪೇಸ್ಟ್

ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬಹುದು, ಬೇವಿನ ಎಲೆಗಳಲ್ಲಿ ಜೀವಾಣು ನಾಶಕ ಗುಣಗಳಿದ್ದು, ಮೊಡವೆಗಳನ್ನು ಕಡಿಮೆ ಮಾಡಲು ಸಹಕಾರಿ. ಇದು ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಹೊಸ ಮೊಡವೆ ಉಂಟಾಗದಂತ್ತೆ ತಡಿಯುತ್ತೆ.

4. ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್ ಅನ್ನು ನೇರವಾಗಿ ಬಳಸಬಾರದು ಸ್ವಲ್ಪ ನೀರು ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಮೊಡವೆ ಮೇಲೆ ಹಚ್ಚಬೇಕು ಇದರಿಂದ ಸೋಂಕು ಕಡಿಮೆಯಾಗಲು ಸಹಾಯವಾಗುತ್ತದೆ.

5. ಐಸ್ ಪ್ಯಾಕ್

ಮೊಡವೆ ಉಬ್ಬಿದ್ದರೆ ಐಸ್ ಕ್ಯೂಬ್ ಅನ್ನು ಬಟ್ಟೆಯಲ್ಲಿ ಸುತ್ತಿ ನಿಧಾನವಾಗಿ ಮುಖದ ಮೇಲೆ ಇಡಿ. ಇದರಿಂದ ಉಬ್ಬರ ಮತ್ತು ಕೆಂಪುತನ ಕಡಿಮೆಯಾಗುತ್ತದೆ.

ಗಮನಿಸಬೇಕಾದ ವಿಷಯಗಳು

1.ದಿನಕ್ಕೆ ಕನಿಷ್ಠ ಎರಡು ಬಾರಿ ಮುಖ ತೊಳೆಯಿರಿ.
2. ಹೆಚ್ಚು ನೀರು ಕುಡಿಯಿರಿ.
3. ಜಂಕ್ ಫುಡ್ ಸೇವನೆ ಕಡಿಮೆ ಮಾಡಿ.
4. ಮುಖವನ್ನು ಪದೇ ಪದೇ ಕೈಯಿಂದ ಮುಟ್ಟಬೇಡಿ.
5. ಮೊಡವೆ ಸಮಸ್ಯೆ ದಿರ್ಘಕಾಲ ಮುಂದುವರೆದರೆ ಅಥವಾ ಹೆಚ್ಚು ಇದ್ದರೆ ಚರ್ಮ ತಜ್ಞರ ಸಲಹೆ ಪಡೆಯುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+