Fire Roasted Tomato Chutney Recipe: ಯಾವಾಗಲೂ ಒಂದೇ ಚಟ್ನಿ ಮಾಡಬೇಡಿ.. ಫೈರ್ ರೋಸ್ಟೆಡ್ ಟೊಮೆಟೊ ಚಟ್ನಿ ಮಾಡಿ ತಿಂದು ತೇಗಿ
ಸಾಮಾನ್ಯವಾಗಿ ಬಹುತೇಕರ ಮನೆಯಲ್ಲಿ ಬೆಳಿಗ್ಗೆ ತಿಂಡಿಗೆ ಇಡ್ಲಿ ಮತ್ತು ದೋಸೆ ಮಾಡಲಾಗುತ್ತದೆ. ಇದಕ್ಕೆ ಯಾವಾಗಲೂ ಒಂದೇ ರೀತಿ ಚಟ್ನಿ ಮಾಡಿ ಬೇಜಾರಾಗಿದ್ದರೆ ಒಮ್ಮೆ ಬೇರೆ ರೀತಿ ಟ್ರೈ ಮಾಡಿ. ಹಾಗಾಗಿ ಇವತ್ತು ಸ್ವಲ್ಪ ಡಿಫರೆಂಟ್ ಫ್ಲೇವರ್ ಇರುವ ಚಟ್ನಿ ಮಾಡೋದನ್ನು ಕಲಿಯೋಣ.
ಈ ಚಟ್ನಿಗೆ ಎಲ್ಲವನ್ನೂ ಹುರಿದುಕೊಳ್ಳಬೇಕು. ಅಂದರೆ ಈರುಳ್ಳಿ, ಟೊಮೆಟೊ ಮತ್ತು ಬೆಳ್ಳುಳ್ಳಿಯನ್ನು ಹುರಿದು ನಂತರ ಚಟ್ನಿ ಮಾಡಬೇಕು. ಚಟ್ನಿಯನ್ನು ಈ ರೀತಿ ಮಾಡಿದಾಗ, ಅದರ ರುಚಿ ಅದ್ಬುತವಾಗಿರುತ್ತದೆ. ಜೊತೆಗೆ ನೀವು ಅದನ್ನು ಇಷ್ಟಪಟ್ಟು ತಿನ್ನುವಿರಿ.

ಹಾಗಾದರೆ ತಡ ಮಾಡುವುದು ಬೇಡ ಫೈರ್ ರೋಸ್ಟೆಡ್ ಚಟ್ನಿ ಮಾಡುವುದು ಹೇಗೆಂದು ತಿಳಿಯೋಣ. ನೀವು ಒಮ್ಮೆ ಈ ಚಟ್ನಿಯನ್ನು ಮನೆಯಲ್ಲಿ ಒಂದು ಬಾರಿ ಟ್ರೈ ಮಾಡಿ, ರುಚಿ ನೋಡಿ ನಮ್ಮೊಂದಿಗೆ ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಅಗತ್ಯವಿರುವ ವಸ್ತುಗಳು:
* ದೊಡ್ಡ ಟೊಮೆಟೊ - 1
* ಈರುಳ್ಳಿ - 2
* ಸಂಪೂರ್ಣ ಬೆಳ್ಳುಳ್ಳಿ - 1
* ಎಣ್ಣೆ - 1 ಟೇಬಲ್ಸ್ಪೂನ್
* ಕಡಲೆ - ಟೇಬಲ್ ಚಮಚ
* ಉದ್ದಿನ ಬೇಳೆ - 1 ಚಮಚ
* ಹಸಿ ಕೆಂಪು ಮೆಣಸಿನಕಾಯಿ - 5
* ಕರಿಬೇವಿನ ಎಲೆಗಳು - 1 ಕಟ್ಟು
* ಉಪ್ಪು - ರುಚಿಗೆ ತಕ್ಕಂತೆ
ಒಗ್ಗರಣೆಗ ಮಾಡಲು....
* ಎಣ್ಣೆ - 1 ಚಮಚ
* ಸಾಸಿವೆ - 1 ಚಮಚ
* ಉದ್ದಿನ ಬೇಳೆ - 1 ಚಮಚ
* ಕರಿಬೇವಿನ ಎಲೆಗಳು - 1 ಕಟ್ಟು

ಪಾಕವಿಧಾನ:
* ಮೊದಲು ಒಲೆಯಲ್ಲಿ ಚಪಾತಿ ಬೇಯಿಸುವ ತವೆಯನ್ನು ಇಡಿ.
* ನಂತರ ಅದರ ಮೇಲೆ ಈರುಳ್ಳಿ, ಟೊಮೆಟೊ ಮತ್ತು ಬೆಳ್ಳುಳ್ಳಿ ಹಾಕಿ ತಿರುವಿ ಹಾಕಿ ಚೆನ್ನಾಗಿ ಹುರಿಯಿರಿ.
* ನಂತರ ಅವುಗಳನ್ನು ಚೆನ್ನಾಗಿ ತಣ್ಣಗಾಗಿಸಿ, ಅವುಗಳ ಸಿಪ್ಪೆಯನ್ನು ತೆಗೆದುಹಾಕಿ ಮತ್ತು ನೀರಿನಲ್ಲಿ ಒಮ್ಮೆ ತೊಳೆಯಿರಿ.
* ನಂತರ ಆ ತರಕಾರಿಗಳನ್ನು ಎರಡು ತುಂಡುಗಳಾಗಿ ಕತ್ತರಿಸಬೇಕು.
* ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿಯಾದಾಗ ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
* ಕರಿಬೇವಿನ ಎಲೆಗಳು ಮತ್ತು ಹುರಿದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ ಸೇರಿಸಿ, 2 ನಿಮಿಷ ಹುರಿದು ತಣ್ಣಗಾಗಲು ಬಿಡಿ.
* ನಂತರ ಹುರಿದ ಪದಾರ್ಥಗಳನ್ನು ಮಿಕ್ಸರ್ ಜಾರ್ ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಕೊನೆಗೆ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದರಲ್ಲಿ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು ಹಾಕಿ ಒಲೆ ಆಫ್ ಮಾಡಿ ತಣ್ಣಗಾದ ಬಳಿಕ ರುಬ್ಬಿದ ಚಟ್ನಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ, 2 ನಿಮಿಷ ಕಲಕಿದರೆ ರುಚಿಕರ ಹುರಿದ ಚಟ್ನಿ ಸವಿಯಲು ಸಿದ್ಧ.












Click it and Unblock the Notifications