ಇಂದಿನ ಕ್ರೂರ ಜಗತ್ತನ್ನು ಬದಲಾಯಿಸಬಲ್ಲ ಹನುಮನ 5 ಅದ್ಭುತ ಮಾನವ ಗುಣಗಳು
ಹನುಮಂತನ ಹೆಸರು ಹೇಳಿದಾಗಲೆಲ್ಲ ಒಬ್ಬ ಮಹಾನ್ ಭಕ್ತನ ಚಿತ್ರ ಮನದಲ್ಲಿ ಮೂಡುತ್ತದೆ. ಹಾಗೆಯೇ ರಾಮ ದೇವನ ಸ್ನೇಹವನ್ನು ಉಳಿಸಿಕೊಳ್ಳಲು ಹಲವು ಬಿಕ್ಕಟ್ಟನ್ನು ನಿವಾರಿಸಿ, ರಾಮ ಹಾಗೂ ಸೀತಾ ಮಾತೆಯ ಪುನರ್ಮಿಲನದಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ನೇಹಿತ ಆಂಜನೇಯ. ಇದೆಲ್ಲದರ ಹೊರತಾಗಿ ಹನುಮಾನ್ ಕೂಡ ಕೆಲ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಉತ್ತಮ ವ್ಯಕ್ತಿಯಾಗಲು ಮಾತ್ರವಲ್ಲದೆ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಹ ಬಹಳ ಮುಖ್ಯವಾಗಿದೆ.
ಹನುಮಂತನ ಈ ಗುಣಗಳನ್ನು ಅಳವಡಿಸಿಕೊಂಡರೆ ಇಂದಿನ ಕ್ರೂರ ಜಗತ್ತನ್ನು ಬದಲಾಯಿಸಬಹುದು. ಅಲ್ಲದೆ ನಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಹಾಗಾದರೆ ಹನುಮನ ಆ ಗುಣಗಳನ್ನು ನಾವೂ ಕೂಡ ತಿಳಿದುಕೊಳ್ಳೋಣ.

ಯಾರ ನಂಬಿಕೆಯನ್ನು ಮುರಿಯಬೇಡಿ
ಹನುಮಾನ್ ಶ್ರೀರಾಮನನ್ನು ತನ್ನ ಆರಾಧ್ಯ ದೈವವಾಗಿ ಮಾತ್ರವಲ್ಲದೆ ತನ್ನ ಸ್ನೇಹಿತನಂತೆಯೂ ಪರಿಗಣಿಸುತ್ತಿದ್ದನು. ಆದ್ದರಿಂದ ಆತ ಸಂಪೂರ್ಣ ಪ್ರಾಮಾಣಿಕತೆಯಿಂದ ಶ್ರೀರಾಮನನ್ನು ಬೆಂಬಲಿಸಿದ. ಇಂದಿನ ಜಗತ್ತಿನಲ್ಲಿ ಜನರು ತಮ್ಮ ಸ್ವಾರ್ಥಕ್ಕಾಗಿ ಯಾರ ನಂಬಿಕೆಯನ್ನು ಮುರಿಯಲು ಹಿಂಜರಿಯುವುದಿಲ್ಲ.
ನಾವು ನಂಬಿಕೆಯನ್ನು ಮುರಿದಾಗ, ಅದು ಅವರ ನಂಬಿಕೆ ಮುರಿದ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿಯೊಳಗೆ ಅಪನಂಬಿಕೆಯ ಭಾವನೆ ಬೆಳೆಯುತ್ತದೆ. ಅವನು ಇನ್ನು ಮುಂದೆ ಯಾರನ್ನೂ ನಂಬುವುದಿಲ್ಲ. ಈ ಕಾರಣದಿಂದಾಗಿ ಜಗತ್ತಿನಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಹೀಗಾಗಿ ಯಾರ ನಂಬಿಕೆಯನ್ನು ಮುರಿಬಾರದು.

ಇತರರಿಗೆ ಸಹಾಯ ಮಾಡಲು ಸ್ವಾರ್ಥಕ್ಕಿಂತ ಮೇಲಿರುವುದು
ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಾರೆ. ಆದರೆ ಅನೇಕ ಬಾರಿ ನಾವು ನಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಿ ಇತರರಿಗೆ ಹಾನಿ ಮಾಡುತ್ತೇವೆ. ಆದರೆ ಹನುಮಾನ್ ಯಾವಾಗಲೂ ಸ್ವಾರ್ಥಕ್ಕಿಂತ ಮೇಲಕ್ಕೆ ಹೋದರೂ ಇತರರ ಬಗ್ಗೆ ಮೊದಲು ಯೋಚಿಸುತ್ತಾರೆ. ಆಂಜನೇಯ ತನ್ನ ಸ್ನೇಹಿತರಾದ ಶ್ರೀರಾಮ, ಸುಗ್ರೀವ ಮತ್ತು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಿದ್ದನು. ಇಂದು ನಾವು ನಮ್ಮ ಯೋಗಕ್ಷೇಮದ ಜೊತೆಗೆ ಇತರರಿಗೆ ಒಳ್ಳೆಯದನ್ನು ಯೋಚಿಸಿದರೆ, ಈ ಗುಣದಿಂದ ನಾವು ಜಗತ್ತಿನಲ್ಲಿ ಹರಡಿರುವ ನಕಾರಾತ್ಮಕತೆಯನ್ನು ತೊಡೆದುಹಾಕಬಹುದು.
ನಿಮ್ಮ ಗುರಿಯಿಂದ ವಿಮುಖರಾಗಬೇಡಿ
ಈ ದಿನಗಳಲ್ಲಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಹಲವು ವಿಷಯಗಳಿವೆ. ಸವಾಲುಗಳ ಭಯದಿಂದ ಅಥವಾ ಕೆಲವು ಪ್ರಲೋಭನೆಗೆ ಬಲಿಯಾಗುವುದರಿಂದ ಹೆಚ್ಚಿನ ಜನರು ತಮ್ಮ ಗುರಿಗಳಿಂದ ವಿಮುಖರಾಗುತ್ತಾರೆ. ಆದರೆ ಹನುಮಂತನಿಂದ ನಾವು ನಮ್ಮ ಗುರಿಗಳಿಂದ ವಿಮುಖರಾಗದಂತೆ ಇರುವುದನ್ನು ಕಲಿಯುತ್ತೇವೆ.
ಅಂಜನಿ ಸುತ ಹನುಮಂತ ಸಮುದ್ರವನ್ನು ದಾಟಿ ಲಂಕೆಗೆ ಹೋಗುವಾಗ, ಅವರ ಹಾದಿಯಲ್ಲಿ ಅನೇಕ ಸವಾಲುಗಳು ಬಂದವು. ಆದರೆ ಅವರು ಎಂದಿಗೂ ತಮ್ಮ ಗುರಿಯಿಂದ ವಿಚಲಿತರಾಗಲಿಲ್ಲ. ನಮ್ಮ ಗುರಿಯಿಂದ ಚ್ಯುತಿ ಬಾರದಿರುವ ಗುಣವಿದ್ದರೆ ಸಮಾಜಕ್ಕೆ ದೊಡ್ಡ ಕೆಲಸಗಳನ್ನು ಮಾಡಬಹುದು.
ಶಿಸ್ತು ಮತ್ತು ಶಿಷ್ಟಾಚಾರ
ಇಂದಿನ ಜಗತ್ತಿಗೆ ಶಿಸ್ತಿನ ಅವಶ್ಯಕತೆಯಿದೆ. ಇಂದಿನ ಜಗತ್ತಿನಲ್ಲಿ, ಜನರು ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಕೊಲ್ಲುವುದಕ್ಕೂ ಹಿಂದೆ ಸರಿಯುವುದಿಲ್ಲ. ಜನರು ಅಹಂಕಾರದಿಂದ ತಮ್ಮ ಘನತೆಯನ್ನು ಸಹ ಮರೆತುಬಿಡುತ್ತಾರೆ. ಇಂದಿನ ಜಗತ್ತಿನಲ್ಲಿ, ನೀವು ಎಷ್ಟೇ ಬಲಶಾಲಿಯಾಗಿದ್ದರೂ ಶಿಸ್ತು ನಿಮಗೆ ಬಹಳ ಮುಖ್ಯ ಎಂಬುದನ್ನು ನಾವು ಹನುಮಂತನಿಂದ ಕಲಿಯಬಹುದು. ಇತರರನ್ನು ಆಳುವ ಬದಲು ತನ್ನನ್ನು ಆಳುವುದು ಅಥವಾ ನಿಯಂತ್ರಿಸುವುದು ಬಹಳ ಮುಖ್ಯ. ಶಿಸ್ತಿನಿಂದ ಜಗತ್ತಿನ ಅನಾವಶ್ಯಕ ಗದ್ದಲವನ್ನು ಸದ್ದಡಗಿಸಬಹುದು.
ಮಾನವೀಯತೆ ಮತ್ತು ಸಹಾನುಭೂತಿಯ ಭಾವನೆ
ಇಂದಿನ ಕಾಲಮಾನದಲ್ಲಿ ಮಾನವೀಯತೆಯನ್ನು ನಾಚಿಕೆಪಡಿಸುವ ಅನೇಕ ಘಟನೆಗಳನ್ನು ನಾವು ನೋಡುತ್ತೇವೆ. ಜನರಲ್ಲಿ ಹೆಚ್ಚು ಕೋಪ ಮತ್ತು ಕಡಿಮೆ ದಯೆ ಇದೆ. ಇಂದಿನ ದಿನಗಳಲ್ಲಿ ಜನರಲ್ಲಿ ಮಾನವೀಯತೆ ಮತ್ತು ದಯೆಯ ಭಾವನೆ ಕಡಿಮೆಯಾಗುತ್ತಿರುವುದರಿಂದ ನಕಾರಾತ್ಮಕತೆ ಹೆಚ್ಚುತ್ತಿದೆ.
ಆದರೆ ಹನುಮಂತನಿಂದ ನಾವು ಸಹಾನುಭೂತಿ ಮತ್ತು ಮಾನವೀಯತೆಯ ಮನೋಭಾವವನ್ನು ಕಲಿಯಬಹುದು. ಹನುಮಾನ್ ತನ್ನ ಸ್ನೇಹಿತರನ್ನು ಮಾತ್ರವಲ್ಲದೆ ಶತ್ರುಗಳನ್ನೂ ಸಹ ದಯೆಯಿಂದ ಮತ್ತು ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಹಿಂಜರಿಯುವುದಿಲ್ಲ ಎಂದು ಅನೇಕ ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications