ಧಾರವಾಡ; ಫೆಬ್ರವರಿ 28ರಂದು ನೇರ ಸಂದರ್ಶನ
ಧಾರವಾಡ, ಫೆಬ್ರವರಿ 16; ಧಾರವಾಡ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿರುವ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಜಿಲ್ಲಾ ಮಟ್ಟದ ತಾಂತ್ರಿಕ ಕೋಶದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಫೆಬ್ರವರಿ 28ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅಕೌಂಟೆಂಟ್ ಮತ್ತು ಫೈನಾನ್ಸ್ ತಜ್ಞ ಅಥವಾ ಹೌಸಿಂಗ್ ಫೈನಾನ್ಸ್ ಸ್ಪೆಷಲಿಸ್ಟ್ 1 ಹುದ್ದೆ ಮತ್ತು ಎಂಐಎಸ್ ಸ್ಪೆಷಲಿಸ್ಟ್ 1 ಹುದ್ದೆಯನ್ನು ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ಏಜೆನ್ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಫೆಬ್ರವರಿ 28 ರಂದು ಬೆಳಗ್ಗೆ 11.30ಕ್ಕೆ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಜಿಲ್ಲಾನಗರಾಭಿವೃದ್ಧಿ ಕೋಶದಲ್ಲಿ ನೇರ ಸಂದರ್ಶನವನ್ನು ನಡೆಸಲಾಗುತ್ತದೆ. ಆಸಕ್ತರು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳವ ಆಸಕ್ತ, ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ಪರಿಚಯ ಪತ್ರ, ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ನೇ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ; ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತ ಸರ್ಕಾರದ ನಿರ್ದೇಶನದನ್ವಯ ದೇಶಾದ್ಯಂತ ಪ್ರವಾಹ, ಚಂಡಮಾರುತ, ಭೂಕುಸಿತ ಹಾಗೂ ಭೂಕಂಪ ಪೀಡಿತ 350 ಜಿಲ್ಲೆಗಳಲ್ಲಿ 1 ಲಕ್ಷ ಸಮುದಾಯ ಮಟ್ಟದ ಸ್ವಯಂ ಸೇವಕರಿಗೆ ವಿಪತ್ತುಗಳು ಉಂಟಾಗುವ ಸಂದರ್ಭಗಳಲ್ಲಿ ಜನರನ್ನು ರಕ್ಷಿಸಲು ಅವಶ್ಯವಿರುವ ತರಬೇತಿಯನ್ನು ನೀಡುತ್ತಿದೆ.
ಆಪದ ಮಿತ್ರ ಯೋಜನೆಯಡಿ ಈ ತರಬೇತಿ ನೀಡುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಆಸಕ್ತರಿಂದ ಸ್ವವಿವರದ ಮಾಹಿತಿಯನ್ನು ನೀಡುವಂತೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿರುತ್ತಾರೆ.
ಆಸಕ್ತರು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯಾದ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳಿಗೆ ತಮ್ಮ ಸ್ವ ವಿವರಗಳೊಂದಿಗೆ ಮಾಹಿತಿಯನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08182-223328.
ಗೌರವ ಸಮಾದೇಷ್ಟರ ಹುದ್ದೆಗೆ ಅರ್ಜಿ ಆಹ್ವಾನ; ಗೃಹ ರಕ್ಷಕ ದಳವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಗೃಹರಕ್ಷಕ ದಳದ ಕಚೇರಿಗಳು ರಾಜ್ಯದ 31 ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕಾರ್ಯನಿರತವಾಗಿವೆ.
ಈ ಗೃಹ ರಕ್ಷಕ ದಳದ ಜಿಲ್ಲಾ ಕಚೇರಿಯಲ್ಲಿನ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳಲು ಸ್ಥಳೀಯ ಗೌರವಾನ್ವಿತ ವ್ಯಕ್ತಿಗಳನ್ನು ಸರ್ಕಾರವು ಗೃಹ ರಕ್ಷಕ ದಳದ ಸಮಾದೇಷ್ಟರುಗಳನ್ನಾಗಿ ನಿಯಮಾನುಸಾರ ನೇಮಕ ಮಾಡುತ್ತಿದೆ.
ಮಡಿಕೇರಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಗೃಹ ರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಯು ಖಾಲಿಯಾಗಿರುವುದರಿಂದ ಈ ಹುದ್ದೆಗೆ ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾರ್ಚ್ 11ರೊಳಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಮಾಡುವವರು ಪದವಿ ಪಡೆದಿರಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸಂಘಟನೆಯ ಸದಸ್ಯರಾಗಿರಬಾರದು ಅಥವಾ ಸಂಬಂಧ ಹೊಂದಿರಬಾರದು.
ಯಾವುದೇ ರೀತಿಯ ರಾಜಕೀಯ ಚಳುವಳಿ ಅಥವಾ ಚಟುವಟಿಕೆಗೆ ಸಹಾಯ ಮಾಡಲು ಅಥವಾ ಸಹಾಯ ಮಾಡಲು ಚಂದಾದಾರರಾಗಿ ಭಾಗವಹಿಸಬಾರದು. ಯಾವುದೇ ನ್ಯಾಯಾಲಯ ಅಥವಾ ವಿಚಾರಣೆಯ ಆಯೋಗದಿಂದ ಯಾವುದೇ ಅಪರಾಧಕ್ಕಾಗಿ ಅಥವಾ ದೋಷರೋಪಣೆಗೆ ಗುರಿಯಾಗಬಾರದು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು 50 ವರ್ಷ ಮೀರಬಾರದು. 20 ಕಿ. ಮೀ. ವ್ಯಾಪ್ತಿಯೊಳಗೆ ವಾಸಿಸುತ್ತಿರಬೇಕು. ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಸದೃಢರಾಗಿದ್ದಾರೆಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಪ್ರಮಾಣೀಕರಿಸಬೇಕು.
ಸೇವೆಗಳು ಮತ್ತು ಸೇವೆಯ ಕನಿಷ್ಠ ಅವಧಿ 5 ವರ್ಷಗಳ ಮಿಲಿಟರಿ ಸೇವೆ, ಪ್ಯಾರಾ ಮಿಲಿಟರಿ ಸೇವೆ, ಪೊಲೀಸ್ ಸೇವೆ, ಶೌರ್ಯ ಪ್ರಶಸ್ತಿ ಪುರಸ್ಕೃತರಾಗಿರಬೇಕು. ಎನ್‍ಸಿಸಿ ಪ್ರಮಾಣ ಪತ್ರ ಹೊಂದಿರಬೇಕು.












Click it and Unblock the Notifications