ಧಾರವಾಡದಲ್ಲಿ ಕೆಲಸ ಖಾಲಿ ಇದೆ, ಅಕ್ಟೋಬರ್ 14ರಂದು ನೇರ ಸಂದರ್ಶನ
ಧಾರವಾಡ, ಸೆಪ್ಟೆಂಬರ್ 30; ಧಾರವಾಡ ಕೃಷಿ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 14ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಕೀಟಶಾಸ್ತ್ರ ವಿಭಾಗದಲ್ಲಿ ಹಿರಿಯ ಸಂಶೋಧನಾ ಸಹದ್ಯೋಗಿ ಒಂದು ಹುದ್ದೆಗೆ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಕೃಷಿ ಕೀಟಶಾಸ್ತ್ರ ವಿಷಯದಲ್ಲಿ ಎಂಎಸ್‍ಸಿ ಅಗ್ರಿ ಮತ್ತು ಸಹಾಯಕ ಯೋಜನಾಧಿಕಾರಿ ಒಂದು ಹುದ್ದೆಗೆ ಸಹ ನೇರ ಸಂದರ್ಶನ ನಡೆಯುತ್ತಿದೆ.
ಯಾವುದೇ ಪದವಿಯೊಂದಿಗೆ ಕೃಷಿಯಲ್ಲಿ ಡ್ರೋನ್ ಸಂಬಂಧಿತ ಯೋಜನೆಗಳಲ್ಲಿ ಕೆಲಸದ ಅನುಭವ ಹೊಂದಿದ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಅಕ್ಟೋಬರ್ 14 ರಂದು ಬೆಳಗ್ಗೆ 11 ಘಂಟೆಗೆ ಡೀನ್ (ಕೃಷಿ) ರವರ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಶ್ವವಿದ್ಯಾಲಯದ ವೆಬ್‌ಸೈಟ್ www.uasd.edu ಭೇಟಿ ನೀಡಬಹುದು.
ವಿಶ್ವ ಕೌಶಲ್ಯ ಸ್ಪರ್ಧೆ, ನೋಂದಣಿಗೆ ಸೂಚನೆ; ಫ್ರಾನ್ಸಿನ ಲಿಯೋನ್‌ನಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆ ನಡೆಯಲಿರುವ ಹಿನ್ನಲೆ ಇಂಡಿಯಾ ಸ್ಕಿಲ್ ಕಾಂಪಿಟೇಷನ್ ಕರ್ನಾಟಕ ಸ್ಪರ್ಧೆಗೆ ಪೂರ್ವಭಾವಿಯಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಅರ್ಹ ಅಭ್ಯರ್ಥಿಗಳನ್ನು ವಿವಿಧ ಹಂತಗಳಲ್ಲಿ ಆಯ್ಕೆ ಮಾಡುವ ಸಲುವಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅರ್ಹತಾ ಸುತ್ತುಗಳ ಮೂಲಕ ಆಯ್ಕೆ ಮಾಡಲಿದೆ.
ಅರ್ಹತಾ ಸುತ್ತುಗಳಲ್ಲಿ ವಿಜೇತರಾದ ಸ್ಪರ್ಧಿಗಳು ವಿಶ್ವ ಕೌಶಲ್ಯ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಸ್ಪರ್ಧೆಯಲ್ಲಿ 2002 ಜನವರಿ 1 ರ ನಂತರ ಜನಿಸಿದ 17 ರಿಂದ 21 ವರ್ಷ ವಯಸ್ಸಿನ ಅಭ್ಯರ್ಥಿಗಳು 45 ವಿವಿಧ ಕೌಶಲ್ಯ ವಿಷಯಗಳಲ್ಲಿ ಹಾಗೂ 1999 ಜನವರಿ 1 ರ ನಂತರ ಜನಿಸಿದ 17 ರಿಂದ 24 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು 10 ವಿವಿಧ ಕೌಶಲ್ಯ ವಿಷಯಗಳಲ್ಲಿ ಭಾಗವಹಿಸಲು ನವೆಂಬರ್ 15 ರ ಒಳಗೆ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 0820-2574204, 8277895930, 9739691294, 9449943882 ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮೊಬೈಲ್ ನಂಬರ್ 9845463771 ಸಂಪರ್ಕಿಸಬಹುದು.












Click it and Unblock the Notifications