NIOS Recruitment 2024: ಸರ್ಕಾರಿ ಕೆಲಸ ಖಾಲಿ ಇದೆ, ಇಂದೇ ಅರ್ಜಿ ಹಾಕಿ
NIOS Recruitment 2024: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (National Institute of Open schooling)ನಲ್ಲಿ ಖಾಲಿ ಇರುವ 16 ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 16 ಸ್ಟೇಟ್ ಕನ್ಸಲ್ಟೆಂಟ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 28, 2024 ಅಂದರೆ ನಾಳೆ ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬಹುದು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಮಾಹಿತಿ ಇಲ್ಲದೆ.
ಹುದ್ದೆಯ ವಿವರ:
*ಸ್ಟೇಟ್ ಕನ್ಸಲ್ಟೆಂಟ್-8
*ಪ್ರಾಜೆಕ್ಟ್ ಅಸಿಸ್ಟೆಂಟ್-7
*ಸೆಕ್ರೆಟರಿಯಲ್ ಅಸಿಸ್ಟೆಂಟ್-1
ಅರ್ಹತೆ:
*ಸ್ಟೇಟ್ ಕನ್ಸಲ್ಟೆಂಟ್- ಎಂಬಿಎ, ಸ್ನಾತಕೊತ್ತರ ಪದವಿ
*ಪ್ರಾಜೆಕ್ಟ್ ಅಸಿಸ್ಟೆಂಟ್-ಪದವಿ, ಡಿಪ್ಲೊಮಾ
*ಸೆಕ್ರೆಟರಿಯಲ್ ಅಸಿಸ್ಟೆಂಟ್-12ನೇ ತರಗತಿ
ವಯಸ್ಸಿನ ಮಿತಿ:
*ಸ್ಟೇಟ್ ಕನ್ಸಲ್ಟೆಂಟ್-62 ವರ್ಷದೊಳಗೆ
*ಪ್ರಾಜೆಕ್ಟ್ ಅಸಿಸ್ಟೆಂಟ್-35 ವರ್ಷದೊಳಗೆ
*ಸೆಕ್ರೆಟರಿಯಲ್ ಅಸಿಸ್ಟೆಂಟ್-35 ವರ್ಷದೊಳಗೆ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
*ಅಂಗವಿಕಲ ಅಭ್ಯರ್ಥಿಗಳು: ಇಲ್ಲ
*ಎಲ್ಲಾ ಇತರ ಅಭ್ಯರ್ಥಿಗಳು: 250 ರೂಪಾಯಿ
*ಆನ್‌ಲೈನ್ ವಹಿವಾಟು ಶುಲ್ಕ: 50 ರೂಪಾಯಿ
*ಪಾವತಿ ವಿಧಾನ: ಆನ್‌ಲೈನ್
ಉದ್ಯೋಗದ ಸ್ಥಳ
*ಅಸ್ಸಾಂ
*ಕರ್ನಾಟಕ
*ಮಹಾರಾಷ್ಟ್ರ
*ಉತ್ತರಪ್ರದೇಶ
ವೇತನ:
*ಸ್ಟೇಟ್ ಕನ್ಸಲ್ಟೆಂಟ್- ಮಾಸಿಕ 35,000
*ಪ್ರಾಜೆಕ್ಟ್ ಅಸಿಸ್ಟೆಂಟ್- ಮಾಸಿಕ 16,000
*ಸೆಕ್ರೆಟರಿಯಲ್ ಅಸಿಸ್ಟೆಂಟ್- ಮಾಸಿಕ 15,000
ಆಯ್ಕೆಯ ವಿಧಾನ
*ಲಿಖಿತ ಪರೀಕ್ಷೆ
*ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್‌ನ್ನು ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 28,2024












Click it and Unblock the Notifications