ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ
ಬೆಂಗಳೂರು,ಜಲೈ.23: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಉದ್ಯೋಗಾಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡಲು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿಯನ್ನು ಶೀಘ್ರವೇ ಆಹ್ವಾನಿಸಲಾಗುತ್ತದೆ. ಈ ಬಗ್ಗೆ ತರಬೇತಿ ನೀಡುವ ಸಂಸ್ಥೆಗಳಿಂದ ಟೆಂಡರ್‌ನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಕೆಲವೇ ದಿನದಲ್ಲಿ ಆಯ್ಕೆ ಪ್ರಕಿಯೆ ನಡೆಯಲಿದೆ.
ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ, ರೈಲ್ವೆ, ಆರ್‌ಆರ್‌ಬಿ, ಸಿಬ್ಬಂದಿ ಮತ್ತು ನೇಮಕಾತಿ ಆಯೋಗ( ಸ್ಟಾಫ್ ಸೆಲೆಕ್ಷನ್ ಕಮಿಷನ್), ಬ್ಯಾಂಕಿಂಗ್ ಉದ್ಯೋಗಗಳು, ಗ್ರೂಪ್ ಸಿ, ನ್ಯಾಯಾಂಗ ಇಲಾಖೆಯ ಉದ್ಯೋಗಗಳು ಇವೇ ಮೊದಲಾದ ಉದ್ಯೋಗ ಪಡೆಯಲು ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಕರೆಯಲಾಗುತ್ತದೆ.
2022- 2023ನೇ ಸಾಲಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ವಿವಿಧ ಖಾಸಗಿ ಕೇಂದ್ರದ ಮೂಲಕ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಆಯಾ ವರ್ಗಗಳ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕಸೇವಾ ಆಯೋಗ, ಸ್ಟಾಫ್ ಸೆಲೆಕ್ಷನ್ ಕಮಿಷನ್, ಆರ್‌ಆರ್‌ಬಿ, ನ್ಯಾಯಾಂಗ ಸೇವಾ ತರಬೇತಿ ನೀಡಲು ಅರ್ಜಿಯನ್ನು ಶೀಘ್ರವೇ ಆಹ್ವಾನಿಸಲಾಗುತ್ತದೆ.

ಭಾರತೀಯ ಆಡಳಿತ ಸೇವೆ(ಐಎಎಸ್), ಕರ್ನಾಟಕ ಆಡಳಿತ ಸೇವೆ(ಕೆಎಎಸ್) ಬ್ಯಾಂಕ್ ಉದ್ಯೋಗಗಳು,ರೈಲ್ವೆ ಉದ್ಯೋಗಗಳು, ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಪರೀಕ್ಷೆಗಳಿಗೆ ಸಮಾಜ ಕಲ್ಯಾಣ ಇಲಾಖೆ ಖ್ಯಾತ ತರಬೇತಿ ಸಂಸ್ಥೆಗಳಿಂದ ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡುತ್ತದೆ. ಇದಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಲಾಖೆ ಸ್ವತಃ ಪರೀಕ್ಷೆ ನಡೆಸುತ್ತದೆ. ಇಲ್ಲಿ ಉತ್ತೀರ್ಣರಾದವರನ್ನು ನವದೆಹಲಿಯ ಖ್ಯಾತ ತರಬೇತಿ ಸಂಸ್ಥೆ, ಹೈದರಾಬಾದ್, ಬೆಂಗಳೂರು ಸೆಂಟರ್‌ಗಳಲ್ಲಿ ಇರುವ ಸಂಸ್ಥೆಗಳಿಂದ ಅಭ್ಯರ್ಥಿಗಳಿಗೆ ತರಬೇತಿ ಕೊಡಿಸುತ್ತದೆ. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆಯ https://sw.kar.nic.in ವೆಬ್‌ಸೈಟ್ ನೋಡಬಹುದು.












Click it and Unblock the Notifications