DRDO Jobs: 1901 ಖಾಲಿ ಹುದ್ದೆ ನೇಮಕಕ್ಕೆ ಅಧಿಸೂಚನೆ
ಬೆಂಗಳೂರು, ಸೆಪ್ಟಂಬರ್ 04: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ)ಯು ಉದ್ಯೋಗಾಸಕ್ತರಿಗೆ ಸಿಹಿ ಸುದ್ದಿಯೊಂದನ್ನು ನಿಡಿದೆ. ಒಟ್ಟು 1901 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಸೆಪ್ಟಂಬರ್ 3ರಿಂದಲೇ ಅರ್ಜಿ ಪ್ರಕ್ರಿಯೆ ಆರಂಭಿಸಿದೆ.
ಟೆಕ್ನಿಕಲ್ ಅಸಿಸ್ಟೆಂಟ್ ಬಿ ಹುದ್ದೆಗಳಿಗೆ ನೇಮಕಾತಿ ಆಹ್ವಾನಿಸಿದ್ದು, ಸೆಪ್ಟೆಂಬರ್ 23ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಜಿ ನಮೂನೆ ಸಲ್ಲಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆ ಆನ್‌ಲೈನ್ ಮೂಲಕವೇ ನಡೆಯಲಿದೆ. ಖಾಲಿ ಹುದ್ದೆಗಳ ನೇಮಕಾತಿ ಸಂಬಂಧಿಸಿದ ಮಾಹಿತಿಗಾಗಿ ಡಿಆರ್‌ಡಿಓ ಅಧಿಕೃತ ವೆಬ್‌ಸೈಟ್‌ನಲ್ಲಿ (www.drdo.gov.in) ಭೇಟಿ ನೀಡಿಬಹುದು.
ಒಟ್ಟು 1901 ಹುದ್ದೆಗಳಲ್ಲಿ ಹಿರಿಯ ತಾಂತ್ರಿಕ ಸಹಾಯಕ-ಬಿ ವೃಂದದಲ್ಲಿ 1,075 ಮತ್ತು ಟೆಕ್ನಿಷಿಯನ್-ಎ ವರ್ಗದಲ್ಲಿ826 ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಸಾಮಾನ್ಯರಿಗೆ 474 ತಾಂತ್ರಿಕ ಸಹಾಯಕರು, 389 ತಂತ್ರಜ್ಞರು ಮತ್ತು 149 ತಾಂತ್ರಿಕ ಸಹಾಯಕರು ಹಾಗೂ 99 ತಂತ್ರಜ್ಞರು (ಪರಿಶಿಷ್ಟ ಜಾತಿ), 61 ತಾಂತ್ರಿಕ ಸಹಾಯಕರು, 66 ತಂತ್ರಜ್ಞರು (ಪರಿಶಿಷ್ಟ ಪಂಗಡ) ಇತರ ಹಿಂದುಳಿದ ಸಮುದಾಯಗಳು (ಒಬಿಸಿ) ಮತ್ತು 25 ಟೆಕ್ನಿಕಲ್ ಹುದ್ದೆಗಳು ಇವೆ. ಆರ್ಥಿಕವಾಗಿ ಹಿಂದುಳಿದವರಿಗೆ 193 ಟೆಕ್ನಿಷಿಯನ್ ಹುದ್ದೆಗಳು, 132 ತಾಂತ್ರಿಕ ಸಹಾಯಕ ಹುದ್ದೆಗಳು, 79 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಕೆಗೆ ಮಾನದಂಡ ಏನು?
ಪ್ರತಿ ಖಾಲಿ ಹುದ್ದೆಗಳ ನೇಮಕಾತಿಗೆ ಹಲವು ಮಾನದಂಡಗಳನ್ನು ಸಂಸ್ಥೆ ಅನುಸರಿಲಿದೆ. ಹಿರಿಯ ತಾಂತ್ರಿಕ ಸಹಾಯಕ-ಬಿ ಹುದ್ದೆಗೆ ಅಭ್ಯರ್ಥಿ ವಿಜ್ಞಾನದಲ್ಲಿ ಪದವಿ ಅಥವಾ ಎಂಜಿನಿಯರಿಂಗ್/ತಂತ್ರಜ್ಞಾನ / ಕಂಪ್ಯೂಟರ್ ಸೈನ್ಸ್ ಇಲ್ಲವೇ ಇನ್ನಿತರ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಈ ಪದವಿಗಳು ಅಖಿಲ ಭಾರತ ತಾಂತ್ರಿಕ ಸಂಘಗಳ ಪರಿಷತ್ತಿನಿಂದ ಮಾನ್ಯತೆ ಪಡೆದಿರಬೇಕು. ಜತೆಗೆ ಅಭ್ಯರ್ಥಿಗಳು ಳು 18ರಿಂದ 28ವರ್ಷದವರಾಗಿರಬೇಕು.
ಅರ್ಜಿ ಸಲ್ಲಿಸುವ ಆಸಕ್ತರು ತಂತ್ರಜ್ಞರ ಹುದ್ದೆಗಾಗಿ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರಬೇಕು. ಕೈಗಾರಿಕಾ ತರಬೇತಿ ಸಂಸ್ಥೆಯಿಂದ ನಿರ್ದಿಷ್ಟಪಡಿಸಿದ ವಿಷಯದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು. ಇಲ್ಲವೇ ಯಾವುದೇ ಇತರ ಮಾನ್ಯತೆ ಪಡೆದ ಸಂಸ್ಥೆಯಿಂದ ನಿರ್ದಿಷ್ಟಪಡಿಸಿದ ವಿಷಯದಲ್ಲಿ ಕನಿಷ್ಠ ಒಂದು ವರ್ಷದ ಕೋರ್ಸ್ ಕಲಿತಿರಬೇಕು ಎಂದ ಅಧಿಸೂಚನೆ ತಿಳಿಸಿದೆ.

ಡಿಆರ್‌ಡಿಓನಲ್ಲಿ ಹಿರಿಯ ತಾಂತ್ರಿಕ ಸಹಾಯಕ- ಬಿ ಹುದ್ದೆಗೆ ವೇತನ ಶ್ರೇಣಿ 6ಕ್ಕೆ ರೂ.35400 ರೂ.ನಿಂದ 1,12,400 ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ. ಟೆಕ್ನಿಷಿಯನ್-ಎ ಹುದ್ದೆಗೆ ವೇತನ ಶ್ರೇಣಿ 2ಗೆ ರೂ.19,900ರೂ. ನಿಂದ 63,200ರೂ. ವೇತನ ಇರಲಿದೆ. ಈ ವೇತನವೂ ಎಲ್ಲಾ ಭತ್ಯೆಗಳನ್ನು ಒಳಗೊಂಡಿದೆ.












Click it and Unblock the Notifications