BEML Recruitment 2023: ಬೆಂಗಳೂರಿನಲ್ಲಿ ನ.24 ರಂದು ವಾಕ್ ಇನ್ ಇಂಟರ್‌ವ್ಯೂವ್
ಬೆಂಗಳೂರು, ನವೆಂಬರ್ 13: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಕಂಪನಿಯು ತನ್ನಲ್ಲಿ ಖಾಲಿ ಇರುವ ಮ್ಯಾನೇಜ್‌ಮೆಂಟ್ ಟ್ರೈನಿ-ಕಂಪೆನಿ ಕಾರ್ಯದರ್ಶಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ನೇರ ಸಂದರ್ಶನಲ್ಲಿ ಪಾಲ್ಗೊಳ್ಳಬಹುದು.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಹುದ್ದೆಗಳ ಭರ್ತಿಗೆ ಇದೇ ನವೆಂಬರ್ 24ರಂದು ಸಂದರ್ಶನ ನಡೆಸಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಉದ್ಯೋಗ ಹುಡಕುತ್ತಿರುವ ಆಸಕ್ತ ಅಭ್ಯರ್ಥಿಗಳು ಇಲ್ಲಿನ ವಿವರ ತಿಳಿದು ಸಂದರ್ಶನಕ್ಕೆ ತಯಾರಾಗಿ. ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಕ್ರಿಯೆಯ ಮಾಹಿತಿ
ಸಂಸ್ಥೆ ಹೆಸರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML)
ಹುದ್ದೆ ಹೆಸರು: ಮ್ಯಾನೇಜ್‌ಮೆಂಟ್ ಟ್ರೈನಿ-ಕಂಪೆನಿ ಕಾರ್ಯದರ್ಶಿ
ಉದ್ಯೋಗ ಸ್ಥಳ: ಕರ್ನಾಟಕ
ಮಾಸಿಕ ವೇತನ: 40000 ನಿಂದ 140000 ರೂಪಾಯಿ
ವಿದ್ಯಾರ್ಹತೆ
ಬಿಎಎಂಎಲ್ ಅಧಿಸೂಚನೆಯಲ್ಲಿ ಹೇಳಿರುವ ಪ್ರಕಾರ, ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಇಲ್ಲವೇ ವಿಶ್ವವಿದ್ಯಾನಿಲಯದಲ್ಲಿ ಕಂಪನಿ ಕಾರ್ಯದರ್ಶಿಯ ಸಂಸ್ಥೆಯ ಸದಸ್ಯತ್ವದೊಂದಿಗೆ ಅರ್ಹ ಕಂಪನಿ ಕಾರ್ಯದರ್ಶಿಯಾಗಿರಬೇಕು ಎಂದು ತಿಳಿಸಿದೆ.
ವಯೋಮಿತಿ
ಈ ಮೇಲಿನ ಖಾಲಿ ಹುದ್ದೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷಗಳು ಆಗಿರಬೇಕು.ಇದರಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ಇರಲಿದೆ. ಬಿಎಎಂಎಲ್ ಕಂಪನಿಯ ಮೌಲ್ಯಮಾಪನ ಮತ್ತು ಸಂದರ್ಶನ ಮೂಲಕ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲಿದೆ.

ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತ ನವೆಂಬರ್ 24ರಂದು ಸಂದರ್ಶನ ನಡೆಯಲಿರುವ ಬಿಇಎಂಎಲ್ ಸೌಧ, 23/1, 4 ನೇ ಮೇನ್, SR ನಗರ, ಬೆಂಗಳೂರು-560027 ಇಲ್ಲಿಗೆ ಖುದ್ದು ಭೇಟಿ ನೀಡಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ https://www.bemlindia.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ತಿಳಿಸಿದೆ.












Click it and Unblock the Notifications