60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 'ಉದ್ಯೋಗ ಮೇಳ': ಕೆಲಸಕ್ಕಾಗಿ ನೋಂದಣಿ ಆದವರೆಷ್ಟು?
ಬೆಂಗಳೂರು, ಆಗಸ್ಟ್ 26: ಪಿಂಚಣಿ ಸೇರಿದಂತೆ ಅಗತ್ಯ ಆರ್ಥಿಕ ಭದ್ರತೆ ಇಲ್ಲದ ಹಿರಿಯ ನಾಗರಿಕರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದ ರೋಟರಿ ಬೆಂಗಳೂರು ವೆಸ್ಟ್ ಮತ್ತು ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಭಾನುವಾರ 'ವಾರ್ಷಿಕ ಉದ್ಯೋಗ ಮೇಳ' ಆಯೋಜಿಸಲಾಗಿತ್ತು. ಈ ಮೂಲಕ ಹಿರಿಯ ನಾಗರಿಕರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡಲು ಟ್ರಸ್ಟ್ ಮುಂದಾಗಿದೆ.
ಬೇರಾವುದೋ ಕೆಲಸ ಮಾಡಿ ನಿವೃತ್ತರಾದವರು ಸೇರಿದಂತೆ ಬಹುಪಾಲು ಹಿರಿಯ ನಾಗರಿಕರು ತಮ್ಮನ್ನು ತಾವು ಸ್ವಾವಲಂಭಿಗಳಾಗಲು ಹಾಗೂ ಮತ್ತೆ ಉದ್ಯೋಗ ಮಾಡಲು ಬಯಸುತ್ತಾರೆ. ಅನೇಕ ಹಿರಿಯ ನಾಗರಿಕರಿಗೆ ಅವರ ಅಗತ್ಯತೆ ಪೂರೈಸಲು ಈ ಮೇಳ ಆಯೋಜಿಸಿದ್ದೇವೆ ಎಂದು ಟ್ರಸ್ಟ್ ಸದಸ್ಯರು ಮಾಹಿತಿ ನೀಡಿದ್ದಾರೆ.

ಉದ್ಯೋಗದ ಅಗತ್ಯತೆ ಸಾಕಷ್ಟಿದೆ!
ಈ ಮೇಳದಲ್ಲಿ ಉದ್ಯೋಗ ಬಯಸಿರುವ ಸುಮಾರು 1,250 ಕ್ಕೂ ಹೆಚ್ಚು ಹಿರಿಯ ನಾಗರಿಕರು ರೆಸ್ಯೂಮ್ ಸಹಿತ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಖಾಸಗಿ ಕಂಪನಿಯಲ್ಲಿ ಪ್ರಮುಖ ಸ್ಥಾನ ನಿರ್ವಹಿಸಿ 25 ವರ್ಷಗಳ ಅನುಭವ ಹೊಂದಿರುವ ಸೈಯದ್ ಅಂಜುಮ್ (56) ಅವರು ತಮ್ಮ ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲಸದ ಅಗತ್ಯತೆ ಇದೆ ಎಂದು ತಿಳಿಸಿದರು.
ನಮ್ಮ ದೈನಂದಿನ ಅಗತ್ಯತೆ ಪೂರೈಸಿಕೊಳ್ಳಲು ಹಣಕಾಸಿನ ಅಗತ್ಯವಿರುತ್ತದೆ. ಅದೆಲ್ಲ ಪೂರೈಸಿಕೊಳ್ಳಲು ನಮಗೆ ಹಣಕಾಸಿನ ಅಗತ್ಯವಿದೆ ಎಂದು ಸುಂದರ್ ರಾಮನ್ (60) ಹೇಳಿದರು. ನಮಗೆ ಮಕ್ಕಳು ಇಲ್ಲ. ಪತಿ ಆಪ್ಟಿಕಲ್ ಅಂಗಡಿಯಲ್ಲಿ ದುಡಿಯುತ್ತಿದ್ದರು. ನಾನು ಖಾಸಗಿ ಕಂಪನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ನಿವೃತ್ತಿ ಆಗಿದ್ದು, ಇಂದು ಹಣದುಬ್ಬರ, ಗಗನಕ್ಕೇರಿದ ಬೆಲೆಗಳ ಮಧ್ಯೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಉದ್ಯೋಗದ ಅಗತ್ಯತೆ ಇದೆ ಎಂದು ವಸಂತಲಕ್ಷ್ಮಿ ಎಂಬುವವರು ಮಾಹಿತಿ ನೀಡಿದರು
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ದಂಪತಿಗಳು, ಸಾಮಾಜಿಕ ಕಾಳಜಿ ಸಹಿತ ವ್ಯವಹರಿಸುವ ಉದ್ಯೋಗವನ್ನು ಹುಡುಕುತ್ತಿದ್ದೇವೆ. ಮಹಿಳಾ ಸಬಲೀಕರಣ, ಮಹಿಳೆಯರನ್ನು ಮುನ್ನಡೆಸುವ, ಪ್ರತಿಪಾದಿಸುವ ಸಂಸ್ಥೆ ಜತೆ ತಾವು ಕೆಲಸ ಮಾಡಲು ಆಸಕ್ತರಾಗಿದ್ದೇವೆ ಎಂದರು ಅವರು ಹೇಳಿಕೊಂಡಿದ್ದಾರೆ.

1,077 ಉದ್ಯೋಗ ಅವಕಾಶಗಳು
ಮೇಳದಲ್ಲಿ 72 ಉದ್ಯೋಗದಾತ ಕಂಪನಿಗಳು ಪಾಲ್ಗೊಂಡಿದ್ದವು. ಅವರಿಂದ 1,077 ಉದ್ಯೋಗ ಅವಕಾಶಗಳು ಇದ್ದು, ಮುಖ್ಯವಾಗಿ ಎಂಜಿನಿಯರಿಂಗ್, ಮಾರ್ಕೆಟಿಂಗ್, ಆಡಳಿತ, ಖಾತೆಗಳು, ಮೇಲ್ವಿಚಾರಕ ಹುದ್ದೆಗಳಿರುವುದಾಗಿ ಟ್ರಸ್ಟ್‌ಗೆ ತಿಳಿಸಿವೆ. ಇನ್ನು 1,450 ಸ್ವಯಂ ಉದ್ಯೋಗ ಅವಕಾಶಗಳು ಇವೆ.
ಈ ವಾರ್ಷಿಕ ಉದ್ಯೋಗ ಮೇಳೆವು 2011ರಿಂದ ನಡೆಯುತ್ತಿದೆ. ಈ ವರೆಗೆ 55 ರಿಂದ 70 ವರ್ಷ ವಯಸ್ಸಿನ 3,500 ಹಿರಿಯ ನಾಗರಿಕರಿಗೆ ನೆರವಾಗಿದೆ. ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ ರಾಧಾ ಎಸ್ ಮೂರ್ತಿ ಅವರು ಪ್ರತಿಕ್ರಿಯಿಸಿದ್ದಾರೆ. 2021ರವರೆಗೆ ದೇಶದಲ್ಲಿ ಒಟ್ಟು ಹಿರಿಯ ನಾಗರಿಕರ ಪೈಕಿ ಸುಮಾರು ಶೇ.89ರಷ್ಟು ಮಂದಿ ನಿವೃತ್ತಿಯ ನಂತರ ಯಾವುದೇ ಸಾಮಾಜಿಕ ಭದ್ರತೆ ಹೊಂದಿಲ್ಲ. ಅಂತವರ ಪೈಕಿ ಕೆಲವರು ಉದ್ಯೋಗ ಪಡೆಯಲು ಮುಂದಾಗುತ್ತಾರೆ ಎಂದು ತಿಳಿಸಿದರು.












Click it and Unblock the Notifications