ಮಧ್ಯ ಪ್ರದೇಶ ಚುನಾವಣೆ: ಕಾಂಗ್ರೆಸ್-ಬಿಜೆಪಿ ನಡುವೆ ಅಂತರ ಬಹು ತೆಳು

ಭೋಪಾಲ್, ಡಿಸೆಂಬರ್ 12: ಮಧ್ಯ ಪ್ರದೇಶದ ವಿಧಾನಸಭೆ ಚುನಾವಣೆ ಪಂಚ ರಾಜ್ಯ ಚುನಾವಣೆಯಲ್ಲಿ ಅತ್ಯಂತ ಕುತೂಹಲಕಾರಿಯಾಗಿತ್ತು. ಅಂತಿಮಾಗಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮೆಯಾದರೂ ಬಿಜೆಪಿ-ಕಾಂಗ್ರೆಸ್ ನಡುವೆ ಅಂತರ ಕಡಿಮೆ.

224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಅಂತಿಮ ಫಲಿತಾಂಶದ ಪ್ರಕಾರ ಕಾಂಗ್ರೆಸ್‌ 114 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 109 ಸ್ಥಾನಗಳಲ್ಲಿ ಗೆದ್ದಿದೆ. ಬಿಎಸ್‌ಪಿ ಎರಡು, ಎಸ್‌ಪಿ 1 ಮತ್ತು ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಹುಮತಕ್ಕೆ 116 ಸ್ಥಾನ ಬೇಕಿತ್ತು.

ಕಾಂಗ್ರೆಸ್‌ ಪಕ್ಷವು ಬಿಜೆಪಿಗಿಂತಲೂ ಐದು ಸ್ಥಾನ ಹೆಚ್ಚು ಗಳಿಸಿದೆ ಆದರೆ ಶೇಕಡಾವಾರು ಮತಗಳ ಲೆಕ್ಕ ಹಿಡಿದರೆ ಬಿಜೆಪಿಯು ಕಾಂಗ್ರೆಸ್‌ಗಿಂತಲೂ ಹೆಚ್ಚು ಮತಗಳನ್ನು ಪಡೆದಿದೆ.

Madhya Pradesh election result: vote difference is very lesser

ಕಾಂಗ್ರೆಸ್‌ ಪಕ್ಷ 40.09% ಮತ ಗಳಿಸಿದ್ದರೆ. ಬಿಜೆಪಿಯು 41% ಮತ ಗಳಿಸಿದೆ. ಕಾಂಗ್ರೆಸ್ ಗಳಿಸಿರುವ ಒಟ್ಟು ಮತ 15,595,153. ಬಿಜೆಪಿಯು 15,642,980 ಮತಗಳನ್ನು ಗಳಿಸಿದೆ. ಎರಡೂ ಪಕ್ಷಕ್ಕೆ ಇರುವ ಅಂತರ ಕೇವಲ 47,827 ಮತಗಳು ಮಾತ್ರ.

ಇದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವಿನ ಈ ವರೆಗಿನ ಅತಿ ಕಡಿಮೆ ಅಂತರ ಆಗಿರಲಿಕ್ಕೂ ಸಾಕು. ಒಬ್ಬ ವ್ಯಕ್ತಿಯ ಗೆಲುವಿನ ಅಂತರಕ್ಕಿಂತಲೂ ಕಡಿಮೆ ಮತಗಳ ಅಂತರ ಎರಡೂ ಪಕ್ಷಗಳ ನಡುವೆ ಇದೆ. ಇದು ಎರಡೂ ಪಕ್ಷಗಳ ನಡುವೆ ಇದ್ದ ತೀವ್ರ ಜಿದ್ದಾ-ಜಿದ್ದಿಯನ್ನು ಸೂಚಿಸುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 80 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ 104 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತಲೂ 2% ಮತಗಳು ಅಂದರೆ 6,58,002 ಮತಗಳನ್ನು ಹೆಚ್ಚಿಗೆ ಗಳಿಸಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಗಳಿಸಿದೆ ಆದರೂ ಅಂತರ ಬಹು ಕಡಿಮೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+