Maha Shivaratri: ಶಿವ ಅಂದರೆ ಭಕ್ತರಿಗೆ ಯಾಕಷ್ಟು ಇಷ್ಟ ಗೊತ್ತಾ?

ದೇಹಕ್ಕೆ ಬೂದಿ ಹಚ್ಚಿಕೊಂಡು, ಸೊಂಟಕ್ಕೆ ಹುಲಿ ಚರ್ಮ ಸುತ್ತಿಕೊಂಡು, ಕೈಯಲ್ಲಿ ತ್ರಿಶೂಲ ಹಿಡಿದು, ಅದಕ್ಕೆ ಡಂಗೂರ ಸಿಕ್ಕಿಸಿ, ಉದ್ದದ ಕೂದಲನ್ನು ಮುಡಿಕಟ್ಟಿ, ಅದರ ಮೇಲೆ ಗಂಗೆಯನ್ನು ಪ್ರತಿಷ್ಟಾಪಿಸಿ, ಕತ್ತಿಗೆ ನಾಗರಹಾವನ್ನು ಸುತ್ತಿಕೊಂಡು ನೃತ್ಯ ಮಾಡುವ ಶಿವನನ್ನು ಭಕ್ತಿಯಿಂದ ಪೂಜಿಸುವವರ ಸಂಖ್ಯೆಗೇನು ಕಡಿಮೆಯೇನು ಇಲ್ಲ.

ಶಿವನೆಂದರೆ ಜಾತಿ ಮತ ಮೀರಿದವ, ಹಾವನ್ನೇ ಆಭರಣ ಮಾಡಿಕೊಂಡವ, ಆದರೂ ಭಕ್ತರಿಗೆ ಶಿವನಂದ್ರೆ ಯಾಕಿಷ್ಟು ಭಕ್ತಿ. ಅದರಲ್ಲೂ ಯುವತಿಯರು, ಮಹಿಳೆಯರಿಗೆ ವಿಶೇಷ ಪ್ರೀತಿ ಯಾಕೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ‌ ಬನ್ನಿ.

Why Devotees Admire Lord Shiva a Lot Here The Reason

ಶಿವನಿಗೆ ಭಕ್ತಿಯಷ್ಟೆ ಪ್ರಸಾದ

ಶಿವ ಭಕ್ತರಿಗೆ ಮಾರು ಹೋಗುವ ದೇವ‌. ಹಿಂದುಮುಂದು ನೋಡದೆ ತನ್ನ ಭಕ್ತರಿಗೆ ಬೇಡಿದನ್ನು ಕೊಟ್ಟು ಬಿಡುವ ಇಷ್ಟಾರ್ಥ ಸಿದ್ಧಿಕರ್ತ. ಶಿವನಿಗೆ ಬೇಕಿರುವುದು ಭಕ್ತಿಯೊಂದೇ. ಹೀಗಾಗಿ ಶಿವನನ್ನು ಪೂಜಿಸಬೇಕಾದರೆ ಇಂತಹದ್ದೆ ಸ್ಥಳವೋ, ವಿಧಾನವೋ, ಪೂಜಾ ವಿಧಾನಗಳೊ ಬೇಕಾಗಿಲ್ಲ. ಕಣ್ಮುಚ್ಚಿಕೊಂಡು ತಾವಿರುವ ಸ್ಥಳದಲ್ಲಿಯೇ ಕುಳಿತು ಶಿವನನ್ನು ಸ್ಮರಿಸಿದರೆ ಸಾಕು ಭಕ್ತರಿಗೆ ಬೇಡಿಕೆ ಈಡೇರಿದಂತೆ ಎಂಬ ಭಾವ ಭಕ್ತರಲ್ಲಿ ನೆಲೆಯೂರಿದೆ.

ಶಿವ ನಮ್ಮ ಹಿರಿಕನಿದಂತೆ

ಶಿವನ ಸ್ವರೂಪವನ್ನು ನೋಡಿದರೆ ನಮ್ಮ ಹಿರಿಕರೊಬ್ಬರನ್ನು ನೋಡಿದಂತೆ ಭಾವ. ಪ್ರಕೃತಿಗೆ ಪೂರಕವಾಗಿ ಭಕ್ತಿಯಿಂದ ಅನ್ಯೋನ್ಯತೆಯಿಂದ ಹೇಗೆ ಬದುಕಿ ಬಾಳಬೇಕೆಂದು ತೋರಿಸಿಕೊಟ್ಟು ನಮ್ಮನ್ನು ಸದಾ ಕಾಯುತ್ತಿರುವವನೇ ಶಿವ. ಶಿವನೆಂದರೆ ಪ್ರಕೃತಿಯ ಪ್ರತಿರೂಪ. ಆತನನ್ನು ನೆನೆದು ಯಾವುದೇ ಕೆಲಸ ಪ್ರಾರಂಭಿಸಿದರೂ ಯಾವುದೇ ವಿಘ್ನಗಳು ತಲೆದೂರುವುದಿಲ್ಲ ಎಂಬ ಭಾವ‌‌.

ಸ್ಮಶಾನ ವಾಸಿ ಪರಮಶಿವ

ಬದುಕಿನ ನಶ್ವರತೆಯ ಕುರಿತು ಶಿವ, ತಾನೆ ಸ್ಮಶಾನ ಕಾಯುವ ಮೂಲಕ ಜನತೆಗೆ ಬದುಕಿನ ನಿಜಾರ್ಥಗಳನ್ನು ತಿಳಿಸಿಕೊಟ್ಟಿದ್ದಾನೆ. ಏಷ್ಟೇ ದುಡ್ಡಿರಲಿ, ಐಶ್ವರ್ಯ ಇರಲಿ, ಅಧಿಕಾರಿ ಇರಲಿ, ಸೌಂದರ್ಯವಿರಲಿ ಯಾವುದು ಶಾಶ್ವತವಲ್ಲ. ಬದುಕಿನ ಅಂತ್ಯ ಕಾಲದಲ್ಲಿ ಮೂರು ಅಡಿ ಜಾಗ ಸಿಕ್ಕರೆ ಅದೇ ಪುಣ್ಯವೆಂಬ ಬದುಕಿನ ಸಾಕ್ಷಾತ್ಕಾರವನ್ನು ತೋರಿಸಿಕೊಟ್ಟಿದ್ದಾನೆ.

ಅರ್ಧನಾರೀಶ್ವರನಾಗಿ ಶಿವ

ಪ್ರಕೃತಿಯ ಚಲನೆಗೆ, ಅನ್ಯೋನ್ಯತೆಯ ಬದುಕಿಗೆ ಗಂಡ-ಹೆಣ್ಣುಗಳು ಸಮಾನವಾಗಿ ಬದುಕುವುದು ಅಗತ್ಯ ಎಂಬುದನ್ನು ಶಿವ ಅರ್ಧನಾರೀಶ್ವರನಾಗಿ ಸಾಕ್ಷಿಯಾಗಿದ್ದಾನೆ. ಗಂಡ-ಹೆಂಡತಿ ಬದುಕಿನ ಬಂಡಿಗೆ ಜೋಡೆತ್ತು ಇದ್ದಂಗೆ. ಗಂಡ-ಹೆಂಡತಿ ಇಬ್ಬರಲ್ಲಿ ಒಬ್ಬರು ಹಿಂದುಳಿದರೂ ಬದುಕು ಸುಗಮವಾಗಿ ಸಾಗಲಾರದು. ಹೀಗಾಗಿ ಯುವತಿಯರು ತಮಗೆ ಅರ್ಧನಾರೀಶ್ವನಂತಹ ಸ್ವಭಾವದ ಹುಡುಗ ಬೇಕಂತಲೇ ಶಿವನಲ್ಲಿ ಪ್ರಾರ್ಥಿಸುತ್ತಾನೆ.

ಇನ್ನೇನು ಮಹಾಶಿವರಾತ್ರಿ ಹತ್ತಿರವಾಗುತ್ತಿದೆ. ಈ ಶಿವರಾತ್ರಿ ದಿನ ನಿಮ್ಮ ಹತ್ತಿರದ ಶಿವನ ದೇವಸ್ಥಾನಕ್ಕೆ ತೆರಳಿ ಒಂದು ಎಲೆ ಬಿಲ್ವಪತ್ರೆ ಅರ್ಪಿಸಿದರೂ ಸಾಕು ಶಿವ ತೃಪ್ತನಾಗುತ್ತಾನೆ. ಶಿವನಿಗೆ ಮಂತ್ರ ಘೋಷಗಳು ಬೇಕಿಲ್ಲ, ನಿಮ್ಮ ನಿಷ್ಕಲ್ಮಶ ಭಕ್ತಿಯೊಂದೆ ಸಾಕು. ಅದನ್ನೇ ಅಲ್ಲವೇ ಬೇಡರ ಕಣ್ಣಪ್ಪ ನಮಗೆ ತೋರಿಸಿಕೊಟ್ಟದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+