Holi 2024: ಹೋಳಿ ಯಾವಾಗ? ಮಾರ್ಚ್ 24? 25? ದಿನಾಂಕದ ಬಗ್ಗೆ ಗೊಂದಲಗಳಿಗೆ ಇಲ್ಲಿದೆ ಉತ್ತರ
ಬಣ್ಣಗಳ ಹಬ್ಬ ಹೋಳಿ ಬರುತ್ತಿದೆ. ಇದನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹೋಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಹೋಲಿಕಾ ದಹನ ಮತ್ತು ಎರಡನೇ ದಿನ ಬಣ್ಣಗಳೊಂದಿಗೆ. ಈ ಬಾರಿ ಹೋಳಿ ದಿನಾಂಕಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಹೋಳಿ ಮಾರ್ಚ್ 24 ರಂದು ಆಚರಿಸಲಾಗುತ್ತಾ ಅಥವಾ 25 ರಂದು ಇದಿಯಾ ಎಂಬ ಗೊಂದಲಗಳಿವೆ. ಹಾಗಾದರೆ ಹೋಳಿ ಹಬ್ಬವನ್ನು ಯಾವಾಗ ಆಚರಿಸಲಾಗುತ್ತದೆ ಎಂದು ತಿಳಿಯೋಣ.
ಹೋಳಿ ಯಾವಾಗ? ಮಾರ್ಚ್ 24? 25?
ಹೋಳಿ ಹಬ್ಬವನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. 24 ಮತ್ತು 25 ಎರಡೂ ದಿನ ಪೂರ್ಣಿಮಾ ತಿಥಿ ಇರುವುದರಿಂದ ಹೋಳಿ ದಿನಾಂಕದ ಬಗ್ಗೆ ಗೊಂದಲವಿದೆ. ಫಾಲ್ಗುಣ ಪೂರ್ಣಿಮೆಯ ದಿನದಂದು ಹೋಳಿಕಾ ದಹನವನ್ನು ಮಾಡಲಾಗುತ್ತದೆ. ಮರುದಿನ ರಂಗೋತ್ಸವವನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆ ಶಾಸ್ತ್ರದಲ್ಲಿದೆ.

ಈ ಬಾರಿ ಪೂರ್ಣಿಮಾ ತಿಥಿಯು ಮಾರ್ಚ್ 24 ರಂದು ಬೆಳಿಗ್ಗೆ 9.56 ಕ್ಕೆ ಪ್ರಾರಂಭವಾಗಿ ಮರುದಿನ ಅಂದರೆ ಮಾರ್ಚ್ 25 ರಂದು ಪ್ರದೋಷ ಕಾಲಕ್ಕೂ ಮುನ್ನ ಮುಕ್ತಾಯಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಎರಡೂ ದಿನ ಪೂರ್ಣಿಮಾ ತಿಥಿ ಇದ್ದರೆ ಮೊದಲ ದಿನ ಪ್ರದೋಷ ಕಾಲದಲ್ಲಿ ಪೂರ್ಣಿಮಾ ತಿಥಿ ಬೀಳುತ್ತಿದ್ದರೆ ಅದೇ ದಿನ ಹೋಳಿಕಾ ದಹನ ಮಾಡಬೇಕು ಎಂಬ ನಿಯಮ ಶಾಸ್ತ್ರದಲ್ಲಿದೆ. ಈ ನಿಯಮದ ಪ್ರಕಾರ ಈ ಬಾರಿ ಹೋಳಿಕಾ ದಹನವನ್ನು ಮಾರ್ಚ್ 24 ರಂದು ಮಾಡಲಾಗುವುದು. ರಂಗೋತ್ಸವದ ಹಬ್ಬವನ್ನು ಮರುದಿನ ಅಂದರೆ ಮಾರ್ಚ್ 25 ರಂದು ಆಚರಿಸಲಾಗುತ್ತದೆ.
ಹೋಳಿ ಬಗ್ಗೆ ನಂಬಿಕೆಗಳು:
ಹಿಂದೂ ಧರ್ಮದ ಪ್ರಕಾರ, ಹೋಲಿಕಾ ದಹನವು ಪೌರಾಣಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಏಕೆಂದರೆ ಹೋಲಿಕಾ ದಹನವು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಈ ದಿನದಂದು ಪೂಜೆ ಮಾಡುವುದರಿಂದ ಆ ವ್ಯಕ್ತಿಯು ಉತ್ತಮ ಆರೋಗ್ಯವನ್ನು, ಸಂತೋಷವನ್ನು ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ. ಈ ದಿನ ಶಿವನನ್ನು ಮತ್ತು ಹನುಮಂತನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಅಗ್ನಿ ದೇವನಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ.

ಹೋಲಿಕಾ ದಹನ ಪೂಜಾ ವಿಧಾನ:
*ಮೊದಲನೆಯದಾಗಿ ಹೋಳಿಕಾಳನ್ನು ಪೂಜಿಸಲು ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ಕುಳಿತುಕೊಳ್ಳಿ.
*ಹಸುವಿನ ಸಗಣಿಯಿಂದ ಹೋಲಿಕಾ ಮತ್ತು ಪ್ರಹ್ಲಾದನ ಮೂರ್ತಿಗಳನ್ನು ತಯಾರಿಸಿ. ಹೂವುಗಳು, ಅರಿಶಿನ, ಕುಂಕುಮ, ಹಣ್ಣುಗಳು ಮತ್ತು ನೀರು ತುಂಬಿದ ಕಲಶವನ್ನು ತಟ್ಟೆಯಲ್ಲಿ ಇರಿಸಿ.
*ನರಸಿಂಹ ದೇವರನ್ನು ಧ್ಯಾನಿಸಿ ನಂತರ ಅನ್ನ, ಸಿಹಿತಿಂಡಿಗಳು, ಹೂವುಗಳು ಇತ್ಯಾದಿಗಳನ್ನು ಅರ್ಪಿಸಿ.
*ಉಳಿದ ಸಾಮಾನುಗಳನ್ನೆಲ್ಲ ತೆಗೆದುಕೊಂಡು ಹೋಲಿಕೆ ಮುಂದೆ ಇಟ್ಟು ಸುಟ್ಟ ನಂತರ ಅಲ್ಲಿ ಹೋಲಿಕೆಯನ್ನು ಪೂಜಿಸಿ. ಪ್ರಹ್ಲಾದನ ಹೆಸರನ್ನು ತೆಗೆದುಕೊಂಡು ಅವನ ಹೆಸರಿನಲ್ಲಿ ಹೂವುಗಳನ್ನು ಅರ್ಪಿಸಿ.
*ಹಾಗೆಯೇ ನರಸಿಂಹ ದೇವರ ಹೆಸರಿನಲ್ಲಿ ಐದು ಧಾನ್ಯಗಳನ್ನು ಅರ್ಪಿಸಿ. ಅಕ್ಷತೆ, ಅರಿಶಿನ ಮತ್ತು ಹೂವುಗಳು ಇತ್ಯಾದಿ. ಎರಡೂ ಕೈಗಳನ್ನು ಮಡಚಿ ಪ್ರಾರ್ಥನೆ ಮಾಡಿ.












Click it and Unblock the Notifications