Vaikuntha Ekadashi 2025: ವೈಕುಂಠ ಏಕಾದಶಿಯಂದು ಹೀಗೆ ಮಾಡಿದರೆ ಸಂಪತ್ತು, ಧಾನ್ಯಗಳ ಕೊರತೆ ಇರಲ್ಲ
ಸನಾತನ ಧರ್ಮದಲ್ಲಿ ವೈಕುಂಠ ಏಕಾದಶಿಯನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಭಕ್ತರು ವಿಷ್ಣುವನ್ನು ಪೂಜಿಸಿ ಆಶೀರ್ವಾದವನ್ನು ಪಡೆಯುತ್ತಾರೆ. ಈ ದಿನದಂದು ಅನೇಕ ಭಕ್ತರು ಉಪವಾಸ ಮಾಡುತ್ತಾರೆ. ಈ ದಿನ ಯಾರು ಉಪವಾಸ ಆಚರಿಸುತ್ತಾರೋ ಮತ್ತು ಪೂರ್ಣ ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗುತ್ತದೆ.
ವೈಕುಂಠ ಏಕಾದಶಿಯ ಆಧ್ಯಾತ್ಮಿಕ ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ ವೈಕುಂಠ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತವೆ. ಜೊತೆಗೆ ಮರಣಾನಂತರ ಅವನು ಮೋಕ್ಷವನ್ನು ಪಡೆಯುತ್ತಾನೆ. ಈ ದಿನ ವಿಷ್ಣುವನ್ನು ಮೆಚ್ಚಿಸಲು ವಿಶೇಷ ಸಂದರ್ಭವೆಂದು ಪರಿಗಣಿಸಲಾಗಿದೆ. ಅಲ್ಲದೆ ಕೆಲವು ವಿಶೇಷ ಕಾರ್ಯಗಳನ್ನು ಮಾಡುವುದರ ಮೂಲಕ ವಿಷ್ಣುವಿನ ಆಶೀರ್ವಾದವನ್ನು ಪಡೆಯಬಹುದು.

ವೈಕುಂಠ ಏಕಾದಶಿ ದಿನಾಂಕ 2025
ವೈಕುಂಠ ಏಕಾದಶಿಯ ದಿನಾಂಕ ಜನವರಿ 09ರಂದು ಮಧ್ಯಾಹ್ನ 12:22ಕ್ಕೆ ಪ್ರಾರಂಭವಾಗಿ ಜನವರಿ 10ರಂದು ಬೆಳಿಗ್ಗೆ 10:19ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿಯ ಆಧಾರದ ಮೇಲೆ ಉಪವಾಸವನ್ನು ಜನವರಿ 10ರ ಶುಕ್ರವಾರದಂದು ಆಚರಿಸಲಾಗುತ್ತದೆ. ಹಾಗಾದರೆ ವೈಕುಂಠ ಏಕಾದಶಿಯಂದು ಯಾವ ಕಾರ್ಯಗಳಿಂದಾಗಿ ವಿಷ್ಣುವಿನ ಆಶೀರ್ವಾದ ಪಡೆಯಬಹುದು ಎಂದು ತಿಳಿಯೋಣ.
ವೈಕುಂಠ ಏಕಾದಶಿಯಂದು ದಾನ
ವೈಕುಂಠ ಏಕಾದಶಿಯ ದಿನದಂದು ವಿಷ್ಣವಿನ ಭಕ್ತರು ನಿರ್ಗತಿಕರಿಗೆ ಆಹಾರ, ಬಟ್ಟೆ ಮತ್ತು ದಕ್ಷಿಣೆಯನ್ನು ನೀಡುವುದರ ಮೂಲಕ ಪುಣ್ಯದ ಪ್ರಯೋಜನವನ್ನು ಪಡೆಯುತ್ತಾರೆ. ಈ ಕಾರ್ಯದಿಂದಾಗಿ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಸೃಷ್ಟಿಯಾಗುತ್ತದೆ. ಜೀವನದಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾದದರೆ, ಸಫಲ ಏಕಾದಶಿಯಂದು ಉಪವಾಸ ಮಾಡಿ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.
ವೈಕುಂಠ ಏಕಾದಶಿಯಂದು ತುಳಸಿ ಗಿಡ ನೆಡುವುದರ ಫಲ
ವೈಕುಂಠ ಏಕಾದಶಿಯಂದು ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ವಿಷ್ಣುವನ್ನು ಆರಾಧನೆ ಮಾಡಬೇಕು. ಈ ದಿನ ವಿಷ್ಣುವನ್ನು ಸರಿಯಾಗಿ ಪೂಜಿಸಿ, ತುಳಸಿ ಗಿಡವನ್ನು ನೆಡಬೇಕು. ಇದು ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ತರುತ್ತದೆ ಎಂದು ನಂಬಲಾಗುತ್ತದೆ. ಇದರಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ, ಸಂಪತ್ತು ಸಮೃದ್ಧಿಯಾಗಲಿದೆ.

ವೃತ್ತಿ ಪ್ರಗತಿಗೆ ವಿಷ್ಣುದೇವನ ಪೂಜೆ
ಕಠಿಣ ಪರಿಶ್ರಮದ ಹೊರತಾಗಿಯೂ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಿಗದಿದ್ದರೆ, ವೈಕುಂಠ ಏಕಾದಶಿಯ ದಿನದಂದು ವಿಷ್ಣುವಿನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ. ನಿಮ್ಮ ಕೈಯಲ್ಲಿ ನೀರು ಮತ್ತು ಹಳದಿ ಹೂವುಗಳನ್ನು ತೆಗೆದುಕೊಂಡು ಹರಿಯನ್ನು ಪ್ರಾರ್ಥಿಸಿ. ಜೊತೆಗೆ ನಾರಾಯಣ ಕವಚ ಪಠಿಸಿ. ಇದಾದ ನಂತರ ದಕ್ಷಿಣವರ್ತಿ ಶಂಖದಲ್ಲಿ ನೀರನ್ನು ತುಂಬಿಸಿ ವಿಷ್ಣುವಿನ ಅಭಿಷೇಕವನ್ನು ಮಾಡಿ. ಇದು ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.












Click it and Unblock the Notifications