Varamahalakshmi Festival: ವರಮಹಾಲಕ್ಷ್ಮೀ ಒಲಿಯಲು ಪೂಜಾ ವಿಧಿ ವಿಧಾನ ಹೇಗಿರಬೇಕು? ವ್ರತದ ಮಹತ್ವ, ಆಚರಣೆ
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ. 2025ರ ಶ್ರಾವಣ ಮಾಸ ಜುಲೈ 25 ರಿಂದ ಆಗಸ್ಟ್ 22 ರವರೆಗೆ ಇರುತ್ತದೆ. ಈ ಮಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವು ಬಹಳ ವಿಶೇಷವಾಗಿದೆ. ಬಹುತೇಕ ಜನರಿಗೆ ವರಮಹಾಲಕ್ಷ್ಮಿ ಹಬ್ಬ ಯಾವಾಗ ಎಂದು ಗೊಂದಲವಿದೆ. ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.
ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ. ಈ ವರ್ಷ ಯಾವಾಗ ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಬೇಕು ಎಂಬ ಗೊಂದಲಕ್ಕೆ ಖ್ಯಾತ ಜೋತಿಷ್ಯಿಗಳು ಭಾರತೀಯ ಸಂಪ್ರಾದಾಯ ಟ್ರಸ್ಟ್ ನ ಅಧ್ಯಕ್ಷರು ಡಾ. ಮಹರ್ಷಿ ಗುರೂಜಿ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. 2025ರ ಆಗಸ್ಟ್ 8ರ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದು ಅತ್ಯಂತ ಶುಭಕರವಾಗಿದೆ ಎಂದು ಹೇಳಿದ್ದಾರೆ.

ಈ ವರ್ಷ ಆಗಸ್ಟ್ 8, ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಅವತ್ತೇ ಹಬ್ಬವನ್ನ ಆಚರಣೆ ಮಾಡಬೇಕು. ದೇವರಿಗೆ ಎಷ್ಟು ಅಗತ್ಯವೋ ಅಷ್ಟು ಒಡವೆಯನ್ನ ಹಾಕಿ ಪೂಜೆಯನ್ನ ಮಾಡಬೇಕು. ಇದು ವರವನ್ನು ಕೊರುವಂತ ಹಬ್ಬ, ಇಲ್ಲಿ ಆಡಂಬರಕ್ಕಿಂತ ಭಕ್ತಿ ಭಾವ ಮುಖ್ಯವಾಗಿರುತ್ತದೆ. ಕಳಸ ಪ್ರತಿಷ್ಠಾಪನೆ ಮಾಡುವಾಗ ಬೆಳ್ಳಿ, ತಾಮ್ರವನ್ನ ಉಪಯೋಗಿಸಬೇಕು. ಅಲಂಕಾರ, ಪೂಜೆ ವಿಧಿ ವಿಧಾನ ತುಂಬಾ ಮುಖ್ಯವಾಗಿರುತ್ತದೆ. ಲಕ್ಷ್ಮಿ ಒಬ್ಬಳನೇ ಕರೆದರೇ ಬರುವುದಿಲ್ಲ, ವಿಷ್ಣುವನ್ನು ಸೇರಿ ಕರೆದಾಗ ಮಾತ್ರ ಲಕ್ಷ್ಮಿ ಬರ್ತಾಳೆ. ಕಳಸದ ಒಳಗೆ ಐದು ತರದ ಹಣ್ಣು ಹಾಗೂ ಅಕ್ಕಿ, ದಕ್ಷಿಣೆ ಹಾಕಿ, ಮಾವಿನ ಸೊಪ್ಪನ್ನು ಹಾಕಿ ಅವರ ಮೇಲೆ ಬೆಳ್ಳಿ ಚೊಂಬು ಇಡಬೇಕು ಎಂದು ಡಾ. ಮಹರ್ಷಿ ಗುರೂಜಿಗಳು ಹೇಳಿದ್ದಾರೆ.
ಬೆಳ್ಳಿ ಚೊಂಬು ಮೇಲೆ ಐದು ವೀಳ್ಯದೆಲೆಯನ್ನು ಇಟ್ಟು ಅರಿಶಿನ ಹಚ್ಚಿನ ತೆಂಗಿನ ಕಾಯಿಯನ್ನ ಇಡ್ಬೇಕು. ದೇವಿಯ ಮುಖವಾಡ ಯಾವುದಾದ್ರೂ ಇಡಬಹುದು. ಕೆಲವರು ಬೆಳ್ಳಿ,ಬಂಗಾರದ ಮುಖವಾಡವನ್ನ ಇಡುತ್ಥಾರೆ. ಅವರಿಷ್ಟದ ಹಾಗೇ ಮುಖವಾಡವನ್ನ ಇಡಬಹುದು. ಉತ್ತರ ಭಾಗದಲ್ಲಿ ವರಮಹಾಲಕ್ಷ್ಮಿಯನ್ನ ಪೂಜೆ ಮಾಡಬೇಕು.
ಲಕ್ಷ್ಮಿಯ ಪ್ರಿಯವಾದ ವಸ್ತುಗಳು, ಸುಗಂಧ ಭರಿತವಾದ ಹೂವುಗಳು ದೇವಿಗೆ ಪ್ರಿಯವಾಗಿದ್ದು,ಆದರೆ, ಲಕ್ಷ್ಮಿಗೆ ತುಳಸಿ ಇಡಬಾರದು. ತುಳಸಿ ಇಟ್ಟು ಪೂಜೆ ಮಾಡಬಾರದು. ಹೋಳಿಗೆ, ಪಾಳಸವನ್ನ ನೈವೇದ್ಯಕ್ಕೆ ಇಡ್ಬಹುದು. ದೀಪ ಹಚ್ಚುವಾಗ ಮೂರು ತರಹದ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು. ಸರಿಯಾದ ಕ್ರಮದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನ ಮಾಡುವುದರಿಂದ ನಿಮ್ಮ ಕಷ್ಟಗಳು, ಸಮಸ್ಯೆಗಳು ಬಗೆಹರಿಯುತ್ತವೆ. ಲಕ್ಷ್ಮಿ ಜೊತೆಗೆ ಕುಬೇರನ ಆರಾಧನೆ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಎಂದು ಡಾ. ಮಹರ್ಷಿ ಗುರೂಜಿಗಳು ಹೇಳಿದ್ದಾರೆ.
ಇದು ಮುತ್ತೈದೆಯರೇ ಆಚರಿಸುವ ವಿಶೇಷವಾದ ವ್ರತವಾದ್ದರಿಂದ ಈ ಪೂಜೆಗೆ ಕುಳಿತುಕೊಳ್ಳುವಾಗ ರೇಷ್ಮೆ ಸೀರೆ ಉಡುವುದು ಶ್ರೇಷ್ಠ. ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಒದ್ದೆ ಕೂದಲಾಗಲೀ ಅಥವಾ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜಡೆ ಹಾಕಿರಬೇಕು. ಮುತ್ತೈದೆಯರಿಗೆ ಹಣೆಯಲ್ಲಿನ ಸಿಂಧೂರವೇ ಪ್ರಾಮುಖ್ಯವಾದ್ದರಿಂದ ಹಣೆಯಲ್ಲಿ ದೊಡ್ಡದಾದ ಕುಂಕುಮವಿರಲಿ. ಮನೆಯ ಬಾಗಿಲಿಗೆ ಮಾವಿನ ಸೊಪ್ಪು ಹಾಗೂ ಬಾಳೆ ಎಲೆ ಮತ್ತು ಕಂದುಗಳಿದ್ದರೆ ಪೂಜೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ












Click it and Unblock the Notifications