ಉಚಿತ ಗಣೇಶನ ವಿಗ್ರಹಗಳಿಗಾಗಿ ಈಗಲೇ ಕರೆಮಾಡಿ

Do you want free Ganesh Idols?
ಬೆಂಗಳೂರು, ಆ.20: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ದೇವ್ರು ದಿಂಡರು ಮೇಲೆ ಬಹಳ ನಂಬಿಕೆ. ಮುಜರಾಯಿ ಸಚಿವರಾಗಿದ್ದಾಗ ಸದಾ ಸುದ್ದಿಯಲ್ಲಿರುತ್ತಿದ್ದ ಮಾಜಿ ಸಚಿವರು ಗಂಗಾಜಲ, ಲಡ್ಡು ವಿತರಿಸಿದ್ದು ನಿಮಗೆ ತಿಳಿದೇ ಇದೆ. ಈಗ ಇನ್ನೊಂದು ಹೆಜ್ಜೆ ಮುಂದು ಹೋಗಿ ಗೌರಿ ಗಣೇಶ ಹಬ್ಬಕ್ಕೆ ಉಚಿತವಾಗಿ ಗೌರಿ ಗಣೇಶ ವಿಗ್ರಹ ನೀಡಲು ನಿರ್ಧರಿಸಿದ್ದಾರೆ.

ಐದು ಅಡಿ ಎತ್ತರದ ಗಣೇಶನ ವಿಗ್ರಹ ರೆಡಿಯಾಗಿದ್ದು ಆಸಕ್ತರು ಗಣೇಶ ಮಿತ್ರ ಮಂಡಳಿಯನ್ನು ಸಂಪರ್ಕಿಸ ಬಹುದೆಂದು ತಿಳಿಸಿದ್ದಾರೆ. ರಾಜಧಾನಿಯಲ್ಲಿ ಯುವಕರು ಗಣೇಶನಿಗಾಗಿ ಚಂದಾ ವಸೂಲು ಮಾಡುವುದನ್ನು ಬಿಟ್ಟು ನಮ್ಮಲ್ಲಿ ಉಚಿತವಾಗಿ ವಿಗ್ರಹ ತೆಗೆದು ಕೊಳ್ಳಲಿ ಎಂದಿದ್ದಾರೆ.

ಬೆಂಗಳೂರಿನಲ್ಲಿ 2500, ಮಾಲೂರಿನಲ್ಲಿ ಒಂದು ಸಾವಿರ ಗಣೇಶನ ವಿಗ್ರಹವನ್ನು ವಿತರಿಸಲಾಗುವುದು. ಆಗಸ್ಟ್ 26ರ ಒಳಗೆ ಹೆಸರು ನೊಂದಾಯಿಸಿದವರಿಗೆ ವಿಗ್ರಹ ವಿತರಿಸಲಾಗುವುದು. ಬಾಲಗಂಗಾಧರ ತಿಲಕರು ಗಣೇಶ ಹಬ್ಬದ ಮೂಲಕವೇ ಸ್ವಾತಂತ್ರ್ಯದ ಕಿಚ್ಚ್ಚು ಹಚ್ಚಿದರು. ಅಂದು ಆರಂಭವಾದ ಸಾರ್ವಜನಿಕ ಗಣೇಶೋತ್ಸವ ಇಂದಿಗೂ ನಡೆದು ಕೊಂಡು ಬರುತ್ತಿದೆ.

ಸಾರ್ವಜನಿಕರು ಉಚಿತವಾಗಿ ವಿಗ್ರಹ ತೆಗೆದು ಕೊಂಡು ಹೋಗಬಹುದು.ಆಸಕ್ತರು ಈ ನಂಬರ್ ಗೆ ಕರೆ ಮಾಡಿ: 080 -2346 -5588 / 2330 -0959 . ಮೊಬೈಲ್ ಸಂಖ್ಯೆ: 99869 -71459.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+