Dattatreya Jayanti 2024: ದತ್ತಾತ್ರೇಯ ಜಯಂತಿ ಯಾವಾಗ? ಕಲಿಯುಗದ ದತ್ತಾತ್ರೇಯ ಯಾರೆಂದು ತಿಳಿಯಿರಿ
ಕಲಿಯುಗದ ಅಧಿಪತಿ ಮತ್ತು ತ್ರಿಮೂರ್ತಿಗಳ ಅವತಾರವೆಂದು ಪರಿಗಣಿಸಲಾದ ದತ್ತಾತ್ರೇಯ ದೇವನ ಜನ್ಮ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತದೆ. ಈ ವರ್ಷ ದತ್ತಾತ್ರೇಯ ಜಯಂತಿಯನ್ನು ಮಾರ್ಗಶೀರ್ಷ ಪೂರ್ಣಿಮಾ ದಿನ ಅಂದರೆ ಡಿಸೆಂಬರ್ 14ರ ಶನಿವಾರದಂದು ಆಚರಿಸಲಾಗುತ್ತದೆ. ಹಾಗಾದರೆ ಯಾರು ಈ ದತ್ತಾತ್ರೇಯ? ಯಾರ ಪುತ್ರ? ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ದತ್ತಾತ್ರೇಯ ಯಾರು?
ದತ್ತಾತ್ರೇಯರನ್ನು ಪರಬ್ರಹ್ಮಮೂರ್ತಿ, ಸದ್ಗುರು ಮತ್ತು ಶ್ರೀ ಗುರುದೇವದತ್ ಎಂದೂ ಕರೆಯಲಾಗುತ್ತದೆ. ನಂಬಿಕೆಗಳ ಪ್ರಕಾರ ದತ್ತಾತ್ರೇಯರು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸಿದ್ಧಾಂತಗಳನ್ನು ವಿಲೀನಗೊಳಿಸಲು ಜನಿಸಿದರೆಂದು ನಂಬಲಾಗುತ್ತದೆ. ಇದೇ ಕಾರಣದಿಂದ ಆತನನ್ನು ತ್ರಿಮೂರ್ತಿ ಎಂದು ಕೂಡ ಕರೆಯಲಾಗುತ್ತದೆ.

ದತ್ತಾತ್ರೇಯರಿಗೆ 24 ಗುರುಗಳಿದ್ದರು ಎಂದು ಹೇಳಲಾಗುತ್ತದೆ. ಅವರ ಅವಧಿಯಲ್ಲಿ ಅನೇಕ ಗುರುಗಳ ಆಶ್ರಯ ಪಡೆದರು ಎನ್ನಲಾಗುತ್ತದೆ. ಆ ಗುರುಗಳಲ್ಲಿ ಭೂಮಿ, ನೀರು, ಬೆಂಕಿ, ಗಾಳಿ, ಸಮುದ್ರ, ಚಂದ್ರ, ಆಕಾಶ ಮತ್ತು ಸೂರ್ಯ ಸೇರಿದಂತೆ ಎಂಟು ನೈಸರ್ಗಿಕ ಅಂಶಗಳು ಇವೆ. ಇದಲ್ಲದೇ ಅನೇಕ ಜೀವರಾಶಿಗಳನ್ನೂ ಗುರುವಾಗಿ ದತ್ತಾತ್ರೇಯರು ಸ್ವೀಕರಿಸಿದರು ಎನ್ನಲಾಗುತ್ತದೆ.
ಅಲ್ಲದೆ ದತ್ತಾತ್ರೇಯರಿಗೆ ಪತಂಗ, ಮೀನು, ಕಾಗೆ, ಜಿಂಕೆ, ಹಾವು, ಆನೆ, ಜೇಡ ಸೇರಿದಂತೆ ಹೀಗೆ 12 ಗುರುಗಳಿದ್ದರು. ಇದಲ್ಲದೇ ಒಬ್ಬ ಹುಡುಗ, ಅಕ್ಕಸಾಲಿಗ, ಪಿಂಗ್ಲಾ ಎಂಬ ವ್ಯಭಿಚಾರಿಣಿ ಮತ್ತು ಹುಡುಗಿಯನ್ನು ಸಹ ಗುರುಗಳಾಗಿ ದತ್ತಾತ್ರೇಯರು ಸ್ವೀಕರಿಸಿದರು. ದತ್ತಾತ್ರೇಯರು ನಾವು ಯಾರಿಂದ ಜ್ಞಾನವನ್ನು ಪಡೆಯುತ್ತೇವೆಯೋ ಅದನ್ನು ವಿವೇಚನೆಯಿಂದ ಸ್ವೀಕರಿಸಬೇಕು ಮತ್ತು ಯಾರಿಂದರೆ ಜ್ಞಾನವನ್ನು ಪಡೆಯುತ್ತೇವೋ ಅವರನ್ನು ನಮ್ಮ ಗುರುವೆಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ದತ್ತಾತ್ರೇಯ ಹೇಗೆ ಜನಿಸಿದನು? ಅವರ ಸ್ವಭಾವವೇನು?
ಮಹರ್ಷಿ ಅತ್ರಿ ಮತ್ತು ಅವರ ಪತ್ನಿ ಸತಿ ಅನುಸೂಯಾ ಭಗವಾನ್ ವಿಷ್ಣುವನ್ನು ತಮ್ಮ ಮಗನಾಗಿ ಹೊಂದಲು ಬಯಸಿದ್ದರು. ಅವರ ಆಸೆಯನ್ನು ಪೂರೈಸಲು ವಿಷ್ಣುವು ಒಮ್ಮೆ ಮಹರ್ಷಿ ಅತ್ರಿ ಮತ್ತು ಸತಿ ಅನುಸೂಯರಿಗೆ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ವಿಷ್ಣು ನಾನು ನಿಮ್ಮ ಭಕ್ತಿಗೆ ಶರಣಾಗಿದ್ದೇನೆ ಎಂದು ಹೇಳಿದರು. ಈ ಅರ್ಥದಲ್ಲಿ ಅಂದರೆ ಕೊಡುವ ಅರ್ಥದಲ್ಲಿ ದತ್ತ ಮತ್ತು ಅತ್ರಿ ಹಾಗೂ ಅನುಸೂಯರ ಹಿರಿಯ ಮಗನಾದ ಕಾರಣ ಆತ್ರೇಯನ ಸಂಯೋಜಿತ ರೂಪವನ್ನು ದತ್ತಾತ್ರೇಯ ಎಂದು ಕರೆಯಲಾಯಿತು. ಭಗವಾನ್ ದತ್ತಾತ್ರೇಯನಿಗೆ ಮೂರು ತಲೆಗಳು ಮತ್ತು ಆರು ತೋಳುಗಳಿವೆ. ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರಲ್ಲಿ ಜಂಟಿಯಾಗಿ ಇರುತ್ತಾರೆ.
ದತ್ತಾತ್ರೇಯ ಜಯಂತಿಯ ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ, ದತ್ತಾತ್ರೇಯರು ಪ್ರದೋಷ ಕಾಲದಲ್ಲಿ ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಜನಿಸಿದರು. ಅವರನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಅಲ್ಲದೆ ಯಾವುದೇ ವ್ಯಕ್ತಿಯು ಪಿತ್ರಾ ದೋಷದಿಂದ ಬಳಲುತ್ತಿದ್ದರೆ ದತ್ತಾತ್ರೇಯರ ಮಂತ್ರಗಳನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ಪಡೆಯುತ್ತಾನೆ.












Click it and Unblock the Notifications