ಅಟಲ್ ಬಿಹಾರಿ ವಾಜಪೇಯಿ ಏಕೆ 'ಬ್ರಹ್ಮಚಾರಿ'ಯಾಗಿಯೇ ಉಳಿದರು?
Recommended Video

ಭಾರತದ ಮಾಜಿ ಪ್ರಧಾನಿ, ಉತ್ಕೃಷ್ಟ ವಾಗ್ಮಿ ಅಟಲ್ ಬಿಹಾರಿ ವಾಜಪೇಯಿಯವರು ಮದುವೆಯಾಗಿದ್ದರೆ ಇನ್ನಷ್ಟು ಚೆಂದದ ಬದುಕು ಬದುಕುತ್ತಿದ್ದರಾ ಅಥವಾ ಮದುವೆಯನ್ನೇ ಆಗದಿದ್ದದ್ದಕ್ಕೆ ಅಷ್ಟು ಚೆಂದವಾಗಿ ಬದುಕಿದರಾ?
ಇವೆರಡರ ನಡುವಿನ ಅರ್ಥವ್ಯತ್ಯಾಸ ಅರಿತುಕೊಳ್ಳುವುದು ಬಲುಕಷ್ಟ. ಉತ್ತಮ ಕವಿಯೂ ಆಗಿದ್ದ ಅವರ ಬಾಳಲ್ಲಿ ಸುಂದರಿಯೋರ್ವಳು ಪ್ರೇಮಕವನ ಬರೆದುಹೋಗಿದ್ದು ಬಿಟ್ಟರೆ, ಮತ್ತಾವ ಹೆಂಗಸೂ ಅವರ ಬಾಳಲ್ಲಿ ಪ್ರೇಯಸಿಯಾಗಿ, ಹೆಂಡತಿಯಾಗಿ ಪ್ರವೇಶ ಮಾಡಲೇ ಇಲ್ಲ.
ಮದುವೆಯಾಗದೆಯೇ 93 ವರ್ಷಗಳ ಪಯಣವನ್ನು ಅವರು ಮುಗಿಸಿದರು. ತಾವೇಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಅವರೇ ಹಲವಾರು ಬಾರಿ ಸ್ವಾರಸ್ಯಕರವಾಗಿ ಉತ್ತರ ನೀಡಿದ್ದಾರೆ. ಮತ್ತು ಆ ರೀತಿ ಅಂಥ ಪ್ರಶ್ನೆಗಳಿಗೆ ಉತ್ತರ ನೀಡುವುದು ಅವರಿಂದ ಮಾತ್ರ ಸಾಧ್ಯ.

ವಾಜಪೇಯಿ ಅವರು ತಮ್ಮಿಡೀ ಜೀವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿ ದುಡಿಯಲು ಮೀಸಲಿಟ್ಟಿದ್ದರು. ಆರೆಸ್ಸೆಸ್ ಗಾಗಿಯೇ ಸಮರ್ಪಿಸಿಕೊಂಡ ಅನೇಕರು ಈ ಕಾರಣದಿಂದಾಗಿಯೇ ಬ್ರಹ್ಮಚಾರಿಗಳಾಗಿ ಉಳಿದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಇದಕ್ಕೆ ಹೊರತಾಗಿರಲಿಲ್ಲ.
ಯಾವುದೋ ಸಂದರ್ಭದಲ್ಲಿ ಮದುವೆ ಏಕಾಗಲಿಲ್ಲ ಎಂದು ಯಾರೋ ಒಬ್ಬರು ಕೇಳಿದಾಗ, "ಯಾವುದೇ ಮಹಿಳೆ ನನ್ನನ್ನು ಸೂಕ್ತ ವರ ಎಂದು ಪರಿಗಣಿಸಲಿಲ್ಲ" ಎಂದು ತಮ್ಮ ಎಂದಿನ ಅಸ್ಖಲಿತ ನಗುವಿನೊಂದಿಗೆ ತುಂಟ ಉತ್ತರ ನೀಡಿದ್ದರು ಅಟಲ್ ಬಿಹಾರಿ ವಾಜಪೇಯಿ. ಅದು ಕೇವಲ ತಮಾಷೆಗಾಗಿ ಮಾತ್ರ ನೀಡಿದ ಉತ್ತರವಾಗಿತ್ತು.
ವಾಜಪೇಯಿ ಅವರು ಮನಸ್ಸು ಮಾಡಿದ್ದರೆ ಮದುವೆಯಾಗಿ ಸುಖಸಂಸಾರ ಹೂಡಬಹುದಾಗಿತ್ತು. ಅವರ ಬಾಳಲ್ಲಿ ಓರ್ವ ಸುಂದರಿಯ ಪ್ರವೇಶವೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಮದುವೆ ನಡೆಯಲೂ ಇಲ್ಲ. ಅವರ ಪ್ರಣಯ ಪ್ರಸಂಗದ ಕಥೆಯೂ ಸ್ವಾರಸ್ಯಕರವಾಗಿಯೇ ಇದೆ. ಮತ್ತೊಂದು ಸಂದರ್ಭದಲ್ಲಿ 'ನಾನು ಮದುವೆಯಾಗಲಿಲ್ಲವೇನೋ ನಿಜ, ಆದರೆ ನಾನು ಬ್ರಹ್ಮಚಾರಿಯಲ್ಲ' ಎಂದು ಮತ್ತೊಂದು ನಗೆಚಟಾಕಿ ಅವರು ಹಾರಿಸಿದ್ದರು.
ನನಗೆ ಮದುವೆಯಾಗಲು ಸಮಯವೇ ಸಿಗಲಿಲ್ಲ ಎಂದು ಅವರು ಮತ್ತೊಂದು ಬಾರಿ ಹಾಸ್ಯದ ಚಟಾಕಿ ಹಾರಿಸಿದ್ದರು. ಅಂತಿಮ ಸತ್ಯವೇನೆಂದರೆ, ಅವರು ಮದುವೆಯಾಗಲಿಲ್ಲ ಅಷ್ಟೇ. ಮದುವೆಯಾಗದಿದ್ದರೇನಂತೆ, ನಮಿತಾ ಭಟ್ಟಾಚಾರ್ಯ ಎಂಬುವವರನ್ನು ದತ್ತಾಗಿ ಸ್ವೀಕರಿಸಿ, ಅವರಿಗೆ ತಂದೆಯ ಸ್ಥಾನ ತುಂಬಿದ್ದರು. ನಮಿತಾ ಭಟ್ಟಾಚಾರ್ಯ ಮತ್ತಾರೂ ಅಲ್ಲ, ತಾವು ಅಪಾರವಾಗಿ ಪ್ರೇಮಿಸಿದ್ದ, ಆದರೆ ಮದುವೆಯಾಗಲು ಸಾಧ್ಯವಾಗದ ರಾಜಕುಮಾರಿ ಕೌರ್ ಅವರ ಮಗಳು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications