2000 ರು. ನೋಟಿನಲ್ಲಿರೋ ಚಿಪ್‌ನ ಕಥೆ ಏನು ಫ್ರೆಂಡ್ಸ್? ಟ್ವಿಟಆರ್ನಲ್ಲಿ ಫುಲ್ ಟ್ರೋಲ್
2000 ರುಪಾಯಿ ಮುಖಬೆಲೆಯ ನೋಟುಗಳನ್ನು ಆರ್ ಬಿಐ ಚಲಾವಣೆಯಿಂದ ಹಿಂಪಡೆದುಕೊಂಡಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರುಪಾಯಿ ನೋಟುಗಳನ್ನು ಹಿಂಪಡೆದುಕೊಂಡಿದ್ದು, ಗ್ರಾಹಕರಿಗೆ ನೀಡದಂತೆ ಬ್ಯಾಂಕ್‌ಗಳಿಗೆ ಆರ್ ಬಿಐ ಸೂಚನೆ ನೀಡಿದೆ.
2000 ರುಪಾಯಿ ನೋಟುಗಳನ್ನು ಹಿಂಪಡೆದ ವಿಚಾರದ ಬಗ್ಗೆ ಬಗೆ ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಮಾನ್ಯೀಕರಣ ಮಾಡಿದ ಬಳಿಕವೂ 2000 ರುಪಾಯಿ ನೋಟು ಹಿಂಪಡೆದಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇದು ಒಳ್ಳೆಯ ನಿರ್ಧಾರ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

2016ರಲ್ಲಿ ನೋಟು ಅಮಾನ್ಯೀಕರಣವಾದ ಸಂದರ್ಭದಲ್ಲಿ ಹೊಸದಾಗಿ 2000 ರುಪಾಯಿ ನೋಟು ಚಲಾವಣೆಗೆ ಬಂದಾಗ ಅದರ ಬಗ್ಗೆ ಹಲವು ಊಹಾಪೋಹಗಳನ್ನು ಹಬ್ಬಿಸಲಾಗಿತ್ತು. ಅದರಲ್ಲಿ ಇಂದಿಗೂ ಸಖತ್ ಜನಪ್ರಿಯವಾಗಿರುವುದು 2000 ರುಪಾಯಿ ನೋಟಿನಲ್ಲಿ ಚಿಪ್ ಇದೆ ಎನ್ನುವುದು. 2000 ರುಪಾಯಿ ನೋಟನ್ನು ನಕಲು ಮಾಡಲು ಸಾಧ್ಯವಿಲ್ಲ, ಕೋಟಿ ಕೋಟಿ ಮೌಲ್ಯದ 2000 ರುಪಾಯಿ ಮುಖಬೆಲೆ ನೋಟುಗಳನ್ನು ಒಂದು ಕಡೆ ಇಟ್ಟರೆ ಅದು ಕೇಂದ್ರ ಸರ್ಕಾರಕ್ಕೆ ಸ್ಯಾಟಲೈಟ್ ಮೂಲಕ ತಿಳಿಯುತ್ತದೆ ಎಂದೆಲ್ಲಾ ಗಾಳಿಸುದ್ದಿ ಹಬ್ಬಿಸಿದ್ದರು.
ಈಗ ಅದೇ ವಿಚಾರ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ. "2000 ರುಪಾಯಿ ನೋಟು ಹಿಂಪಡೆದಿದ್ದಾರೆ, ಅದರಲ್ಲಿರೋ ಚಿಪ್ ಕಥೆ ಏನು ಫ್ರೆಂಡ್ಸ್" ಎಂದು ಟ್ವಿಟರ್ ಬಳಕೆದಾರರೊಬ್ಬರು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದಾರೆ.
ಎರಡು ಸಾವಿರ ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಇಂಕ್ ಲೈಟ್ ಎಮ್ಮಿಟ್ ಮಾಡುವುದನ್ನು ನಿಲ್ಲಿಸಿರುವ ಕಾರಣ RBI ವಾಪಸ್ ಪಡೆದಿದೆ ಕೃಪೆ. ಯಂಗೆ ಪುಂಗ್ಲಿ @Amrutha_P_B @ChekrishnaCk @jagatmindri @Kanagalogy pic.twitter.com/w2lC7zMY5R
— ವಿನೋದ್ ಎಮ್ ಬಿ (@vinod_mysr) May 19, 2023
ಇನ್ನೊಬ್ಬ ಟ್ವಿಟರ್ ಬಳಕೆದಾರರು ಚಕ್ರವರ್ತಿ ಸೂಲಿಬೆಲೆ 2000 ರುಪಾಯಿ ನೋಟುಗಳ ಬಗ್ಗೆ ಭಾಷಣ ಮಾಡಿದ್ದನ್ನು ಹಂಚಿಕೊಂಡು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. "ಎರಡು ಸಾವಿರ ನೋಟ್ ಪ್ರಿಂಟ್ ಮಾಡಲು ಬಳಸುತ್ತಿದ್ದ ಇಂಕ್ ಲೈಟ್ ಎಮ್ಮಿಟ್ ಮಾಡುವುದನ್ನು ನಿಲ್ಲಿಸಿರುವ ಕಾರಣ ಆರ್ ಬಿಐ ವಾಪಸ್ ಪಡೆದಿದೆ" ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಕರ್ನಾಟಕದ ಜನತೆಯ ಗೋಳು#rs2000 pic.twitter.com/lHBSqXG9zV
— 👑Che_ಕೃಷ್ಣ🇮🇳💛❤️ (@ChekrishnaCk) May 19, 2023
ಇನ್ನೂ ಕೆಲವರು "ರಾಜಕೀಯದವ್ರು ಎಲೆಕ್ಷನ್‌ಗೆ ವೋಟ್ ಹಾಕು ಅಂತ 2000 ರುಪಾಯಿ ನೋಟು ಕೊಟ್ಟಿದ್ರು, ಈಗ ನೋಡಿದ್ರೆ ಬ್ಯಾನ್ ಅಂತಾವ್ರೆ" ಅಂತಾ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.
ಪಾಪ ನಮ್ಮ್ ಮೋದಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000ರೂಪಾಯಿ ನೋಟನ್ನು ಜನಕ್ಕೆ ಕೊಟ್ಟು ಕಾಲಿ ಮಾಡ್ಬುಡ್ತರೆ ಅಂತ 2000 ನೋಟನ್ನೆ ಬ್ಯಾನ್ ಮಾಡ್ಬುಟ್ರು..😅
— DEEPU GOWDRU (@DEEPUVAJRAMUNI) May 19, 2023
modiಭಕ್ತ::: ಈಗೇನ್ ಮಾಡ್ತನೆ ನಿಮ್ಮ್ ಹೀರೋ..???#BjpFails #ModiJumla #ModiBhakths pic.twitter.com/inK8389GAz
ಇನ್ನೂ ಕೆಲವರು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000 ಕೊಟ್ಟು, ಎಲ್ಲಾ ದುಡ್ಡು ಖಾಲಿಮ ಮಾಡ್ತಾರೆ ಎಂದು ಮುನ್ನೆಚ್ಚರಿಕೆಯಿಂದ ಮೋದಿ 2000 ರುಪಾಯಿ ನೋಟ್ ಬ್ಯಾನ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications