ಸೀರೆಯುಟ್ಟು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮಹಿಳೆ; ವಿಡಿಯೋ ವೈರಲ್
ಕಾಲಕಾಲಕ್ಕೆ ಮಹಿಳೆಯರು ಸ್ಟಂಟ್ ಮಾಡುವ, ಬೈಕ್ ಓಡಿಸುವ, ಕಬಡ್ಡಿ ಆಡುವ ಮತ್ತು ಇತರ ಅಸಾಮಾನ್ಯ ಚಟುವಟಿಕೆಗಳನ್ನು ಮಾಡುತ್ತಲೇ ಇರುತ್ತಾರೆ. ಅವರ ಈ ಸಾಹಸದ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತಹದ್ದೇ ವಿಡಿಯೋ ವೈರಲ್. ಇಲ್ಲಿ ಮಹಿಳೆಯೊಬ್ಬರು ಸೀರೆ ಉಟ್ಟುಕೊಂಡು ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿರುವುದನ್ನು ಕಾಣಬಹುದು. ಸೀರೆ ಉಟ್ಟುಕೊಂಡು ಭಾರ ಎತ್ತುತ್ತಾ ಬೇರೆ ಬೇರೆ ಕಸರತ್ತುಗಳನ್ನು ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ಬಾರೀ ಸದ್ದು ಮಾಡುತ್ತಿದೆ. ಆದರೆ, ನೆಟಿಜನ್‌ಗಳು ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ವಿಡಿಯೋ ಬಗ್ಗೆ ಅನೇಕರು ಮಹಿಳೆಯನ್ನು ಶ್ಲಾಘಿಸಿದರೆ, ಹಲವರು ಅವಳನ್ನು ತೋರಿಸಿದ್ದಕ್ಕಾಗಿ ನಿಂದಿಸಿದ್ದಾರೆ.
ಮಹಿಳೆ ಸೀರೆ ಧರಿಸಿ ವರ್ಕೌಟ್ ಮಾಡುತ್ತಿರುವ ವಿಡಿಯೊಗಳು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಂತರ ಇದು ವೈರಲ್ ಆಗಿದೆ. ಫಿಟ್ನೆಸ್ ತರಬೇತುದಾರ್ತಿ ಎಂದು ಗುರುತಿಸಿಕೊಳ್ಳುವ ರೀನಾ ಸಿಂಗ್ ಎಂಬ ಮಹಿಳೆಯ ಈ ವಿಡಿಯೊಗಳು ವೈರಲ್ ಆಗಿವೆ. ಸೀರೆಯಲ್ಲಿ ಅವರ ಪ್ರತಿ ವಿಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.
ಈ ವೈರಲ್ ವಿಡಿಯೊದಲ್ಲಿ ರೀನಾ ಸಿಂಗ್ ಅವರು ಲ್ಯಾಟ್ ಪುಲ್‌ಡೌನ್‌ಗಳಂತಹ ಅನೇಕ ವ್ಯಾಯಾಮಗಳನ್ನು ಮಾಡುವುದನ್ನು ಕಾಣಬಹುದು. ಸ್ಕ್ವಾಟ್‌ಗಳನ್ನು ನಿರ್ವಹಿಸುವಾಗ ಅವಳು ಜಿಗಿಯುವುದನ್ನು ಮತ್ತು ದೊಡ್ಡ ಟೈರ್ ಅನ್ನು ಎತ್ತುವುದನ್ನು ಸಹ ನೋಡಬಹುದು.

ರೀನಾ ಸಿಂಗ್ ಅವರ ಪ್ರೊಫೈಲ್‌ನ ವಿಡಿಯೊಗಳು ಅವರು ಸೀರೆಯಲ್ಲಿ ವರ್ಕೌಟ್ ಮಾಡುವುದನ್ನು ತೋರಿಸುವುದಲ್ಲದೆ, ಇತರ ರೀತಿಯ ಭಾರತೀಯ ಮತ್ತು ಪಾಶ್ಚಿಮಾತ್ಯ ಉಡುಗೆಗಳಲ್ಲಿ ಜಿಮ್ ಮಾಡುವ ಅನೇಕ ವಿಡಿಯೊಗಳಿವೆ. ಕಳೆದ ವರ್ಷದ ಆರಂಭದಲ್ಲಿ, ಚೆನ್ನೈನ 56 ವರ್ಷದ ಮಹಿಳೆ ತನ್ನ ಸೊಸೆಯೊಂದಿಗೆ ಸೀರೆಯಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವಿಡಿಯೊ ಕೂಡ ವೈರಲ್ ಆಗಿತ್ತು.












Click it and Unblock the Notifications