Mental Health: ಮಾನಸಿಕ ಆರೋಗ್ಯದ ಕಡೆಗೂ ಇರಲಿ ಗಮನ
ದೈನಂದಿನ ಒತ್ತಡದ ಬದುಕಿನ ನಡುವೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಮಾನಸಿಕವಾಗಿ ಗಟ್ಟಿಯಾಗಿದ್ದಷ್ಟು ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸುವುದು ಸುಲಭವಾಗುತ್ತದೆ.
ನಮ್ಮ ಶಕ್ತಿ ಯಾವುದೆಂದರೆ ಅಪ್ಪ, ಅಮ್ಮ, ಹೆಂಡತಿ, ಗೆಳೆಯ, ಅಪ್ಪ, ಅಮ್ಮ ಇಲ್ಲವೇ ನಾವು ಮಾಡುವ ಉದ್ಯೋಗ ಎಂಬ ಉತ್ತರಗಳು ಸಾಮಾನ್ಯವಾಗಿ ಬರುತ್ತವೆ. ಆದರೆ, ಅದೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ಮನಸು ಎಂಬುದು ಎಷ್ಟೋ ಜನಕ್ಕೆ ಗೊತ್ತಿರುವುದಿಲ್ಲ.

ಮನಸಿದ್ದರೆ ಮಾರ್ಗ
ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ ಮನಸಿಟ್ಟು ಓದು ತಲೆಗೆ ಹತ್ತುತ್ತದೆ. ಮನಸಿದ್ದರೆ ಮಾರ್ಗ ಎಂಬ ವಾಕ್ಯವು ನಮಗೆ ಆಗಾಗ ಕಿವಿಗೆ ಬೀಳುತ್ತಾ ಇರುತ್ತದೆ. ಅಂದರೆ, ನಮ್ಮ ಯಶಸ್ಸಿಗೆ, ಸಾಧನೆ, ಮನಸಿನ ಶಕ್ತಿ ಬಹಳ ಮುಖ್ಯ ಎಂಬುದು ಇದರಿಂದ ತಿಳಿಯುತ್ತದೆ. ನಮ್ಮೊಳಗಿನ ಮನಸನ್ನು ನಮ್ಮ ನಮ್ಮ ಸಾಧನೆಗೆ ಪ್ರೇರಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚಿಸೋಣ.
ಕಿರಿಕಿರಿಯಿಂದ ದೂರ ಇರುವುದು
ನಮ್ಮ ಸಮಾಜದಲ್ಲಿ ಒಬ್ಬೊಬ್ಬರಿಗೆ ಒಂದೊಂದುಆಸೆ, ಅಭಿರುಚಿಗಳು ಇರುತ್ತವೆ. ಅದು ಊಟ ಇರುವುದು, ಒಡನಾಟ ಇರಬಹುದು, ಕಲೆ, ಸಂಸ್ಕೃತಿ ಇರಬಹುದು. ಮುಖ್ಯವಾಗಿ ಪೋಷಕರು, ಶಿಕ್ಷಕರು ಮಕ್ಕಳಿಗೆ ಇದನ್ನು, ಹೀಗೆ ಮಾಡಬೇಕೆಂದು ಒತ್ತಡ ಹಾಕುತ್ತಿರುತ್ತಾರೆ. ಇದರಿಂದ ಮನಸಿಗೆ ಕಿರಿಕಿರಿ ಆಗುವುದು ಸಹಜ. ಯಾವುದರಲ್ಲೂ ಮನಸನ್ನು ಕೇಂದ್ರಿಕರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಮಗೆ ಯಾವುದು ಇಷ್ಟಾನೊ ಅದನ್ನು ಮಾಡುವಂತೆ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಅಗತ್ಯ.
ನಿಯಮಿತವಾಗಿ ಧ್ಯಾನ, ವ್ಯಾಯಾಮ
ಓದಿನ ಕಡೆಗೆ, ನಾವು ಮಾಡುವ ಕೆಲಸದ ಕಡೆಗೆ ಮನಸನ್ನು ಕೇಂದ್ರೀಕರಸಲು, ನಮ್ಮೊಳಗೆ ಗಲಿಬಿಲಿ, ಗೊಂದಲ, ತಳಮಳಗಳು ಇರಬಾರದು. ಎಷ್ಟೋ ಸಲ ಸಣ್ಣ ಸಣ್ಣ ವಿಷಯಗಳಿಗೆಲ್ಲ ಗೊಂದಲ ಮಾಡಿಕೊಳ್ಳುವುದು, ಆತಂಕಕ್ಕೆ ಈಡಾಗುವುದು ಒಂದು ಚಟವಾಗಿ ನಮ್ಮೊಳಗೆ ಕೂತಿರುತ್ತದೆ. ಇದರಿಂದ ಮುಕ್ತಿಯಾಗಬೇಕಾದರೆ ನಮ್ಮ ಮನಸನ್ನು ಸದೃಢವಾಗಿಸಿಕೊಳ್ಳಬೇಕು. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಗೊಂದಲ ಮಾಡಿಕೊಳ್ಳಬಾರದು. ಇಂತಹ ಸದೃಢವಾದ ಮನಸು ನಮ್ಮದಾಗಿಸಿಕೊಳ್ಳಬೇಕಾದರೆ, ನಿಯಮಿತವಾದ ದೈಹಿಕವಾದ ವ್ಯಾಯಾಮ ಹಾಗೂ ಧ್ಯಾನ ನಮ್ಮ ದಿನನಿತ್ಯದ ಭಾಗವಾಗಬೇಕು. ದೇಹವನ್ನು ದಂಡಿಸಿದಷ್ಟು ನಮ್ಮೊಳಗೆ ವಿನಯತೆಯ ಭಾವ ಹಾಗೂ ಧ್ಯಾನದಿಂದ ಪ್ರಶಾಂತತೆಯ ಭಾವ ಮೂಡುತ್ತದೆ.
ಕೆಲಸಗಳ ಪಟ್ಟಿ ಕ್ರಮಾನುಗತಿಯಾಗಿರಲಿ
ವಿದ್ಯಾರ್ಥಿಯಾಗಿರಲಿ, ಉದ್ಯೋಗಿಯಾಗಿರಲಿ, ಮನೆಯಲ್ಲಿರುವ ಗೃಹಿಣಿಯಾಗಿರಲಿ, ಪ್ರತಿಯೊಬ್ಬರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಹಲವಾರು ಚಟುವಟಿಕೆಯಲ್ಲಿ ತೊಡಗುತ್ತಾರೆ. ಈ ಚಟುವಟಿಕೆಗಳು ಕ್ರಮಾನುಗತಿಯಲ್ಲಿದ್ದರೆ, ಯಾವುದೇ ಸಮಸ್ಯೆ ಯಾಗುವುದಿಲ್ಲ. ಒಂದು ವೇಳೆ ಎರಡು ಕೆಲಸಗಳನ್ನು ಏಕಕಾಲದಲ್ಲಿ ಮಾಡಲು ಹೊರಟರೆ, ಕಿರಿಕಿರಿ, ಗೊಂದಲಗಳು ಸೃಷ್ಟಿಯಾಗುತ್ತವೆ. ಇದರಿಂದ ಯಾವೊಂದು ಕೆಲಸವು ಯಶಸ್ಸು ಆಗುವುದಿಲ್ಲ.
ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುವುದು
ಮಕ್ಕಳು ದೇವರಿಗೆ ಸಮಾನ. ಮಕ್ಕಳ ಮುಗ್ಧತೆ, ನಗು, ಮಾತುಗಳನ್ನು ಕೇಳಿದರೆ ಎಂತಹ ಒತ್ತಡಗಳಿದ್ದರೂ ಒಮ್ಮೆಲೆ ಕರಗಿ ಹೋಗುತ್ತವೆ. ಮನಸು ಮೃದುವಾಗಲು, ಲವಲವಿಕೆಯಿಂದ, ಆರೋಗ್ಯದಿಂದ ಕೂಡಿರಬೇಕಾದರೆ ಮಕ್ಕಳೊಂದಿಗೆ ಒಂದಷ್ಟು ಒತ್ತು ಕಾಲ ಕಳೆಯಲು ಅಗತ್ಯ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.












Click it and Unblock the Notifications