Aulabbetta: ಚಿಕ್ಕಬಳ್ಳಾಪುರದ ಆವುಲಬೆಟ್ಟದಲ್ಲಿ ಪ್ರವಾಸಿಗರ ಹುಚ್ಚಾಟ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನಲ್ಲಿರುವ ಆವುಲಬೆಟ್ಟದಲ್ಲಿ ಪ್ರವಾಸಿಗರು ಹುಚ್ಚಾಟ ಮಾಡುವುದು ಕಂಡುಬಂದಿದೆ. ಡೇಂಜರಸ್ ಸೆಲ್ಫಿ ಸ್ಪಾಟ್‌ನಲ್ಲಿ ಯುವಕನೊಬ್ಬ ಪುಂಡಾಟ ಮಾಡಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಆವುಲ ಬೆಟ್ಟವಾಗಿದೆ. ಇಲ್ಲಿ ರೀಲ್ಸ್ ಗೋಜಿಗೆ ಬಿದ್ದ ಯುವಕ ಕಡಿದಾದ ಕಲ್ಲಿನ ತುದಿಯಲ್ಲಿ ನೇತಾಡಿ ಹುಚ್ಚಾಟ ಮೆರೆದಿದ್ದಾನೆ. ಈ ಪುಂಡರು ಹುಚ್ಚಾಟ ಆಡಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯಿಂದ ಸುಮಾರು 6ಕಿ.ಮೀ.ಗಳಷ್ಟು ದೂರದಲ್ಲಿರುವ ಆವುಲಬೆಟ್ಟ ಹಲವು ಕಾರಣಗಳಿಗೆ ಪ್ರಸಿದ್ಧ. ರಾಜ್ಯ ಮತ್ತು ಹೊರರಾಜ್ಯದ ಪ್ರವಾಸಿಗರು ಬೆಟ್ಟದ ಮೇಲೆ ದೀರ್ಘಕಾಲದವರೆಗೆ ಇರಲು ಬಯಸುತ್ತಾರೆ. ಬರೀ ಬಂಡೆಗಳಿಂದ ಆವರಿಸಿಕೊಂಡಿರುವ ರೀಮಾಂಚನ ಅನುಭವ ನೀಡದೇ ಇರುವುದಿಲ್ಲ. ಕೆಲವರು ಇದನ್ನು ಲಕ್ಷ್ಮೀ ನರಸಿಂಹಸ್ವಾಮಿ ಬೆಟ್ಟವೆಂದು ಕರೆದರೆ, ಇನ್ನೂ ಕೆಲವರು ದನಗಳ ಬೆಟ್ಟವೆಂದೂ ಸಹ ಕರೆಯುತ್ತಾರೆ.
ಆವುಲ ಎಂದು ಕರೆಯಲು ಕಾರಣವೇನು?
ದನಗಳಿಗೆ ತೆಲುಗಿನಲ್ಲಿ ಆವುಲ ಎಂದು ಕರೆಯುತ್ತಾರೆ. ಬೆಟ್ಟವನ್ನೇರಲು ಅಟ್ಟುಕಟ್ಟಾದ ರಸ್ತೆಯಿದ್ದು, ಅಲ್ಲಿ ಒಂದೆರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಅರಣ್ಯ ಇಲಾಖೆಯ ವಸತಿಗೃಹಗಳ ಸೌಲಭ್ಯವೂ ಇದೆ. ಬೆಟ್ಟದ ತುದಿಯಿಂದ ಕಾಣಸಿಗುವ ಅರಣ್ಯ ಪ್ರದೇಶ ನೋಡುವುದೇ ಒಂದು ಸಂಭ್ರಮ.
ಪುಟಾಣಿ ಮಕ್ಕಳಿಗೆ ಪರ್ವತಾರೋಹಣ ಮಾಡಲು ಹೇಳಿ ಮಾಡಿಸಿದ ಸ್ಥಳವಾದರೆ, ಚಿತ್ರಕಲಾವಿದರಿಗೆ ಬೆಟ್ಟದ ಮೇಲೆ ಕೂತು ಚಿತ್ರಗಳನ್ನು ರಚಿಸುವುದೆಂದರೆ ಹಬ್ಬದ ಊಟ ಸವಿದಷ್ಟು ಖುಷಿಯಾಗುತ್ತದೆ. ಬೆಟ್ಟದ ಮೇಲೆ ಬಗೆಬಗೆಯ ಚಿತ್ರಗಳನ್ನು ರಚಿಸಲೆಂದೇ ಕೆಲ ಚಿತ್ರಕಲಾವಿದರು ಬೆಟ್ಟದ ಮೇಲೆಯೇ ತಂಗುತ್ತಾರೆ.

ಬೆಟ್ಟದ ಮೇಲಿನ ಲಕ್ಷ್ಮಿನರಸಿಂಹ ದೇವಾಲಯ, ದೋಣಿಯ ಬಳಿಯ ಗೋಪುರ, ಪ್ರವಾಸಿ ಮಂದಿರ, ವೀಕ್ಷಣಾ ಗುಡಿಸಲು, ಲಕ್ಷ್ಮಿ ದೇವಾಲಯ ಮತ್ತು ಬೆಟ್ಟದ ಮೇಲಿನಿಂದ ಕಾಣುವ ಸುಂದರ ಭೂದೃಶ್ಯಗಳನ್ನು ಬಿಳಿ ಹಾಳೆಗಳಲ್ಲಿ ಕಲಾವಿದರು ಮೂಡಿಸುತ್ತಾರೆ.
ಗುಡಿಬಂಡೆ ಪಟ್ಟಣದ ಒಳಗೆ ಪ್ರವೇಶಿಸುವ ಮೊದಲು ಗುಡಿಬಂಡೆ ಅಮಾನಿಬೈರಸಾಗರ ಕೆರೆಯಲ್ಲಿ ಸವೃದ್ಧವಾದ ನೀರು ಎಲ್ಲರನ್ನೂ ಸ್ವಾಗತಿಸುತ್ತದೆ. ಪಟ್ಟಣದ ಏಳುಸುತ್ತಿನ ಕೋಟೆ ಎಂದೇ ಪ್ರಖ್ಯಾತಿ ಹೊಂದಿರುವ ಪಾಳೆಗಾರ ವಂಶದ ಹಾವಳಿ ಬೈರೇಗೌಡ ಆಳಿದ ಗುಡಿಬಂಡೆ ಸುರಸದ್ಮಗಿರಿ ಬೆಟ್ಟ, ಕೋಟೆ ಕೊತ್ತಲುಗಳು ಪಾಳೆಗಾರರ ಆಳ್ವಿಕೆಯನ್ನು ಸೂಚಿಸುತ್ತದೆ. ಪಾಳೆಗಾರರ ಆಳ್ವಿಕೆಯ ಚಲನಚಿತ್ರಗಳಿಗೆ ಇದು ಸೂಕ್ತ ಸ್ಥಳವಾಗಿದೆ.
ಮೊನಾಲಿಸಾ ಹಾಡಿಗೆ ಸಾಕ್ಷಿಯಾಗಿದ್ದ ಗುಡಿಬಂಡೆ ಕೆರೆ:
ಕನ್ನಡ ಚಿತ್ರರಂಗದಲ್ಲಿ ಯುವಕರ ಮನಗೆದ್ದ ನಟ ಧ್ಯಾನ್ ಹಾಗೂ ಬಹುಭಾಷ ನಟಿ ಸದಾಫ್ ಅಭಿನಯದ 'ಮೊನಾಲಿಸಾ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಆ ಚಿತ್ರದ 'ಹೋ ಪ್ರಿಯತಮೆ ಇದು ನ್ಯಾಯಾನ' ಹಾಡಿನ ಚಿತ್ರೀಕರಣವು ಗುಡಿಬಂಡೆ ಅಮಾನಿ ಬೈರಸಾಗರದ ಕೆರೆ ಕಟ್ಟೆಯಮೇಲೆ ನಡೆದಿತ್ತು. ಇನ್ನು ಹಲವು ಪ್ರೇಮ ಕಥೆಗಳ ಹಾಡುಗಳಿಗೆ ಈ ಮನಮೋಹಕ ಕೆರೆಯ ನೋಟವು ಅತ್ಯಂತ ಸುಂದರ ವೇದಿಕೆಯಾಗಿದೆ.
ಗುಡಿಬಂಡೆಯ ಸುರಸದ್ಮಗಿರಿ ಚಾರಣಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಉತ್ತಮ ವಿಹಾರಧಾಮ ಕೂಡಾ ಇದಾಗಿದೆ. ಗುಡಿಬಂಡೆ ಹೆಸರೇ ಹೇಳುವಂತೆ ಬೆಟ್ಟ-ಗುಡ್ಡಗಳಿಂದ ಆವೃತ್ತ ಪ್ರದೇಶ. ಸಪ್ತಗಿರಿ, ನಂದಿಗಿರಿಗಳ ಸಾಲು, ಪಂಚಗಿರಿಗಳ ಬೀಡು ನಂದಿಗಿರಿ ನಂದಿಬೆಟ್ಟ ಇವುಗಳ ಹಿರಿಯಣ್ಣ. ಸುತ್ತುಮುತ್ತಲ ಪ್ರದೇಶವನ್ನು ಸುರಸದ್ಮಗಿರಿ, ವಿದ್ಯಾಗಿರಿ, ಕೂರ್ಮಗಿರಿ, ಯಲೋಡು ಆದಿನಾರಾಯಣಸ್ವಾಮಿಯ ಪ್ರಸಿದ್ಧ ಕ್ಷೇತ್ರ, ವರಾಹಗಿರಿ (ವರ್ಲಕೊಂಡ ಬೆಟ್ಟ ) ಮತ್ತು ಧೇನುಗಿರಿ ಆವುಲಬೆಟ್ಟ ನರಸಿಂಹಸ್ವಾಮಿಯ ಪುಣ್ಯಕ್ಷೇತ್ರ ಎಂಬ ಪಂಚಗಿರಿಗಳು ಆವರಿಸಿವೆ. ಇವೆಲ್ಲವೂ ಚಿತ್ರೀಕರಣಕ್ಕೆ ಉತ್ತಮ ತಾಣಗಳಾಗಿವೆ.
ಸೆಲ್ಫೀ ಸ್ಪಾಟ್ ಯುವಕರಿಗೆ ಫೆವರೀಟ್:
ಚಿಕ್ಕಬಳ್ಳಾಪುರ ತಾಲೂಕಿನ ಗಡಿಯಲ್ಲಿರುವ ಮಂಡಿಕಲ್ಲು ಹೋಬಳಿಯ ಆವುಲಬೆಟ್ಟವು ಇತ್ತೀಚಿಗೆ ಸೆಲ್ಫಿ ಸ್ಪಾಟ್ ಎಂದೇ ಹೆಸರುವಾಸಿಯಾಗಿದೆ. ಯುವಕರಿಗೆ ಇದು ಅತ್ಯಂತ ಫೇವರೇಟ್ ಸ್ಥಳವಾಗಿದೆ. ಇಲ್ಲಿನ ಬೆಟ್ಟದ ತುದಿಯಲ್ಲಿ ಗಾಳಿಯಲ್ಲಿ ತೇಲಾಡುವಂತೆ ಇರುವ ಬಂಡೆ ಮೇಲೆ ಸೆಲ್ಫಿ ಕ್ಲಿಕ್ಕಿಸಿದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿವೆ. ಆದರೆ ಪ್ರಾಣವನ್ನು ಲೆಕ್ಕಿಸದೆ ಯುವಕರು ವಿಡಿಯೋ ಮಾಡುತ್ತಿರುವುದು ಅಪಾಯವೇ ಸರಿ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications