ಶಿಕ್ಷಕರ ದಿನ ಆಚರಿಸಲು ಹೋಗಿ ಏಟು ತಿಂದ ವಿದ್ಯಾರ್ಥಿ: ವಿಡಿಯೋ
ಶಿಕ್ಷಕರ ದಿನಾಚರಣೆ ನಮ್ಮ ಗುರುಗಳ ಜೀವನದಲ್ಲಿ ಅತ್ಯಂತ ಪ್ರಮುಖವಾದ ದಿನ. ಈ ದಿನ ಬಹುತೇಕ ವಿದ್ಯಾರ್ಥಿಗಳು ವಿಶೇಷವಾಗಿ ಆಚರಿಸಿರುತ್ತಾರೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುವೃಂದದವರಿಗೆ ಗೌರವ ಸೂಚಿಸುತ್ತಾರೆ. ಆದರೆ ಇಲ್ಲೊಂದು ವೈರಲ್ ಆದ ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ವಿಶೇಷವಾಗಿ ಶಿಕ್ಷಕರ ದಿನ ಆಚರಿಸಲು ಹೋಗಿ ಏಟು ತಿಂದಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದೆ. ಶಿಕ್ಷಕರ ದಿನಾಚರಣೆಯಂದು ವಿದ್ಯಾರ್ಥಿಗಳು ಶಿಕ್ಷಕರಿಗೆ ಉಡುಗೊರೆ ಮತ್ತು ಹೂವುಗಳನ್ನು ನೀಡುವ ಮೂಲಕ ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುತ್ತಾರೆ. ಹೀಗೊಂದು ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬ ತಮಾಷೆಯಾಗಿ ತಮ್ಮ ಶಿಕ್ಷಕರ ಮೇಲೆ ಸ್ನೋ ಸ್ಪ್ರೇ ಮಾಡುತ್ತಾನೆ. ಈ ಚೇಷ್ಟೆಯ ಕೃತ್ಯಕ್ಕಾಗಿ ಶಿಕ್ಷಕ ವಿದ್ಯಾರ್ಥಿಯನ್ನು ಥಳಿಸಿದ್ದಾರೆ.

ವೀಡಿಯೋ ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಯೊಬ್ಬ ಚೇರ್ ಮೇಲೆ ಕುಳಿತಿದ್ದ ಶಿಕ್ಷಕರ ಬಳಿ ಸ್ನೋ ಸ್ಪ್ರೇ ಮಾಡುತ್ತಾನೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ಇದನ್ನು ನಿರೀಖ್ಷೆ ಮಾಡಿರಲಿಲ್ಲ. ದೂರದಿಂದ ಸ್ನೋ ಸ್ಪ್ರೇ ಮಾಡುತ್ತಾ ವಿದ್ಯಾರ್ಥಿ ಶಿಕ್ಷಕರ ಹತ್ತಿರ ಬಂದು ಅವರ ಮುಖಕ್ಕೆ ಹತ್ತಿರದಿಂದ ಸ್ನೋ ಸ್ಪ್ರೇ ಮಾಡುತ್ತಾನೆ.
ಇದರಿಂದ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಒಂದು ಕ್ಷಣ ಧಂಗಾಗಿ ಹೋಗುತ್ತಾರೆ. ವಿದ್ಯಾರ್ಥಿ ಹತ್ತಿರ ಹೋಗುತ್ತಿದ್ದಂತೆ ಶಿಕ್ಷಕ ಆತನನ್ನು ಹಿಡಿದು ಬೆನ್ನು ಭಾಗಿಸಿ ಥಳಿಸಿದ್ದಾರೆ. ತಮಾಷೆಯಾಗಿ ವಿದ್ಯಾರ್ಥಿ ಸ್ನೋ ಸ್ಪ್ರೇ ಮಾಡಿದ್ದು ಶಿಕ್ಷಕರು ತಾಮಾಷೆಯಾಗಿಯೇ ಆತನಿಗೆ ಥಳಿಸಿದ್ದಾರೆ.
ಕೇವಲ 8 ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಗೆಯನ್ನು ಸೃಷ್ಟಿಸಿದೆ. ಈ ವಿಡಿಯೋ ನೋಡಿದ ಜನರು ಸಿಕ್ಕಾಪಟ್ಟೆ ನಗಾಡಿದ್ದಾರೆ. HasnaZarooriHai ಎಂಬ ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಶೇರ್ ಆದ ತಕ್ಷಣ 25 ಸಾವಿರ ಮಂದಿ ವೀಕ್ಷಿಸಿದ್ದಾರೆ. ವೀಡಿಯೋ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು, ಗುರುಜಿಗೆ ಇಷ್ಟೊಂದು ಕೋಪ ಬರಬಾರದಿತ್ತು ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಪ್ರಸಾದ್ ಅಗತ್ಯವಿದೆ ಎಂದು ಬರೆದಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ಇದು ಹಳೆಯ ವಿಡಿಯೋ ಎಂದು ಹೇಳಲಾಗುತ್ತಿದೆ. ವಿಡಿಯೋ ಹಳೆಯದಾದರೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಾಷೆಯ ವೀಡಿಯೊವನ್ನು ಇಲ್ಲಿ ವೀಕ್ಷಿಸಿ
Happy Teacher's day kinda kalesh #TeachersDay
— Ghar Ke Kalesh (@gharkekalesh) September 5, 2023
pic.twitter.com/YOj4jaSERu












Click it and Unblock the Notifications