ಖಾಸ್ ಬಾತ್ : ರವಿ ಬೆಳಗೆರೆ ಹಾಗೂ ಜ್ಯೋತಿಷ್ಯ ಎಂಬ ಮಹಾ ಸ್ವಪ್ನ
ಪತ್ರಕರ್ತ ರವಿ ಬೆಳಗೆರೆ ಅವರು ಸ್ವತಃ ಜ್ಯೋತಿಷ್ಯದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದಿದೆ. ಆದರೆ ಓ ಮನಸೇಗಾಗಿ ಅವರು 'ಮಹಾಸ್ವಪ್ನ' ಹೆಸರಿನಲ್ಲಿ ವಿವಿಧ ರಾಶಿಗಳ ಗುಣ- ಸ್ವಭಾವಗಳ ಬಗ್ಗೆ ಬರೆಯುತ್ತಿದ್ದರು ಎಂಬುದು ಎಷ್ಟೋ ಮಂದಿಗೆ ತಿಳಿಸಿಲ್ಲ. ಅವರ ಬರವಣಿಗೆ ಎಷ್ಟು ಆಸಕ್ತಿಕರವಾಗಿರುತ್ತಿತ್ತು ಅಂದರೆ, ಅದನ್ನು ಓದಲೇಬೇಕು ಅಂತ ಜನರು ಓ ಮನಸೇ ಖರೀದಿಸುತ್ತಿದ್ದರು.
ಆದರೆ, ಅದನ್ನು ಅವರು ಲಿಂಡಾ ಗುಡ್ ಮನ್ ಅವರ ಪುಸ್ತಕದಿಂದ ಅನುವಾದ ಮಾಡಿರುತ್ತಿದ್ದರು. ಆದರೆ ಅದು ಬರೀ ಅನುವಾದಗಳಾಗಿರುತ್ತಿರಲಿಲ್ಲ. ಅದಕ್ಕೆ ತಮ್ಮದೊಂದು ಸ್ಪೆಷಲ್ ಟಚ್ ನೀಡುತ್ತಿದ್ದರು. ರವಿ ಬೆಳಗೆರೆ ಅವರ ಮೇಲೆ ತೆಲುಗು ಸಾಹಿತ್ಯದ ಪ್ರಭಾವ ವಿಪರೀತ. ಆದ್ದರಿಂದಲೇ ಎಷ್ಟೋ ಸಲ ತೆಲುಗಿನ ಶಬ್ದಗಳನ್ನೇ ಬಳಸಿಬಿಡುತ್ತಿದ್ದರು. ಇನ್ನು ಅಲ್ಲಲ್ಲಿ ಇಂಗ್ಲಿಷ್ ಶಬ್ದಗಳನ್ನು ಬಳಕೆ ಮಾಡಿ, ಬರೆಯುವ ಶೈಲಿ ಕೂಡ ಅಲ್ಲಿನದೇ.
ರವಿ ಬೆಳಗೆರೆ ಅವರ ಜನ್ಮ ನಾಮ ಜಿತೇಂದ್ರ. ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ಈ ಸಲ ಅವರಿಗೆ ಮೂರನೇ ಬಾರಿಗೆ ಸಾಡೇ ಸಾತ್ ಬಂದಿತ್ತು. ಷಷ್ಠಿಪೂರ್ತಿ ಶಾಂತಿ ಮಾಡಿಸಿಕೊಳ್ಳುವ ವೇಳೆ ಕೆಲವು ಶಾಂತಿ- ಪೂಜೆಗಳನ್ನು ಲಲಿತಾ ಬೆಳಗೆರೆ ಅವರು ಮಾಡಿಸಿದ್ದರು. ತಮ್ಮ ನಂಬಿಕೆಗಳು ಏನೇ ಇದ್ದರೂ ಮನೆಯಲ್ಲಿನ ಆಚರಣೆಗೆ ಪ್ರಶ್ನೆಯೇ ಮಾಡುತ್ತಿರಲಿಲ್ಲ ಆರ್ ಬಿ.

ಹುಬ್ಬಳ್ಳಿ ಮೂಲದ ಜ್ಯೋತಿಷಿಯೊಬ್ಬರಿಂದ ರವಿ ಬೆಳಗೆರೆ ಅಭಿಮಾನಿಯೇ ಒಬ್ಬರು ಜಾತಕ ಪರಿಶೀಲನೆ ಮಾಡಿಸಿ, ಅದರ ಆಡಿಯೋ ಕಳಿಸಿದ್ದರು. ಅದರಿಂದ ಬೆಳಗೆರೆ ಬಹಳ ಖುಷಿ ಪಟ್ಟಿದ್ದರು. ಅದೆಷ್ಟು ನಿಖರವಾಗಿದೆ ಹಾಗೂ ತಮ್ಮ ಜೀವನದ ಘಟನೆಗಳಿಗೆ ತಾಳೆಯಾಗುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಆ ಜ್ಯೋತಿಷಿಗಳ ಸಲಹೆ ಮೇರೆಗೆ ಗೋಕರ್ಣದಲ್ಲಿ ಪಿತೃ ಕಾರ್ಯಗಳನ್ನು ಮಾಡಿದ್ದರು.
ಆದರೂ ಈ ಎಲ್ಲವೂ ಅವರ ಪಾಲಿಗೆ ಎಲ್ಲ ವಿದ್ಯೆಯಂತೆಯೇ ಒಂದು. ಅದನ್ನು ಸರಿಯಾಗಿ ಕಲಿತವರು ಹೆಚ್ಚು ನಿಖರವಾಗಿ ಹೇಳಬಲ್ಲರು ಎಂಬ ಭಾವನೆ ಇತ್ತೇ ಹೊರತು ಅದರ ಆಚೆಗೆ ದೈವತ್ವದಲ್ಲಿ ಯಾರನ್ನೂ ಕೂರಿಸುತ್ತಿರಲಿಲ್ಲ. ಕುಟುಂಬ ಸದಸ್ಯರ ಮೂಲದ ಪ್ರಕಾರ, ಈ ನವೆಂಬರ್ ತಿಂಗಳು ಕಳೆಯುವುದು ರವಿ ಬೆಳೆಗೆರೆಯವರ ಪಾಲಿಗೆ ಬಹಳ ಕಷ್ಟ ಇತ್ತು. ಈಗ ಹಾಗೇ ಆಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications