ಶಾಸಕರ ಮೌಲ್ಯ ಮಾಪನ; ಶಿವಮೊಗ್ಗ ಜಿಲ್ಲೆಯ ಶಾಸಕರಿಗೆ ಅಂಕ ಕೊಡಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕರ್ನಾಟಕ ಸಿದ್ಧವಾಗುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆಯ ತಯಾರಿ ಆರಂಭಿಸಿವೆ. 2023ರ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಕಳೆದ ಚುನಾವಣೆಯಲ್ಲಿ ಜನರು ಆಯ್ಕೆ ಮಾಡಿದ ಶಾಸಕರು ಮಾಡಿದ ಕೆಲಸಗಳಿಗೆ ಅಂಕ ನೀಡಲು ಈಗ ಅವಕಾಶ ಸಿಕ್ಕಿದೆ.
ಶಾಸಕರು ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು ಹೇಗೆ?, ಕೋವಿಡ್ ಸಮಯದಲ್ಲಿ ಶಾಸಕರ ಕಾರ್ಯ ವೈಖರಿ ಹೇಗಿತ್ತು? ಎಂದು ಜನರು ಮೌಲ್ಯ ಮಾಪನ ಮಾಡಬಹುದು. ಒನ್ ಇಂಡಿಯಾ ಕನ್ನಡ ಶಾಸಕರ ಮೌಲ್ಯ ಮಾಪನ ಮಾಡಲು Rate your MLA ಎಂಬ ಅಭಿಯಾನ ನಡೆಸುತ್ತಿದೆ. ನಿಮ್ಮ ಕ್ಷೇತ್ರದ ಶಾಸಕರು ಮಾಡಿದ ಕೆಲಸಗಳಿಗೆ ನೀವು ಇಲ್ಲಿ ಸ್ಟಾರ್‌ಗಳನ್ನು ನೀಡುವ ಮೂಲಕ ಅಂಕ ಕೊಡಬಹುದು.
ಈ ಪುಟದಲ್ಲಿ ಜನರು ಶಿವಮೊಗ್ಗ ಜಿಲ್ಲೆಯ ಶಾಸಕರ ಕಾರ್ಯ ವೈಖರಿಗೆ ಅಂಕ ನೀಡಬಹುದು. ಮತದಾನ ಪೂರ್ಣಗೊಂಡ ಬಳಿಕ ಪುಟದ ಕೊನೆಯಲ್ಲಿ ಜನರು ನೀಡಿದ ಸರಾಸರಿ ಅಂಕ ನೋಡಬಹುದು. ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಪುಟವನ್ನು ಶೇರ್ ಮಾಡಬಹುದು.
ಒಟ್ಟು 9 ಅಂಶಗಳ ಆಧಾರದ ಮೇಲೆ ಜನರು ಶಾಸಕರ ಕಾರ್ಯ ವೈಖರಿ ಮೌಲ್ಯ ಮಾಪನ ಮಾಡಬಹುದು. ಸ್ಟಾರ್ ರೇಟಿಂಗ್ ಮೂಲಕ ಅಂಕ ನೀಡಬಹುದು. ಜನರು ವೋಟ್ ಮಾಡಿದ ಬಳಿಕ ಪುಟವನ್ನು ಹಂಚಿಕೆ ಮಾಡಬಹುದು. ಶಾಸಕರ ಲಭ್ಯತೆ, ಕ್ಷೇತ್ರದ ಅಭಿವೃದ್ಧಿ ಕಾರ್ಯ, ವಿಧಾನಸಭೆಯಲ್ಲಿ ಮಾತನಾಡಿದ್ದು, ರಸ್ತೆ ಸೌಕರ್ಯ, ನೀರಿನ ಸೌಕರ್ಯ, ಮೂಲ ಸೌಕರ್ಯ ಮುಂತಾದ ಅಂಶಗಳ ಆಧಾರದ ಮೇಲೆ ಜನರು ವೋಟ್ ಮಾಡಲು ಅವಕಾಶ ಕೊಡಲಾಗಿದೆ.

ತೀರ್ಥಹಳ್ಳಿ ಕ್ಷೇತ್ರದ ಶಾಸಕರು
ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಸೊರಬ, ಶಿಕಾರಿಪುರ ಮತ್ತು ಭದ್ರಾವತಿ ವಿಧಾನಸಭಾ ಕ್ಷೇತ್ರಗಳಿವೆ. ಭದ್ರಾವತಿ ಹೊರತುಪಡಿಸಿ ಉಳಿದ ಕಡೆ ಬಿಜೆಪಿಯ ಶಾಸಕರಿದ್ದಾರೆ. ಭದ್ರಾವತಿ ಕಾಂಗ್ರೆಸ್ ವಶದಲ್ಲಿದೆ.
ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಬಿಜೆಪಿಯ ಆರಗ ಜ್ಞಾನೇಂದ್ರ. ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಗೃಹ ಸಚಿವರು. 2018ರ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ 67,527 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಿಗೆ ಅಂಕ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಶಿವಮೊಗ್ಗ ನಗರ ಕ್ಷೇತ್ರ
ಶಿವಮೊಗ್ಗ ನಗರ ಕ್ಷೇತ್ರದ ಶಾಸಕರು ಕೆ. ಎಸ್. ಈಶ್ವರಪ್ಪ. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ 104027 ಮತಗಳನ್ನು ಪಡೆದು ಈಶ್ವರಪ್ಪ ಗೆಲುವು ಸಾಧಿಸಿದ್ದಾರೆ. ಶಾಸಕರಿಗೆ ಅಂಕ ನೀಡಲು ಲಿಂಕ್.

ಶಿವಮೊಗ್ಗ ಗ್ರಾಮಾಂತರ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರು ಬಿಜೆಪಿಯ ಕೆ. ಬಿ. ಅಶೋಕ ನಾಯ್ಕ್. 2018ರ ಚುನಾವಣೆಯಲ್ಲಿ ಅವರು 69,326 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಿಗೆ ನೀವು ವೋಟ್ ಮಾಡಲು ಲಿಂಕ್ ಇಲ್ಲಿದೆ.

ಶಿಕಾರಿಪುರ ಕ್ಷೇತ್ರ
ಶಿಕಾರಿಪುರ ಕ್ಷೇತ್ರದ ಶಾಸಕರು ಬಿಜೆಪಿಯ ಬಿ. ಎಸ್. ಯಡಿಯೂರಪ್ಪ. 2018ರ ಚುನಾವಣೆಯಲ್ಲಿ ಗೆದ್ದ ಬಳಿಕ ಮುಖ್ಯಮಂತ್ರಿಗಳಾಗಿದ್ದರು. ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2018ರ ಚುನಾವಣೆಯಲ್ಲಿ 86,983 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಿಗೆ ವೋಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸಾಗರ ವಿಧಾನಸಭಾ ಕ್ಷೇತ್ರ
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹರತಾಳು ಹಾಲಪ್ಪ. 2018ರ ಚುನಾವಣೆಯಲ್ಲಿ ಅವರು 78,475 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಿಗೆ ಅಂಕ ನೀಡಲು ಇಲ್ಲಿದೆ ಲಿಂಕ್.

ಸೊರಬ ಕ್ಷೇತ್ರದ ಶಾಸಕರು
ಸೊರಬ ಕ್ಷೇತ್ರದ ಶಾಸಕರು ಬಿಜೆಪಿಯ ಕುಮಾರ್ ಬಂಗಾರಪ್ಪ. 2018ರ ಚುನಾವಣೆಯಲ್ಲಿ ಅವರು 72,091 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಿಗೆ ಮತದಾನ ಮಾಡಲು ಲಿಂಕ್.

ಭದ್ರಾವತಿ ಕ್ಷೇತ್ರ
ಭದ್ರಾವತಿ ಕ್ಷೇತ್ರದ ಶಾಸಕರು ಕಾಂಗ್ರೆಸ್‌ನ ಬಿ. ಕೆ. ಸಂಗಮೇಶ್ವರ. 2018ರ ಚುನಾವಣೆಯಲ್ಲಿ ಅವರು 75,722 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಶಾಸಕರಿಗೆ ಅಂಕ ನೀಡಲು ಇಲ್ಲಿ ಕ್ಲಿಕ್ ಮಾಡಿ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications