Get Updates
Get notified of breaking news, exclusive insights, and must-see stories!

ಕಾಮೆಡಿಯನ್‌ ಮಾನ್‌ ವಿರೋಧಿಗಳ ವಿರುದ್ಧ ಜೋಕ್‌ಗಳ ಸುರಿಮಳೆ!

ಚಂಡೀಗಢ, ಮಾರ್ಚ್ 11: ವಿಡಂಬನಕಾರ-ರಾಜಕಾರಣಿ ಭಗವಂತ್ ಮಾನ್‌ ಪಂಜಾ‌ಬ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ ಚುನಾವಣೆಗೆ ನಿಂತು ಭರ್ಜರಿ ಜಯಗಳಿಸಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಭಗವಂತ್‌ ಮಾನ್‌ ವಿರೋಧಿಗಳ ವಿರುದ್ಧವೇ ಈಗ ಜೋಕ್‌ಗಳ ಸುರಿಮಳೆ ಆಗುತ್ತಿದೆ.

'ಫೋನ್-ಇನ್ ಪೋಲ್' ನಂತರ ಜನವರಿ 18 ರಂದು ಪಂಜಾಬ್‌ನಲ್ಲಿ ವಿಡಂಬನಕಾರ-ರಾಜಕಾರಣಿ ಭಗವಂತ್ ಮಾನ್ ಅವರನ್ನು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಜನವರಿ 13 ರಂದು ಪಂಜಾಬ್‌ನ ಜನರಿಗೆ ತಮ್ಮ ಆದ್ಯತೆಯ ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ಮನವಿ ಮಾಡಿಕೊಂಡರು. ಅದಕ್ಕಾಗಿಯೇ ಮೊಬೈಲ್‌ ಸಂಖ್ಯೆಯ ಮೂಲಕ ಜನರ ಅಭಿಪ್ರಾಯ ಸಂಗ್ರಹ ಮಾಡಲು ಕೂಡಾ ಆರಂಭ ಮಾಡಿದರು.

ಆಮ್‌ ಆದ್ಮಿ ಪಕ್ಷವು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಭಗವಂತ್‌ ಮಾನ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕೆಂದು ಬಯಸಿದ್ದರೂ ಕೂಡಾ ಪಂಜಾಬ್ ಜನರು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ, ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಬಯಸಿದ್ದರು.

ಈ ಅಭಿಯಾನದಲ್ಲಿ ಪಕ್ಷವು 22 ಲಕ್ಷ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ. ಕೇಜ್ರಿವಾಲ್ ನಂತರ, 48 ವರ್ಷದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಭಗವಂತ್‌ ಮಾನ್‌ರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು. ಶಾಲಾ ಶಿಕ್ಷಕರ ಕುಟುಂಬದಲ್ಲಿ ಜನಿಸಿದ ಭಗವಂತ್‌ ಮಾನ್‌ ಪಂಜಾಬ್ ರಾಜಕೀಯಕ್ಕೆ ಹೊಸಬರು ಏನಲ್ಲ. ಸಂಗ್ರೂರ್ ಕ್ಷೇತ್ರದಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ. ಧುರಿಯಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

 'ಇಂಕ್ವಿಲಾಬ್ ಜಿಂದಾಬಾದ್' ಎಂದು ಹುರಿದುಂಬಿಸುವ ಭಗವಂತ್‌ ಮಾನ್‌

'ಇಂಕ್ವಿಲಾಬ್ ಜಿಂದಾಬಾದ್' ಎಂದು ಹುರಿದುಂಬಿಸುವ ಭಗವಂತ್‌ ಮಾನ್‌

ಸದಾ ಜನರನ್ನು 'ಇಂಕ್ವಿಲಾಬ್ ಜಿಂದಾಬಾದ್' ಎಂದು ಹುರಿದುಂಬಿಸುವ ಮಾನ್, ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುನಮ್‌ನ ಶಹೀದ್ ಉಧಮ್ ಸಿಂಗ್ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾರೆ. ಅವರು ಸರ್ದಾರ್ ಭಗತ್ ಸಿಂಗ್ ಅವರ ಕಟ್ಟಾ ಅನುಯಾಯಿ. ನವನ್‌ಶಹರ್ ಜಿಲ್ಲೆಯ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಪಂಜಾಬ್‌ನ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು. 2011 ರಲ್ಲಿ ರಾಜಕೀಯಕ್ಕೆ ಸೇರಿದಾಗ ಹಾಸ್ಯದಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಅವರು ಮನ್‌ಪ್ರೀತ್ ಸಿಂಗ್ ಬಾದಲ್ ಸ್ಥಾಪಿಸಿದ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ (ಪಿಪಿಪಿ) ಗೆ ಸೇರಿದರು. ಆದರೆ ಬಾದಲ್ ಅವರು ಪಿಪಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದ ನಂತರ ಪಿಪಿಪಿ ತೊರೆದು ಎಎಪಿ ಸೇರುವ ಕೇಜ್ರಿವಾಲ್ ಅವರ ಪ್ರಸ್ತಾಪವನ್ನು ಒಪ್ಪಿಕೊಂಡರು.

ಕಾಮೆಡಿಯನ್‌ ಗೆಲುವಿನಿಂದ ಕಾಮೆಡಿಯಾದ ಕಾಂಗ್ರೆಸ್‌ ನಾಯಕರು

ಕಾಮೆಡಿಯನ್‌ ಭಗವಂತ್‌ ಮಾನ್‌ ಗೆಲುವಿನಿಂದಾಗಿ ಕಾಂಗ್ರೆಸ್‌ ನಾಯಕರುಗಳು ಕಾಮೆಡಿ ಆಗುತ್ತಿದ್ದಾರೆ. ಕಾಮಿಡಿ ಶೋನಲ್ಲಿ ಭಗವಂತ್ ಮಾನ್ ಅವರ ಜೋಕ್ ಕೇಳಿ ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ನಕ್ಕು ಸುಸ್ತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಗವಂತ್‌ ಮಾನ್‌ 2000 ರ ಸ್ಟ್ಯಾಂಡ್ಅಪ್ ಕಾಮಿಡಿ ಶೋ ಲಾಫ್ಟರ್ ಚಾಲೆಂಜ್-ಜೋಕ್ ಸಭಾದಲ್ಲಿ ಸ್ಪರ್ಧಿಯಾಗಿದ್ದರು. ಅಲ್ಲಿ ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಇದ್ದರು. ಸಿಧು ಭಗವಂತ್‌ ಮಾನ್‌ರ ಸ್ಪರ್ಧಿಯಾಗಿದ್ದ ಕಾಮೆಡಿ ಕಾರ್ಯಕ್ರಮದಲ್ಲಿ ಜಡ್ಜ್‌ ಆಗಿದ್ದರು. ಈಗ ನಗುವವರು ಯಾರು ಎಂದು ಕೆಲವು ನೆಟ್ಟಿಗರಯ ವ್ಯಗ್ಯವಾಗಿ ಪ್ರಶ್ನಿಸಿದ್ದಾರೆ.

ಉಕ್ರೇನ್‌ ಅಧ್ಯಕ್ಷ, ಭಗವಂತ್‌ ಮಾನ್‌ ತುಲನೆ ಆರಂಭ

ಈ ನಡುವೆ ಉಕ್ರೇನ್‌ ಅಧ್ಯಕ್ಷ ಹಾಗೂ ಭಗವಂತ್‌ ಮಾನ್‌ ನಡುವೆ ತುಲನೆಯನ್ನು ಕೂಡಾ ಮಾಡಲು ನೆಟ್ಟಿಗರು ಆರಂಭ ಮಾಡಿದ್ದಾರೆ. "ಹಾಸ್ಯಗಾರರು ಮತ್ತು ವಿಡಂಬನಕಾರರು ರಾಜಕೀಯಕ್ಕೆ ಇಳಿಯುವ ಸಮಯ ಬಂದಿದೆ!! ಮೊದಲ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರಾದರು ಮತ್ತು ಈಗ ಭಗವಂತ್ ಮಾನ್," ಎಂದು ನೆಟ್ಟಿಗರು ಓರ್ವರು ಹೇಳಿದ್ದಾರೆ. ಇನ್ನು ಕೆಲವರು ಕುನಾಲ್‌ ಕಮ್ರಾ ದೇಶದ ಪ್ರಧಾನಿ ಆಗಬಲ್ಲರು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಹಾಸ್ಯನಟರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ನಾನು ಭಾವಿಸುತ್ತೇನೆ. ಮೊದಲು ಉಕ್ರೇನ್‌ ಅಧ್ಯಕ್ಷ, ಈಗ ಪಂಜಾಬ್‌ ಸಿಎಂ ಭಗವಂತ್‌ ಮಾನ್‌, ಭವಿಷ್ಯದಲ್ಲಿ ದೇಶದ ಪ್ರಧಾನಿ ಕುನಾಲ್‌ ಕಮ್ರಾ," ಎಂದಿದ್ದಾರೆ. ಇನ್ನು ಕಾಮೆಡಿಯನ್‌ಗಳನ್ನು ಎಂದಿಗೂ ಕಡೆಗಣಿಸಬೇಡಿ ಎಂದು ಕೂಡಾ ಹಲವಾರು ಹೇಳಿದ್ದಾರೆ. ವೊಲೊಡಿಮಿರ್ ಝೆಲೆನ್ಸ್ಕಿ ವೃತ್ತಿಜೀವನಕ್ಕೆ ಒಂದು ಮಹತ್ವದ ತಿರುವು ಏನೆಂದರೆ, ಅವರು 'ಸರ್ವೆಂಟ್ ಆಫ್ ದಿ ಪೀಪಲ್' ನಲ್ಲಿ ಕಾಣಿಸಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ಅಧ್ಯಕ್ಷರ ಪಾತ್ರವನ್ನು ನಿರ್ವಹಣೆ ಮಾಡಿದರು. ಈಗ ಉಕ್ರೇನ್‌ ಅಧ್ಯಕ್ಷರಾಗಿದ್ದಾರೆ.

 ಭಗವಂತ್‌ ಮಾನ್‌: ವಿಧಾನಸಭೆ ಚುನಾವಣೆ

ಭಗವಂತ್‌ ಮಾನ್‌: ವಿಧಾನಸಭೆ ಚುನಾವಣೆ

ಪಂಜಾಬ್‌ನ ಹೊಸದಾಗಿ ಚುನಾಯಿತರಾದ ಭಗವಂತ್ ಮಾನ್ ತಮ್ಮ ಸಾರ್ವಜನಿಕ ಜೀವನವನ್ನು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಪ್ರಾರಂಭಿಸಿದರು. ಸಂಸತ್ತಿನ ಅವರು ಮಾಡಿದ ಭಾಷಣಗಳು ಕೂಡಾ ಪ್ರಸಿದ್ಧವಾಗಿದೆ. ಯುವಜನೋತ್ಸವಗಳು ಮತ್ತು ಅಂತರ ಕಾಲೇಜು ಸ್ಪರ್ಧೆಗಳೊಂದಿಗೆ ತಮ್ಮ ಹಾಸ್ಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಿಡಂಬನಾತ್ಮಕ ರಾಜಕೀಯ ಭಾಷಣಗಳಿಗೆ ಹೆಸರುವಾಸಿಯಾದ ಭಗವಂತ್‌ ಮಾನ್‌ ಅನೇಕ ಕಿರುಚಿತ್ರಗಳನ್ನು ಪ್ರದರ್ಶಿಸಿದರು. ಹಾಸ್ಯ ಆಲ್ಬಂಗಳನ್ನು ಮಾಡಿದರು. 2008 ರಲ್ಲಿ, ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನಲ್ಲಿ ಭಾಗವಹಿಸಿದರು. ಇದನ್ನು ನವಜೋತ್ ಸಿಂಗ್ ಸಿಧು ಅವರು ನಿರ್ಣಯಿಸಿದರು. ಭಗವಂತ್ ಮಾನ್ ಅವರು ಬಲ್ವಂತ್ ದುಲ್ಲತ್ ನಿರ್ದೇಶನದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ಮೈ ಮಾ ಪಂಜಾಬ್ ಡೀ ನಲ್ಲಿ ಸಹ ನಟಿಸಿದ್ದಾರೆ. ಮಾನ್‌ ಧುರಿ ಕ್ಷೇತ್ರದಲ್ಲಿ 58,206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+