ಆಜಾದಿ ಗ್ಯಾಂಗನ್ನು ಬೆಂಬಲಿಸುವ ಗೋಸುಂಬೆಗಳೇ ಎಲ್ಲಿದ್ದೀರಿ?
ಯುದ್ಧೋನ್ಮಾದದ ಮಾತುಗಳನ್ನು ಆಡುವವರನ್ನು ನಂಬಬಹುದು. ಅವರ ಮನಸಿನಲ್ಲಿ ಕೃತ್ರಿಮತೆ ಇರುವುದಿಲ್ಲ. ಆದರೆ ಇನ್ನೊಂದು ಗುಂಪು ಇದೆ.
ಇವರು ಸೈನಿಕರಿಗೆ ಅವಮಾನಗಳಾದಾಗ ಸೊಲ್ಲೆತ್ತುವುದಿಲ್ಲ. ಸೈನಿಕರು ಸಂಬಳಕ್ಕಾಗಿ ದುಡಿಯುತ್ತಾರೆ ಎಂದು ಅವಮಾನಿಸಿದಾಗ ಇವರು ನಾಟ್ ರೀಚಬಲ್ ಆಗಿರುತ್ತಾರೆ, ಸೈನಿಕರನ್ನು ರೇಪಿಸ್ಟುಗಳು ಎಂದು ಕರೆದಾಗ ಸ್ವಿಚ್ ಆಫ್ ಆಗಿರುತ್ತಾರೆ, ಸೇನಾ ಮುಖ್ಯಸ್ಥರನ್ನು ಗೂಂಡಾ ಎಂದಾಗ ಮಗುಮ್ಮಾಗಿರುತ್ತಾರೆ, ಸರ್ಜಿಕಲ್ ಸ್ಟ್ರೈಕಿಗೆ ಸಾಕ್ಷಿ ಕೇಳಿದಾಗಲೂ ಸೈನಿಕರ ಪರ ನಿಲ್ಲುವುದಿಲ್ಲ.
ಆದರೆ ಆಜಾದಿ ಗ್ಯಾಂಗಿನ ಕೂದಲು ಕೊಂಕಿದರೂ ಸಾಕು ಸಿಡಿದು ನಿಲ್ಲುತ್ತಾರೆ. ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಗುರಾಣಿ ಹಿಡಿದು ಉಗ್ರಾನುಕಂಪಿಗಳ ಬೆಂಬಲಕ್ಕೆ ನಿಲ್ಲುತ್ತಾರೆ. ನಗರ ನಕ್ಸಲರಿಗೆ ಇವರ ಹೃದಯ ಮಿಡಿಯುತ್ತಿರುತ್ತದೆ.
ಶ್! ಯುದ್ಧದ ದುಷ್ಪರಿಣಾಮ ಗೊತ್ತಿದೆಯಾ? ಸೈನಿಕರ ಜೀವಕ್ಕೆ ಬೆಲೆ ಇಲ್ಲವಾ? ರಣೋತ್ಸಾಹದಲ್ಲಿರುವವರು ಸೈನಿಕರ ಮನೆಯವರ ಸ್ಥಾನದಲ್ಲಿ ನಿಂತು ಯೋಚಿಸ್ತಿದೀರಾ? ಎಂದೆಲ್ಲಾ ಶಾಂತಿದೂತರಂತೆ ಸೈನಿಕರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ.

ಯುದ್ಧ ಸಾರುವ ಹಕ್ಕು ಇರುವುದು ಪ್ರಾಣವನ್ನು ಪಣಕ್ಕಿಡುವ ಸೈನಿಕನಿಗೆ ಮಾತ್ರ. ಆದರೆ ಯಾವತ್ತೂ ಇಸ್ಲಾಮಿಕ್ ಮೂಲಭೂತವಾದವನ್ನು ಗಟ್ಟಿ ದನಿಯಲ್ಲಿ ಖಂಡಿಸದ ಗೋಸುಂಬೆಗಳಿಗೆ ಸೈನಿಕರ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇರುವುದಿಲ್ಲ.
ಕಾಶ್ಮೀರದ ಸಮಸ್ಯೆಗಳು : ಕಾಶ್ಮೀರದ ಸಮಸ್ಯೆಯೇ ಬೇರೆ ಇದೆ. ಅಲ್ಲಿನ ಯುವಕರ ಕೂಗನ್ನು ಕೇಳಿಸಿಕೊಳ್ಳಬೇಕು ಎಂದು ಶಾಂತಿದೂತರಂತೆ ಮಾತನಾಡುವುದು ಸುಲಭ. ಆದರೆ ವಾಸ್ತವ ನಮ್ಮ ಕಲ್ಪನೆಗಿಂತ ಭಿನ್ನವಾಗಿದೆ.
ಕಾಶ್ಮೀರದ ಶಾ ಫೈಸಲ್ ಎಂಬುವವನಿಗೆ ಭಾರತದ ನೆಲ ಅತ್ಯುನ್ನತ ಸೌಕರ್ಯಗಳನ್ನು ಕೊಟ್ಟಿದ್ದರ ಫಲವಾಗಿ ಆತ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಗಳಿಸುತ್ತಾನೆ. ಆದರೆ ಆತ ಐಎಎಸ್ ಹುದ್ದೆಗೆ ರಾಜೀನಾಮೆ ಕೊಡುವ ಮೂಲಕ ದೇಶಕ್ಕೆ ಕೃತಘ್ನನಾಗಿ ನಡೆದುಕೊಳ್ಳುತ್ತಾನೆ. ಕಾರಣ ಆತ ಉನ್ನತದ ವ್ಯಾಸಂಗಕ್ಕೆ ಅಮೇರಿಕಕ್ಕೆ ಹೋಗಿದ್ದಾಗ ಪಾಕಿಸ್ತಾನದ ISI ಆತನನ್ನು ಬ್ರೇನ್ ವಾಷ್ ಮಾಡಿ ಅನ್ನ ನೀರು ಕೊಟ್ಟ ದೇಶದ ವಿರುದ್ಧವೇ ತಿರುಗಿ ಬೀಳುವಂತೆ ಮಾಡುತ್ತದೆ.

ಬೇರೆ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿ ಐಎಎಸ್ ಹುದ್ದೆಯನ್ನು ತೊರೆಯುವುದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜವಾನನೋ ದಿವಾನನೋ ಯಾವುದಾದರೂ ಆಗಲಿ, ಒಂದು ಸರ್ಕಾರಿ ಕೆಲಸ ಸಿಗಲಪ್ಪ ಸಾಕು ಎಂದು ಹಾತೊರೆಯುತ್ತಿರುತ್ತಾರೆ.
ಒಬ್ಬ ಅತ್ಯುನ್ನತ ರ‍್ಯಾಂಕ್ ಪಡೆದ ಐಎಎಸ್ ಅಧಿಕಾರಿಯ ಮನಸ್ಥಿತಿಯೇ ಹೀಗಿರಬೇಕಾದರೆ ಇನ್ನು ಕಲ್ಲು ತೂರುವವರ ಮನಸ್ಥಿತಿ ಹೇಗಿರಬೇಡ ಯೋಚಿಸಿ. ಈ ದೇಶ ಕಾಶ್ಮೀರಿ ಯುವಕರಿಗೆ ಅಲಿಘಢ ವಿವಿ, ಜೆಎನ್ಯು, ಏಮ್ಸ್ , ಐಐಟಿ ಮುಂತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಅವಕಾಶ ಕೊಡುತ್ತದೆ. ಆದರೆ ಉಗ್ರರಿಂದ ಯೋಧರು ಹತರಾದಾಗಲೆಲ್ಲ ಮೊದಲು ಸಂಭ್ರಮಿಸುವವರೇ ಈ ವಿದ್ಯಾವಂತ ಕೃತಘ್ನರು. ಇವರೆಲ್ಲ ಭಾರತದ ಋಣದಲ್ಲಿ ಇಂಜನಿಯರು, ಡಾಕ್ಟರುಗಳು, ಪ್ರೊಫೆಸರುಗಳಾಗುತ್ತಿದ್ದಾರೆ.
ಒಂದು ವೇಳೆ ಕಾಶ್ಮೀರ ಸ್ವತಂತ್ರವಾದರೆ ಇವರೆಲ್ಲ ಐಸಿಸ್ ಉಗ್ರರ ಚಡ್ಡಿ ಒಗೆಯಲು ಸಿರಿಯಾಕ್ಕೊ ಇರಾಕಿಗೊ ಹೋಗಬೇಕಾಗುತ್ತದೆ. ಅಥವಾ ಈಗಾಗಲೇ ಪಾಕಿಸ್ತಾನವನ್ನು ನುಂಗಿ ನೀರು ಕುಡಿಯುತ್ತಿರುವ ಚೀನಾದ ಜೀತದಾಳುಗಳಾಗಬೇಕಾಗುತ್ತದೆ..

ಉಗ್ರವಾದವನ್ನು ಖಂಡಿಸಲು ಹಿಂಜರಿಯುವ ಇಬ್ಬಂದಿ ಜನಗಳು ಪುಲ್ವಾಮ ಕೃತ್ಯಕ್ಕೆ ಇಂಟೆಲಿಜೆನ್ಸ್ ಫೇಲೂರ್ ಬಣ್ಣ ಕೊಟ್ಟು ಆಡಳಿತವನ್ನು ಹಣಿಯುವ ಮೂಲಕ ಉಗ್ರರೆಡೆಗೆ ತಮ್ಮ 'ಸಾಫ್ಟ್ ಕಾರ್ನರ್' ಅನ್ನು ಎಂದಿನಂತೆ ಜಾರಿಯಲ್ಲಿಟ್ಟಿದ್ದಾರೆ.
ಆದರೆ ಈ ದೇಶದ ಕಟ್ಟಕಡೆಯ ಯೋಧ ಕಾಶ್ಮೀರದ ಗಡಿಯಲ್ಲಿ ಜೀವಂತವಾಗಿರುವವರೆಗೂ ಕಾಶ್ಮೀರ ವಿಭಜನೆಯಾಗದು. ಉಗ್ರರು ಮತ್ತು ಅವರ ಕರುಣಾಳುಗಳ ಪಾಲಿಗೆ ಇದು ನರಕಸದೃಶ ಸತ್ಯ.
ಕಾಶ್ಮೀರ ಸ್ವತಂತ್ರವಾದರೆ ಏನಾಗಲಿದೆ? : ಕಾಶ್ಮೀರವನ್ನು ಸ್ವತಂತ್ರಗೊಳಿಸುವುದೆಂದರೆ ಶತ್ರುವಿಗೆ ಪಂಜಾಬ್ ದೆಹಲಿಗೆ ಲಗ್ಗೆಯಿಡಲು ಹಾದಿಯನ್ನು ಸುಗಮಗೊಳಿಸುವುದು ಎಂದರ್ಥ. ನಮ್ಮ ಯೋಧರು ಕಾಶ್ಮೀರ ಎಂಬ ಬಫರ್ ಜೋನಿನಲ್ಲಿ ನಿರಂತರ ಕಾದಾಡುತ್ತಿರುವುದರಿಂದಲೇ ಭಾರತದ ಉಳಿದ ರಾಜ್ಯಗಳ ಜನರು ಸುರಕ್ಷಿತವಾಗಿರುವುದು. ಕಾಶ್ಮೀರ ಸ್ವತಂತ್ರವಾದ ಕೂಡಲೇ ಅಲ್ಲಿನ ಬಂದೂಕುಗಳೆಲ್ಲ ನೇಗಿಲುಗಳಾಗುತ್ತವೆ, ಶಾಂತಿಯ ತೋಟ ಸ್ಥಾಪಿತವಾಗುತ್ತದೆ ಎಂದು ಭಾವಿಸುವುದು ಮೂರ್ಖತನ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications