Monkey Drink RO Water: ಮನೆಗೆ ನುಗ್ಗಿ ಅಕ್ವಾಗಾರ್ಡ್ ಮೂಲಕ ಶುದ್ಧ ನೀರು ಕುಡಿದ ಮಂಗ: ವಿಡಿಯೋ ವೈರಲ್

ತೀವ್ರ ಬಾಯಾರಿಕೆಯಿಂದಾಗಿ ಮಂಗವೊಂದು ಮನೆಗೆ ನುಗ್ಗಿ ಅಕ್ವಾಗಾರ್ಡ್ ಮೂಲಕ ಶುದ್ಧ ನೀರು ಕುಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇತ್ತೀಚೆಗೆ ಮಳೆರಾಯನ ಸಿಟ್ಟು ಸೂರ್ಯದೇವ ತೀರಿಸಿಕೊಳ್ಳುತ್ತಿದ್ದಾನೆ ಎಂಬಂತಾಗಿದೆ. ಮಳೆ ಬಾರದೆ ಬಿಸಿಲು ಹೆಚ್ಚಾಗಿರುವುದು ಜನರನ್ನು ಹೈರಾಣಾಗಿಸಿದೆ. ಬೆಂಗಳೂರಿನಲ್ಲಿ ಬರದ ಛಾಯೆ ಆವರಿಸಿದ್ದು ಜನರು ನೀರಿಲ್ಲದೆ ಸಂಕಷ್ಟವನ್ನು ಎದುರಿಸುವಂತಾಗಿದೆ. ಕುಡಿಯಲು ನೀರಿಲ್ಲದೆ ಜನ ಕಂಗಾಲಾಗಿದ್ದಾರೆ.

Monkey Enters Kitchen And Drinks Aquaguard Water Video Goes Viral

ಕಳಪೆ ನೀರು ಕುಡಿಯಲಾಗದೆ ಸಂಕಷ್ಟದ ಸ್ಥಿತಿಯನ್ನು ಸಿಲಿಕಾನ್ ಸಿಟಿ ಮಂದಿ ಎದುರಿಸುತ್ತಿದ್ದಾರೆ. ಯಾವುದೇ ಗಲ್ಲಿಗೋದರೂ ನಲ್ಲಿ ಮುಂದೆ ಖಾಲಿ ಬಿಂದಿಗೆಗಳ ಸಾಲು ಕಂಡು ಬರುತ್ತಿದೆ. ಈ ಸಮಸ್ಯೆ ಪ್ರಾಣಿಗಳಿಗೂ ಹೊರತಾಗಿಲ್ಲ. ನೀರಿಲ್ಲದೆ ಪ್ರಾಣಿಗಳು ಮನೆ ಹೊಕ್ಕು ನೀರಿನ ದಾಹ ತೀರಿಸಿಕೊಳ್ಳುತ್ತಿವೆ.

ಹೌದು... ಸಾಮಾಜಿಕ ಜಾಲತಾಣದಲ್ಲಿ ಮಂಗವೊಂದು ಮನೆಗೆ ನುಗ್ಗಿ ನೀರು ಕುಡಿದ ವಿಡಿಯೋ ಸಾಮಾಜಿಕ ಕಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬಿಸಿಲಿನ ತಾಪದ ನಡುವೆ ನಿರಂತರವಾಗಿ ಜಲಮೂಲಗಳು ಬತ್ತಿ ಹೋಗುತ್ತಿರುವುದರಿಂದ ಕಾಡುಪ್ರಾಣಿ, ಪಕ್ಷಿ ಸಂಕುಲಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತೀವ್ರ ಬಿಸಿಲಿನಿಂದಾಗಿ ಕೋತಿಗೆ ಬಾಯಾರಿಕೆಯಾಗಿದ್ದು, ಕಿಟಕಿಯ ಗ್ರಿಲ್‌ನ ಮಧ್ಯಭಾಗವನ್ನು ದಾಟಿ ಅಕ್ವಾಗಾರ್ಡ್ ನೀರು ಕುಡಿದು ದಾಹ ತಣಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಇದು ಬೆಂಗಳೂರಿನಲ್ಲಿ ಸೆರೆ ಹಿಡಿದ ವಸತಿ ಪ್ರದೇಶದ ವಿಡಿಯೋವಾಗಿದೆ ಎಂದು 'ಎಕ್ಸ್‌'ನಲ್ಲಿ ಬರೆಯಲಾಗಿದೆ.

ಈ ನಡುವೆ ಹವಾಮಾನ ಇಲಾಖೆ ಮುಂದಿನ ವಾರದಲ್ಲಿ ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ನೀಡಿದೆ. ಇದೇ ವೇಳೆ ಬಯಲು ಸೀಮೆ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ದಕ್ಷಿಣ ಮತ್ತು ಮಧ್ಯ ಭಾರತದ ಹಲವೆಡೆ ಜಲಾಶಯಗಳ ಮಟ್ಟದಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ.

Monkey Enters Kitchen And Drinks Aquaguard Water Video Goes Viral

ಕೇಂದ್ರ ಜಲ ಆಯೋಗದ ವರದಿ ಪ್ರಕಾರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಜಲಾಶಯಗಳ ಸಂಗ್ರಹ ಮಟ್ಟ ಕುಸಿಯುತ್ತಿರುವುದು ಆತಂಕವನ್ನು ಹೆಚ್ಚಿಸುತ್ತಿದೆ.

ಭಾರತದ ದಕ್ಷಿಣ ವಲಯದ CWC ವರದಿಯ ಪ್ರಕಾರ, 42 ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯವು 53.334 BCM (ಬಿಲಿಯನ್ ಕ್ಯೂಬಿಕ್ ಮೀಟರ್) ಆಗಿದೆ. ಆದರೀಗ ಜಲಾಶಯಗಳಲ್ಲಿ ಲಭ್ಯವಿರುವ ನೀರು ಒಟ್ಟು 8.865 BCM ಆಗಿದೆ.

ನೀರಿನ ಮಟ್ಟ ಒಟ್ಟು ಸಾಮರ್ಥ್ಯದ ಶೇ.17ರಷ್ಟು ಮಾತ್ರ ಇದೆ. ಇಂತಹ ಪರಿಸ್ಥಿತಿಯಲ್ಲಿ ವೈರಲ್ ವೀಡಿಯೊ ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ. ಈ ದೃಶ್ಯ ಮುಂದಿನ ಜನಸಾಮಾನ್ಯರ ಸ್ಥಿತಿ ಯಾವ ಮಟ್ಟಕ್ಕಿರುತ್ತದೆ ಎನ್ನುವ ಆತಂಕವನ್ನು ಸೃಷ್ಟಿಸಿದೆ.

ಇದು ವಸತಿ ಪ್ರದೇಶಗಳ ಸ್ಥಿತಿಯಾಗಿದೆ. ಇಲ್ಲಿ ಬಾಯಾರಿದ ಮಂಗ ನೀರನ್ನು ಹುಡುಕುತ್ತಾ ಮನೆಯ ಅಡುಗೆ ಕೋಣೆಗೆ ಪ್ರವೇಶಿಸಿದೆ. ಇದನ್ನು ನೋಡಿದರೆ ಕಾಡಿನ ಪರಿಸ್ಥಿತಿ ಹೇಗಿರಬೇಡ ಎನ್ನುವ ಪ್ರಶ್ನೆ ಕೂಡ ಕಾಡದಿರದು. ಪರಿಸ್ಥಿತಿ ಹೀಗೆ ಮುಂದುವರೆದು ಮಳೆ ಬಾರದೇ ಇದ್ದರೆ ಗಂಭೀರ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+