Life Tips: ನಮ್ಮ ಸಮಸ್ಯೆಗೆ ಪರಿಹಾರ ಚಿಂತೆಯಲ್ಲ..ಚಿಂತನೆ!
ಸೋಲು, ನಿರಾಸೆ, ಕಷ್ಟಗಳಿಲ್ಲದೆ ಜೀವನವೇ ಇಲ್ಲ. ಆದರೂ ಅದನ್ನೆಲ್ಲ ಮೀರಿ ಬದುಕುವುದೇ ನಿಜವಾದ ಜೀವನ... ನಗುವವರೆಲ್ಲ ಸುಖಿಗಳಲ್ಲ... ಕಾರಿನಲ್ಲಿ ಓಡಾಡುವವರು, ಬಂಗಲೆಯಲ್ಲಿ ವಾಸ ಮಾಡುವವರೆಲ್ಲ ಶ್ರೀಮಂತರಲ್ಲ.. ನಿಜವಾದ ಸುಖಿ ಮತ್ತು ಶ್ರೀಮಂತ ಯಾರೆಂದರೆ ಕಷ್ಟದಲ್ಲೂ ನಗುವವನು, ಬಡತನದಲ್ಲೂ ಶ್ರೀಮಂತನಂತೆ ಬದುಕುವವನು.
ನಮಗೆ ಎಲ್ಲವನ್ನೂ ದೇವರು ಕೊಟ್ಟಿರುತ್ತಾನೆ. ಆದರೆ ಅದನ್ನು ಉಪಯೋಗಿಸಿಕೊಂಡು ಬದುಕುವುದನ್ನು ಕಲಿಯದ ಕಾರಣದಿಂದಾಗಿ ನಾವು ಬಡವರಾಗಿದ್ದೇವೆ, ಕಷ್ಟದಲ್ಲಿದ್ದೇವೆ. ಬಹಳಷ್ಟು ಸಾರಿ ನಮ್ಮ ವಿವೇಚನಾರಹಿತ ನಡವಳಿಕೆ ಕಷ್ಟಕ್ಕೆ ದೂಡುತ್ತದೆ. ಇನ್ನು ಬೇಕೆಂಬ ದುರಾಸೆ ಅಡ್ಡದಾರಿ ಹಿಡಿಯುವಂತೆ ಮಾಡುತ್ತದೆ. ಬೇರೆಯವರ ಮೇಲಿನ ಹೊಟ್ಟೆಕಿಚ್ಚು ನಮ್ಮನ್ನು ಸುಡುತ್ತದೆ.

ಕಷ್ಟಗಳು ಬಂದಾಗ ಬದುಕೇ ಮುಗಿದು ಹೋಯಿತೆಂಬ ಹತಾಶೆ ನಮ್ಮನ್ನು ಕಾಡತೊಡಗುತ್ತದೆ. ಈ ವೇಳೆ ಮುಂದೆ ಬದುಕೇ ಸಾಧ್ಯವಿಲ್ಲವೇನೋ ಎಂಬ ಭಾವವೂ ಕಾಡಿಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ಎದೆಗುಂದದೆ ಏನೇ ಆಗಲಿ ಎದುರಿಸುತ್ತೇನೆ ಎಂಬ ಧೈರ್ಯವನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳಬೇಕು. ಬದುಕಿನಲ್ಲಿ ಕೆಲವೊಂದು ಕಷ್ಟಗಳು ಸಮಸ್ಯೆಗಳು ಎದುರಾಗುತ್ತವೆ. ಅವು ಸಾಮಾನ್ಯವೇ.. ಮತ್ತು ಅದಕ್ಕೆ ಪರಿಹಾರವೂ ಇರುತ್ತದೆ. ಆದ್ದರಿಂದ ತಲೆಕೆಡಿಸಿಕೊಂಡು ಓಡಾಡುವ ಅಗತ್ಯವೇ ಇರುವುದಿಲ್ಲ.
ಚಿಂತೆಯನ್ನು ಬದಿಗೊತ್ತಿ ಬದುಕಬೇಕು
ಹೆಚ್ಚಿನವರು ಕಷ್ಟಗಳು ಬಂದಾಗ, ಸಮಸ್ಯೆಗೆ ಸಿಲುಕಿದಾಗ ಚಿಂತೆ ಮಾಡಲು ಆರಂಭಿಸುತ್ತಾರೆ. ಇಲ್ಲಸಲ್ಲದ ಕಲ್ಪನೆಗಳನ್ನು ಮಾಡಿಕೊಂಡು ಕೊರಗುತ್ತಾ ಕುಳಿತು ಬಿಡುತ್ತಾರೆ. ಇದು ನಿಜವಾಗಿಯೂ ಮಾರಕ. ತಿಳಿದವರು ಹೇಳುವಂತೆ ಚಿಂತೆ ಎನ್ನುವುದು ಮನುಷ್ಯನನ್ನು ಚಿತೆಗೇರಿಸುವ ತನಕವೂ ಬಿಡುವುದಿಲ್ಲವಂತೆ. ಹೀಗಾಗಿ ಚಿಂತೆಯನ್ನು ಬದಿಗೊತ್ತಿ ಬದುಕುವುದನ್ನು ಕಲಿಯಬೇಕು. ನಮಗೆ ನಿಮಗೆ ಎಲ್ಲರಿಗೂ ಗೊತ್ತಿರುವಂತೆ ತಲೆಮೇಲೆ ಕೈಹೊತ್ತು ಚಿಂತೆ ಮಾಡುತ್ತಾ ಕುಳಿತರೆ ಅದರಿಂದ ಯಾವ ಪರಿಹಾರ ಸಿಗಲಾರದು ಬದಲಿಗೆ ಚಿಂತನೆ ಮಾಡಬೇಕು ಅದರಿಂದ ಏನಾದರೊಂದು ಪರಿಹಾರ ಖಂಡಿತಾ ದೊರೆಯುತ್ತದೆ.

ಕಷ್ಟದಲ್ಲಿದ್ದಾಗ ಎದೆಗುಂದದೆ ಧೈರ್ಯವಾಗಿ ಎದುರಿಸುವುದನ್ನು ಕಲಿಯಬೇಕು, ನಿರಾಸಭಾವ ಸುಳಿಯದಂತೆ ನೋಡಿಕೊಳ್ಳಬೇಕು, ಅದಕ್ಕಿಂತ ಹೆಚ್ಚಾಗಿ ಛಲವಿರಬೇಕು. ಒಂದು ಪರೀಕ್ಷೆಯಲ್ಲಿ ಫೇಲಾದರೇನಂತೆ ಮತ್ತೊಂದು ಬರೆಯುತ್ತೇನೆಂಬ ಹಠ, ಕೆಲಸ ಕಳೆದು ಹೋದರೇನಂತೆ ಮತ್ತೊಂದು ಹುಡುಕುತ್ತೇನೆ ಎಂಬ ವಿಶ್ವಾಸ ಇದಿಷ್ಟನ್ನು ಬೆಳೆಸಿಕೊಂಡರೆ ಬದುಕು ಕಷ್ಟವಾಗಲಾರದು. ಇವತ್ತು ಕಷ್ಟವಿರಬಹುದು ನಾಳೆ ಸುಖ ಬಂದೇ ಬರುತ್ತೆ ಎಂಬ ನಂಬಿಕೆ ಮತ್ತು ಎಂಥ ಕಷ್ಟ ಬಂದರೂ ಅದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೊಳೆಯ ಬೇಕು. ಅನೇಕ ಬಾರಿ ಆಗೋದೆಲ್ಲ ಒಳ್ಳೆಯದಕ್ಕೆ ಎಂಬ ಮಾತು ಮುಂದೆ ಸಾಗಲು ಅನುಕೂಲ ಮಾಡಿಕೊಡುತ್ತದೆ.
ಸ್ವಾಮಿ ವೀರಾಜನಂದರು ಹೇಳುವುದೇನು?
ಇಷ್ಟಕ್ಕೂ ಮನುಷ್ಯನಾಗಿ ಹುಟ್ಟಿದ ಮೇಲೆ ನಾವೆಲ್ಲರೂ ಎಲ್ಲವನ್ನು ಪಡೆದುಕೊಳ್ಳೋಕೆ ಸಾಧ್ಯವಿಲ್ಲ. ಒಂದು ಪಡೆಯಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಬೇಕು. ಒಂದು ಕ್ಷಣ ಯೋಚಿಸಿ ನೋಡಿದರೆ ನಮ್ಮ ಬದುಕಿನಲ್ಲಿ ನಾವು ಪಡೆದುದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿಯಾಗಿರುತ್ತದೆ. ಒಂದಲ್ಲ ಒಂದು ದಿನ ನಾವೇ ಕಳೆದು ಹೋಗುವುದರಿಂದ ಕಳೆದು ಹೋಗಿದ್ದಕ್ಕೆ ಚಿಂತಿಸದೆ ಪಡೆಯುವುದರ ಬಗ್ಗೆ ಚಿಂತನೆ ಮಾಡುವುದು ನಮ್ಮ ನೋವಿಗೆ ನಾವೇ ಹಚ್ಚಿಕೊಳ್ಳುವ ಮುಲಾಮು ಆಗಿರುತ್ತದೆ.

ಸ್ವಾಮಿ ವೀರಾಜನಂದ ಅವರು ಹೇಳುತ್ತಾರೆ ಸೋತ ತಕ್ಷಣ ನಾವು ಅತ್ಯಂತ ಕುಗ್ಗಿದ ಸ್ಥಿತಿಯಲ್ಲಿರುತ್ತೇವೆ. ಆಗ ನಮ್ಮ ಭಾವನೆ, ಶಕ್ತಿ, ಸಾಮರ್ಥ್ಯ ಎಲ್ಲವೂ ಸಕರಾತ್ಮಕವಾಗಿರದೆ ನಕರಾತ್ಮಕವಾಗಿರುತ್ತದೆ. ಇದನ್ನು ಹೋಗಲಾಡಿಸಿ ಮುನ್ನಡೆಯ ಬೇಕಾದರೆ ನಮ್ಮ ಸಮಸ್ತ ಶಕ್ತಿಯನ್ನು ಬಳಸಿ ನಿರಾಶೆಯನ್ನು ಹೊಡೆದೋಡಿಸಬೇಕು. ನಾನು ದಿವ್ಯ ಸ್ವರೂಪನಾದವನು. ನಾನು ಬ್ರಹ್ಮನು ಒಂದೇ. ಯಾವ ದುಃಖವೂ ನನ್ನನ್ನು ತಟ್ಟಲಾರದು.
ಸೋಲಿಗೆ ಕುಗ್ಗುವುದು ಮಾನವ ಲಕ್ಷಣವಲ್ಲ
ನಾನು ನಿತ್ಯ ಮುಕ್ತ ಅನಂತ ಅಮೃತ ಹೀಗೆಂದು ಕೊಳ್ಳುತ್ತಾ ದೃಢನಿಷ್ಠೆಯಿಂದ ಕಾರ್ಯ ಆರಂಭಿಸಬೇಕು. ಆಗ ನಮ್ಮನ್ನು ಆವರಿಸಿದ ನಿರಾಶೆ ಸದ್ದಿಲ್ಲದೆ ದೂರ ಸರಿಯುತ್ತದೆ. ನಮ್ಮ ಮನಸ್ಸಿನಿಂದ ಯಾವಾಗ ನಿರಾಶೆ ನಮ್ಮಿಂದ ದೂರವಾಗಿ ಆಸಕ್ತಿ ಹುಟ್ಟುತ್ತದೆಯೋ ಆಗ ನಾವು ಮಾಡಬೇಕಿರುವ ಕೆಲಸಗಳಿಗೆ ವೇಗ ಸಿಗುತ್ತದೆ.
ಯಾವ ಸೋಲು ನಮ್ಮನ್ನು ಕಾಡಿತ್ತೋ ಅದೇ ಸೋಲು ನಮ್ಮಿಂದ ಕಳಚಿಕೊಂಡು ಗೆಲುವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ. ಒಬ್ಬ ವ್ಯಕ್ತಿ ಒಂದೆರಡು ಬಾರಿ ಸೋಲಬಹುದು ಆದರೆ ಪ್ರತಿ ಬಾರಿಯೂ ಸೋಲುವುದಿಲ್ಲ. ಸೋತ ತಕ್ಷಣ ನಿರಾಶರಾಗುವುದರಿಂದಲೇ ನಮಗೆ ಗೆಲುವು ಮರೀಚಿಕೆಯಾಗುತ್ತದೆ. ಮೊದಲ ಸೋಲಿಗೆ ನಾವು ಬೆಚ್ಚಿ ಬಿದ್ದಿರುತ್ತೇವೆ.
ನಮ್ಮ ಮನಸ್ಸನ್ನು ಹೊಕ್ಕಿದ ನಿರಾಶೆ ಮತ್ತೆ ಅದೇ ಮಾರ್ಗದಲ್ಲಿ ಮುಂದುವರೆಯಲು ಬಿಡುವುದಿಲ್ಲ. ಹೀಗಾಗಿ ನಾವು ಮತ್ತೆ ಅದರಲ್ಲಿ ಮುಂದುವರೆಯುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಪ್ರಯತ್ನವೇ ಮಾಡದಿದ್ದ ಮೇಲೆ ಸೋಲನ್ನು ಗೆಲ್ಲುವುದಾದರೂ ಹೇಗೆ? ಸೋಲಿಗೆ ಕುಗ್ಗುವುದು ಮಾನವ ಲಕ್ಷಣವಲ್ಲ. ಏಕೆಂದರೆ ಕುಗ್ಗುವುದು, ಹಿಗ್ಗುವುದು ಬದುಕಿನಲ್ಲಿ ಇದ್ದೇ ಇದೆ.
ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ
ನಮಗೆ ಹಿಗ್ಗಿ ಅಭ್ಯಾಸ ಇರುವುದರಿಂದ ಕುಗ್ಗುವುದು ಕಷ್ಟವಾಗುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಧೈರ್ಯವಾಗಿ ಬದುಕುವುದು ಅಗತ್ಯ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ. ಅದು ಕೆಲವೊಮ್ಮೆ ಕಷ್ಟವಾಗಿ ಕಾಣಬಹುದು. ಆದರೆ ಅದಕ್ಕೆ ಹೆದರಿ ನಮ್ಮ ಅಮೂಲ್ಯ ಬದುಕಿಗೆ ಸಂಚಕಾರ ತಂದುಕೊಳ್ಳುವುದು ಮಾತ್ರ ಒಳ್ಳೆಯ ತೀರ್ಮಾನವಲ್ಲ. ಸ್ವಾಮಿ ವೀರಾಜನಂದರು ಹೇಳುವಂತೆ ನಿರಾಶೆ ಮನಸ್ಸಿನಲ್ಲಿ ಬೇರೂರದಂತೆ ನೋಡಿಕೊಳ್ಳಿ ಅದನ್ನು ಕಿತ್ತು ಬಿಸಾಡುವ ಸಾಮರ್ಥ್ಯ ಬೆಳೆಸಿಕೊಳ್ಳಿ.
ನಮ್ಮನ್ನು ನೋಯಿಸುವ, ಅಪಮಾನಿಸುವ ಸೋಲನ್ನು ಅನುಭವಿಸುವ ಸಂದರ್ಭ ಬಂದಾಗ ನಾವು ಎದುರಿಸಲಾರೆವು ಎಂಬ ಮನಸ್ಸಿನ ತುಮುಲಗಳು ನಮ್ಮನ್ನು ಆವರಿಸಿದಾಗ ನಾವು ನಮ್ಮ ಮನಸ್ಸಿನಿಂದಾಚೆ ಒಬ್ಬ ಪ್ರೇಕ್ಷಕನಂತೆ ನಿಂತು ನೋಡುವುದನ್ನು ರೂಢಿಸಿಕೊಳ್ಳಬೇಕು. ಆಗ ಇಲ್ಲಿ ನಾನು ಏನೂ ಅಲ್ಲ ಎಂಬುವುದು ಗೊತ್ತಾಗುತ್ತದೆ. ಬದುಕಿನ ಹಾದಿಯೂ ಸುಗಮವಾಗುತ್ತದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications