47 ಕೋಟಿ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ ಜಿಯೋ: ಅಗ್ಗದ 5ಜಿ ಡೇಟಾ ಪ್ಲ್ಯಾನ್ ರಿಲೀಸ್
ರಿಲಯನ್ಸ್ ಕಂಪನಿಯ ಜಿಯೋ ತನ್ನ 47 ಕೋಟಿ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಮೆಗಾ ಪ್ಲ್ಯಾನ್ ಮಾಡಿದೆ. ಅಲ್ಲದೆ, ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಅಗ್ಗದ ರಿಚಾರ್ಜ್ ಬಿಡುಗಡೆ ಮಾಡಿದೆ. ತನ್ನ ವಿರೋಧಿಗಳಿಗೆ ಜಿಯೋ ಈಗಾಗಲೇ ನಡುಕ ಹುಟ್ಟಿಸಿದೆ.
ಜಿಯೋ ಕಂಪನಿ ಕಳೆದ ತಿಂಗಳು ರಿಚಾರ್ಜ್ ಬೆಲೆಯನ್ನು ಏರಿಕೆ ಮಾಡಿತ್ತು. ಇದರಿಂದ ಬಳೆದಾರ ಅಗ್ಗದ ರಿಚಾರ್ಜ್ ಟೆಲಿಕಾಂ ಕಂಪನಿಗಳತ್ತ ಮುಖ ಮಾಡಿದ್ದವು. ಇದನ್ನು ಅರಿತು ಜಿಯೋ ಈಗ ಅಗ್ಗದ ಬೆಲೆಯಲ್ಲಿ 2ಜಿ ಡೇಟಾವನ್ನು ನೀಡಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ತನ್ನ ಗ್ರಾಹಕರ ಅನುಕೂಲಕ್ಕಾಗಿ, ಜಿಯೋ ರೀಚಾರ್ಜ್ ಯೋಜನೆಗಳ ಪೋರ್ಟ್‌ಫೋಲಿಯೊವನ್ನು ಹಲವು ವರ್ಗಗಳಾಗಿ ವಿಂಗಡಿಸಿದೆ.

ಗ್ರಾಹಕರನ್ನು ಸೆಳೆಯಲು ಮೆಗಾ ಪ್ಲ್ಯಾನ್
ಜಿಯೋ ಈಗ ಗ್ರಾಹಕರಿಗೆ ಕಡಿಮೆ ಹಾಗೂ ದುಬಾರಿಯ ಬೆಲೆಯ ರಿಚಾರ್ಜ್ ಆಯ್ಕೆಯನ್ನು ನೀಡುತ್ತಿದೆ. ಜಿಯೋ ಬಿಡುಗಡೆ ಮಾಡಿದ ರಿಚಾರ್ಜ್ ಪಟ್ಟಿಯಲ್ಲಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಯೋಜನೆಗಳು ಲಭ್ಯವಿದೆ. ನಿಮ್ಮ ಅಗತ್ಯತೆ ಮತ್ತು ಬಜೆಟ್‌ಗೆ ಅನುಗುಣವಾಗಿ ನೀವು ರಿಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಬಹುದು.
349 ರೂಪಾಯಿ ರಿಚಾರ್ಜ್‌ನಲ್ಲಿ ಏನೆಲ್ಲಾ ಲಭ್ಯ?
ಜಿಯೋ 349 ರೂಪಾಯಿಗಳ ಭರ್ಜರಿ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಜಿಯೋ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು 28 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಇದು ಉತ್ತಮ ಅಲ್ಪಾವಧಿಯ ರೀಚಾರ್ಜ್ ಯೋಜನೆ. ವಿಶೇಷವಾಗಿ ಹೆಚ್ಚಿನ ಡೇಟಾವನ್ನು ಬಳಸುವ ಬಳಕೆದಾರರಿಗೆ ಈ ಯೋಜನೆಯು ಅತ್ಯಂತ ಕೈಗೆಟುಕುವ ಬೆಲೆಯಾಗಿದೆ. ಈ ಪ್ಲ್ಯಾನ್ ರಿಚಾರ್ಜ್ ಮಾಡಿಸಿಕೊಂಡಲ್ಲಿ ಗ್ರಾಹಕ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ.
2ಜಿಬಿ ಡೇಟಾ
ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಬಳಕೆದಾರ 28 ದಿನಗಳಿಗೆ 56 ಜಿಬಿ ಡೇಟಾವನ್ನು ಪಡೆಯುತ್ತಾರೆ. ಅಂದರೆ ಗ್ರಾಹಕ ಪ್ರತಿ ದಿನ 2 ಜಿಬಿ ಡೇಟಾವನ್ನು ಬಳಸಬಹುದಾಗಿದೆ. ಜಿಯೋ ಪ್ರತಿ 2ಜಿಬಿ ಗಿಂತ ಹೆಚ್ಚಿನ ಡೇಟಾ ಪ್ಯಾಕ್ ಹೊಂದಿರುವ ಗ್ರಾಹಕರಿಗೆ ಉಚಿತವಾಗಿ 5ಜಿ ಸೇವೆಗಳನ್ನು ನೀಡುತ್ತಿದೆ. ಒಂದು ವೇಳೆ ನಿಮ್ಮ ಪ್ರದೇಶದಲ್ಲಿ 5ಜಿ ಡೇಟಾ ಲಭ್ಯ ಇದ್ದಲ್ಲಿ ನೀವು ಅನಿಯಮಿತ 5ಜಿ ಸೇವೆಗಳ ಆನಂದವನ್ನು ಪಡೆಯಬಹುದಾಗಿದೆ.
ಈ ರೀಚಾರ್ಜ್ ಯೋಜನೆಯು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ. ನೀವು OTT ಸ್ಟ್ರೀಮಿಂಗ್ ಮಾಡಿದರೆ ಈ ಯೋಜನೆಯೊಂದಿಗೆ ನೀವು Jio ಸಿನಿಮಾದ ಉಚಿತ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಇದರೊಂದಿಗೆ, ನೀವು ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಉಚಿತವಾಗಿ ವೀಕ್ಷಿಸಬಹುದಾಗುದೆ. ಹೀಗಾಗಿ ಗ್ರಾಹಕರ ನೆಚ್ಚಿನ ಪ್ಲ್ಯಾನ್‌ಗಳಲ್ಲಿ ಇದೊಂದು ಆಗುವುದರಲ್ಲಿ ಯಾವುದೇ ಡೌಟ್ ಇಲ್ಲವೇ ಇಲ್ಲ.












Click it and Unblock the Notifications