ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಗುಡ್ಡೇಮನೆ ಅಪ್ಪಯ್ಯ ಗೌಡ: ಇಲ್ಲಿದೆ ವಿಶೇಷ ಮಾಹಿತಿ
ಮಡಿಕೇರಿ, ಆಗಸ್ಟ್ 14: ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಇಡೀ ದೇಶದ ಮೂಲೆ ಮೂಲೆಗಳಿಂದಲೂ ಜನ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಕೆಲವು ದಾಖಲೆಯಾಗಿ ಉಳಿದಿದ್ದರೆ ಮತ್ತೆ ಕೆಲವು ದಾಖಲೆಯಿಂದ ಅಳಿಸಿಹೋಗಿದೆ. ಆದರೆ ಎಲ್ಲರಲ್ಲೂ ಸ್ವಾತಂತ್ರ್ಯದ ಕಿಚ್ಚಂತು ಇತ್ತೇ ಇತ್ತು ಎನ್ನುವುದನ್ನು ತಳ್ಳಿಹಾಕಲಾಗದು. ಇದೆಲ್ಲದರ ನಡುವೆ ಅವತ್ತಿಗೂ ಬೆರಳೆಣಿಯಷ್ಟು ಮಂದಿ ಬ್ರಿಟೀಷರ ಓಲೈಕೆಯಲ್ಲಿದ್ದರು ಎನ್ನುವುದನ್ನು ತಳ್ಳಿಹಾಕಲಾಗದು. ಆದರೂ ಸ್ವಾತಂತ್ರ್ಯದ ಕಿಚ್ಚಿಗೆ ಅಂತಹ ಯಾವ ಶಕ್ತಿಯೂ ಉಳಿಯಲಾಗಲಿಲ್ಲ ಹೀಗಾಗಿಯೇ ಬ್ರಿಟೀಷರು ಭಾರತವನ್ನು ಬಿಟ್ಟುಹೋಗಬೇಕಾಯಿತು.
ಇನ್ನು ಸ್ವಾತಂತ್ರ್ಯ ಹೋರಾಟಕ್ಕೆ ಪ್ರತಿ ಜಿಲ್ಲೆ, ಗ್ರಾಮಗಳಿಂದಲೂ ಜನ ತಮ್ಮದೇ ಕೊಡುಗೆ ನೀಡಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ಮಹಾನ್ ನಾಯಕರ ತನಕ ಎಲ್ಲರೂ ಹೋರಾಟ ಮಾಡಿದ್ದಾರೆ, ಬ್ರಿಟೀಷರ ಬೂಟಿನೇಟು ತಿಂದಿದ್ದಾರೆ. ಜತೆಗೆ ಕೆಲವರು ಪ್ರಾಣಾರ್ಪಣೆಯನ್ನು ಮಾಡಿದ್ದಾರೆ. ಅವತ್ತಿನ ಕಾಲದಲ್ಲಿಯೇ ಕೊಡಗಿನಲ್ಲಿ ಬ್ರಿಟೀಷರ ವಿರುದ್ಧ ಹೋರಾಟಗಳು ನಡೆದಿವೆ. ಇಲ್ಲಿ ಬ್ರಿಟೀಷರ ಪ್ರಭಾವವಿತ್ತಾದರೂ ಅದೆಲ್ಲವನ್ನು ಮೀರಿಯೂ ಅವರ ವಿರುದ್ಧ ಹೋರಾಟದ ಕಿಚ್ಚನ್ನು ಹಚ್ಚಿದ ದೊಡ್ಡ ನಾಯಕರಿದ್ದಾರೆ.

ಕೊಡಗಿನ ಜನ ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆದರೆ ಮಾಹಿತಿಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ನಡೆದಂತಹ ಸ್ವಾತಂತ್ರದ ಹೋರಾಟಗಳು ಜನರನ್ನು ತಲುಪಲಿಲ್ಲ. ಜತೆಗೆ ದಾಖಲಾಗಿ ಉಳಿಯಲು ಸಾಧ್ಯವಾಗಲಿಲ್ಲ. ಆದರೂ ಗುಡ್ಡೆಮನೆ ಅಪ್ಪಯ್ಯ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದು ಇತಿಹಾಸದ ಪುಟಗಳಲ್ಲಿ ಅಚ್ಚಾಗಿದೆ.
ಕೆಲವು ಶತಮಾನಗಳ ಹಿಂದೆ ಕೊಡಗು ಪ್ರಾಂತ್ಯಕ್ಕೆ ಇವತ್ತಿನ ದಕ್ಷಿಣ ಕನ್ನಡದ ಸುಳ್ಯ ತಾಲೂಕು ಸೇರ್ಪಡೆಯಾಗಿತ್ತು. ಅವತ್ತಿನ ಕಾಲದಲ್ಲಿ ಅಂದರೆ ಸಿಪಾಯಿದಂಗೆಗೆ ಮುನ್ನವೇ ಕೊಡಗು ಪ್ರಾಂತ್ಯದಲ್ಲಿ ಇವತ್ತಿನ ಸುಳ್ಯದಲ್ಲಿ 1837ರಲ್ಲಿ ಜನ ಬ್ರಿಟೀಷರ ವಿರುದ್ಧ ತಿರುಗಿ ಬಿದ್ದಿದ್ದರು ಎನ್ನುವುದು ಅಚ್ಚರಿಯಾದರೂ ಅದು ಇತಿಹಾಸದ ಕಾಲಗರ್ಭದಲ್ಲಿ ಹುದುಗಿದ ಸತ್ಯವಾಗಿದೆ. ಇವತ್ತಿಗೂ ಇದನ್ನು ಅಮರ ಸುಳ್ಯ ದಂಗೆ ಎಂದೇ ಹೇಳಲಾಗುತ್ತಿದೆ.
ಗುಡ್ಡೆಮನೆ ಅಪ್ಪಯ್ಯಗೌಡರು ಮುಂಚೂಣಿಯಲ್ಲಿ
ಈ ದಂಗೆಯ ಬಗ್ಗೆ ಮಾತನಾಡುವಾಗ ಸ್ವಾತಂತ್ರ್ಯವೀರ ಗುಡ್ಡೆಮನೆ ಅಪ್ಪಯ್ಯಗೌಡರ ಹೆಸರು ಮುಂಚೂಣಿಗೆ ಬರುತ್ತದೆ. ಅವರ ಸ್ವಾತಂತ್ರ್ಯ ಹೋರಾಟದ ಕಥೆಯೂ ರೋಚಕವಾಗಿಯೇ ಇದೆ. ಹೀಗಾಗಿಯೇ ಅವರನ್ನು ಸದಾ ನೆನಪಿಸುವ ಸಲುವಾಗಿ ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇನ್ನು ಕೊಡಗಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಕಥೆಗಳು ರೋಚಕವಾಗಿವೆ. ಮತ್ತು ಅವು ಕೊಡಗಿನ ರಾಜರ ಕಾಲಕ್ಕೆ ಕರೆದೊಯ್ಯುತ್ತದೆ.

1700ನೇ ಇಸವಿಯಲ್ಲಿ ಇಕ್ಕೇರಿ ರಾಜ ಸೋಮಶೇಖರ ಈಗಿನ ದಕ್ಷಿಣ ಕನ್ನಡದ ಸುಳ್ಯ ಭಾಗವನ್ನು ಕೊಡಗನ್ನು ಆಳುತ್ತಿದ್ದ ದೊಡ್ಡವೀರ ರಾಜೇಂದ್ರನಿಗೆ ಬಹುಮಾನವಾಗಿ ಕೊಡುತ್ತಾನೆ. ಕಾಲಾಂತರದಲ್ಲಿ ಚಿಕ್ಕವೀರ ರಾಜೇಂದ್ರ ಪಟ್ಟಕ್ಕೆ ಬರುತ್ತಾನೆ. 1834 ಏಪ್ರಿಲ್ 10ಕ್ಕೆ ಬ್ರಿಟಿಷರು ಚಿಕ್ಕವೀರ ರಾಜೇಂದ್ರಂಗೆ ಮೋಸ ಮಾಡಿ ಕೊಡಗನ್ನು ತಮ್ಮ ಕೈ ವಶ ಮಾಡಿಕೊಳ್ಳುತ್ತಾರೆ.
ಆಗ ಆಡಳಿತಕ್ಕೆ ಅನುಕೂಲ ಆಗುವಂತೆ ಸುಳ್ಯ ಮತ್ತು ಪುತ್ತೂರನ್ನು ಮಂಗಳೂರು ವಿಭಾಗಕ್ಕೆ ಬ್ರಿಟೀಷರು ಸೇರಿಸಿಕೊಳ್ಳುತ್ತಾರೆ.ಇದನ್ನು ವಿರೋಧಿಸಿ ಬ್ರಿಟೀಷರ ವಿರುದ್ಧ ಜನ ದಂಗೆ ಏಳುತ್ತಾರೆ. ಈ ದಂಗೆಯ ನೇತೃತ್ವವನ್ನು ಗುಡ್ಡೇಮನೆ ಅಪ್ಪಯ್ಯ ಗೌಡರು ವಹಿಸಿಕೊಂಡಿದ್ದರು. ಈ ಸಂದರ್ಭದ ಹೋರಾಟ ಬ್ರಿಟೀಷರಿಗೆ ಬೆವರಿಳಿಸಿತ್ತು. ಅವತ್ತು ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಕೆದಂಬಾಡಿ ರಾಮಯ್ಯ ಗೌಡ, ವೀರಣ್ಣಬಂಟ, ಸುಬ್ರಾಯ ಹೆಗ್ಡೆ ಮತ್ತು ಗುಡ್ಡೇಮನೆ ಗೌಡರು ಕೊಡಗಿನಲ್ಲಿದ್ದ ಎಲ್ಲ ಜಾತಿ ಜನಾಂಗದ ಜನರನ್ನು ಒಂದೆಡೆ ಸೇರಿಸಿ ತಂಡ ರಚಿಸಿ ಹೋರಾಟ ನಡೆಸಿದ್ದರು. ಅವತ್ತಿನ ಮಟ್ಟಿಗೆ ಪುತ್ತೂರನ್ನು ಮಂಗಳೂರಿಗೂ, ಸುಳ್ಯವನ್ನು ಕೊಡಗಿಗೆ ಸೇರಿಸುವುದು ಅವರ ಉದ್ದೇಶವಾಗಿತ್ತು.
ಅಪ್ಪಯ್ಯಗೌಡರನ್ನು ಗಲ್ಲಿಗೇರಿಸಿದ ಬ್ರಿಟೀಷರು
ದೊಡ್ಡದೊಂದು ಪಡೆಯನ್ನು ಕಟ್ಟಿದ ಗುಡ್ಡೇಮನೆ ಅಪ್ಪಯ್ಯ ಗೌಡರು ತೊಡಿಕಾನ ಮೂಲಕ ದಕ್ಷಿಣ ಕನ್ನಡವನ್ನು ಪ್ರವೇಶ ಮಾಡಿ 1837ರ ಏಪ್ರಿಲ್ 3ಕ್ಕೆ ಪುತ್ತೂರು, 4ಕ್ಕೆ ಪಾಣೆಮಂಗಳೂರು ಮೂಲಕ ತೆರಳಿ ಏಪ್ರಿಲ್ 6ಕ್ಕೆ ಮಂಗಳೂರನ್ನು ವಶಪಡಿಸಿಕೊಂಡು ಅಲ್ಲಿನ ಗುಡ್ಡದ ಮೇಲೆ ಕೊಡಗಿನ ಕಲ್ಯಾಣಪ್ಪನ ಧ್ವಜ ಹಾರಿಸಿದ್ದರು. ಆದರೆ ಬ್ರಿಟೀಷರು ಮತ್ತೆ ಗೆಲ್ಲಲು ಬೇಕಾದ ಸೇನೆಯನ್ನು ಕೇರಳದ ಕಣ್ಣಾನೂರಿನಿಂದ ಕರೆಯಿಸಿಕೊಂಡು ಏಪ್ರಿಲ್ 16ಕ್ಕೆ ಯುದ್ದಸಾರಿದರು. ಈ ವೇಳೆ ಅವರ ಬಳಿ ದೊಡ್ಡ ಸೈನ್ಯ ಇದ್ದುದರಿಂದ ಅಪ್ಪಯ್ಯಗೌಡರ ತಂಡದ ಸದಸ್ಯರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಬಳಿಕ ಮೋಸದಿಂದ ಗುಡ್ಡೇಮನೆ ಅಪ್ಪಯ್ಯ ಗೌಡರನ್ನು ಬಂಧಿಸಿದ ಬ್ರಿಟೀಷರು ಅವರನ್ನು ಮಡಿಕೇರಿಗೆ ಕರೆದುಕೊಂಡು ಬಂದರು.
ಅವತ್ತು ಅಕ್ಟೋಬರ್ 31, 1837ರ ದಿನ ಮಡಿಕೇರಿಗೆ ಅಪ್ಪಯ್ಯಗೌಡರನ್ನು ಕರೆತಂದ ಬ್ರಿಟೀಷರು ಮಡಿಕೇರಿ ಕೋಟೆಯೊಳಗಿನ ಅರಮನೆ ಮುಂಭಾಗದಲ್ಲಿ ಅವರನ್ನು ಸಾರ್ವಜನಿಕವಾಗಿ ಬೆಳಗ್ಗೆ 10 ಗಂಟೆಗೆ ಗಲ್ಲಿಗೇರಿಸುತ್ತಾರೆ. ಆ ಮೂಲಕ ಮುಂದೆ ಯಾರಾದರೂ ದಂಗೆ ಎದ್ದರೆ ಇದೇ ಗತಿಯಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಾರೆ. ಆದರೆ ಕಾಲಾಂತರದಲ್ಲಿ ಬ್ರಿಟೀಷರ ವಿರುದ್ಧ ಹೋರಾಟಗಳಾದಾಗ ಕೊಡಗಿನ ಹಲವರು ಹೋರಾಟಕ್ಕಿಳಿದಿದ್ದು ವಿಶೇಷವಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಹಲವರು ಗಾಂಧೀಜಿಯ ಅನುಯಾಯಿಗಳಾಗಿ ಹೋರಾಟ ನಡೆಸಿದ್ದು ಇತಿಹಾಸದಲ್ಲಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications