Infidelity in Marriage: ವ್ಯಕ್ತಿಗಳೇಕೆ ಮದುವೆಯಾಚೆಗಿನ ಸಂಬಂಧಕ್ಕೆ ಕೈಚಾಚುತ್ತಾರೆ? ದಾಂಪತ್ಯ ದ್ರೋಹ ಎಷ್ಟು ಅಪಾಯಕಾರಿ?
Infidelity in Marriage: ವೈವಾಹಿಕ ಜೀವನದಲ್ಲಿ ದಾಂಪತ್ಯ ದ್ರೋಹವು ಒಂದು ಸಂಕೀರ್ಣ ಸಮಸ್ಯೆಯಾಗಿದೆ. ವೈಯಕ್ತಿಕ ಅಸಮಾಧಾನದಿಂದ ಹಿಡಿದು ಆಳವಾದ ಮಾನಸಿಕ ಸಮಸ್ಯೆಗಳವರೆಗೆ ವಿವಿಧ ಅಂಶಗಳಿಂದ ಇದು ಉಂಟಾಗುತ್ತದೆ. ಭಾವನಾತ್ಮಕ ಹಾಗೂ ದೈಹಿಕ ಸಮಸ್ಯೆಗಳಿಂದ ದಾಂಪತ್ಯ ದ್ರೋಹವು ಉದ್ಬವಿಸುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ವೈವಾಹಿಕ ಬದುಕಿನ ಹೊರಗೆ ತೃಪ್ತಿಯನ್ನು ಪಡೆಯಲು ಇದು ಪ್ರೇರೇಪಿಸುತ್ತದೆ. ಈಡೇರದ ನಿರೀಕ್ಷೆಗಳು ಅಥವಾ ಅನ್ಯೋನ್ಯತೆಯ ಕೊರತೆಯಂತಹ ಸಮಸ್ಯೆಗಳೇ ದಾಂಪತ್ಯ ದ್ರೋಹಕ್ಕೆ ಮುನ್ನಡಿಯಾಗಿದೆ ಎಂಬುದು ಮನೋವೈದ್ಯರ ಅಭಿಪ್ರಾಯವಾಗಿದೆ.
ಇದಲ್ಲದೆ ಬಾಹ್ಯ ಆಕರ್ಷಣೆಗಳೂ ಸಹ ವ್ಯಕ್ತಿಗಳನ್ನು ದಾಂಪತ್ಯ ದ್ರೋಹದ ಕಡೆಗೆ ಕರೆದೊಯ್ಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾಜಿಕ ಮಾಧ್ಯಮ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಪ್ರವೇಶವು ವ್ಯಕ್ತಿಗಳಿಗೆ ಹೊಸ ಸಂಪರ್ಕಗಳನ್ನು ಕಲ್ಪಿಸಿಕೊಡುತ್ತಿವೆ. ಇದು ಭಾವನಾತ್ಮಕ ವಿನಿಮಯಗಳಿಂದ ಹಿಡಿದು ದೈಹಿಕ ಬಯಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಿಲ್ಲಿ ಕೆಲಸ ಮಾಡುತ್ತದೆ. ಕೆಲಸದ ಒತ್ತಡ ಹಾಗೂ ಆರ್ಥಿಕ ಒತ್ತಡ ಸಹ ಪತಿ ಪತ್ನಿ ನಡುವೆ ಬಿರುಕುಗಳನ್ನು ಉಂಟುಮಾಡಬಹುದು ಎಂಬ ಮಾತುಗಳನ್ನು ವೈದ್ಯರು ಹೇಳುತ್ತಾರೆ.

ವ್ಯಕ್ತಿಗಳು ಏಕೆ ಮೋಸ ಮಾಡುತ್ತಾರೆ?
ಅತಿಯಾದ ದೈಹಿಕ ಬಯಕೆ ಅಥವಾ ಅಪಾಯಕಾರಿ ಲೈಂಗಿಕ ನಡವಳಿಕೆಗಳಲ್ಲಿ ತೊಡಗಿಸಿಕೊಳ್ಳುವ ಆಸೆಗಳು ವ್ಯಕ್ತಿಯನ್ನು ದಾಂಪತ್ಯ ದ್ರೋಹದ ಕಡೆಗೆ ಕೊಂಡೊಯ್ಯಬಹುದು ಎಂದು ಅಧ್ಯಯನ ಹೇಳುತ್ತದೆ. ಕೆಲವರಿಗೆ ಒಂದು ಸಂಬಂಧದಲ್ಲಿ ನಂಬಿಕೆ ಹೊರಟುಹೋಗುವುದು ಸಹ ಮದುವೆಯಾಚೆಗಿನ ಸಂಬಂಧಕ್ಕೆ ಉತ್ತೇಜನ ನೀಡುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ದಾಂಪತ್ಯ ದ್ರೋಹಕ್ಕೆ ಹಲವು ಕಾರಣ
ಬೇಸರ: ಸಂಬಂಧದಲ್ಲಿ ಬೇಸರ ಕಾಣುವುದು ದಾಂಪತ್ಯ ದ್ರೋಹಕ್ಕೆ ಸಾಮಾನ್ಯ ಕಾರಣವಾಗಿದೆ. ಬೇಸರವು ಭಾವನಾತ್ಮಕ ಹಾಗೂ ಲೈಂಗಿಕ ಸಮಸ್ಯೆಗಳಿಂದ ಕೂಡಿರಬಹುದು.
ಲೈಂಗಿಕ ಬಯಕೆ: ಹೊಸ ಬಗೆಯ ಲೈಂಗಿಕತೆಯನ್ನು ಹೊಂದುವ ಬಯಕೆಯು ವ್ಯಕ್ತಿಗಳಿಗೆ ವಂಚಿಸಲು ಪ್ರೇರೇಪಿಸುತ್ತದೆ. ವಿಶೇಷವಾಗಿ ವೈಯಕ್ತಿಕ ಲೈಂಗಿಕ ಅಗತ್ಯಗಳು ಪೂರೈಕೆಯಾಗದ ಕಾರಣವೂ ಪ್ರಮುಖವಾಗಿದೆ.
ವ್ಯಸನ: ಅತಿಯಾದ ಕುಡಿತದ ವ್ಯಸನವು ದಾಂಪತ್ಯ ದ್ರೋಹ, ಅಸೂಯೆ ಮತ್ತು ಇತರ ಲೈಂಗಿಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಬದ್ಧತೆಯ ಸಮಸ್ಯೆಗಳು: ಮದುವೆಯೊಳಗಿನ ಬದ್ಧತೆಯ ಕೊರತೆಯು ದಾಂಪತ್ಯ ದ್ರೋಹಕ್ಕೆ ಕಾರಣವಾಗಬಹುದು.
ಭಾವನಾತ್ಮಕ ಸಮಸ್ಯೆ: ಸಂಗಾತಿಯೊಂದಿಗಿನ ಭಾವನಾತ್ಮಕ ಸಂಪರ್ಕ ಕಡಿತವು ದಾಂಪತ್ಯ ದ್ರೋಹಕ್ಕೆ ಕಾರಣವಾಗಬಹುದು.
ದಾಂಪತ್ಯ ದ್ರೋಹದ ಅಪಾಯಗಳೇನು?
ದಾಂಪತ್ಯ ದ್ರೋಹದ ಪರಿಣಾಮಗಳು ವಿನಾಶಕಾರಿಯಾಗಬಹುದು. ಕುಟುಂಬದ ನಂಬಿಕೆಯನ್ನು ನಾಶಪಡಿಸಬಹುದು. ದ್ರೋಹ, ಸೇಡು ಮತ್ತು ವಂಚನಾತ್ಮಕ ಭಾವನೆಗಳಿಗೆ ಕಾರಣವಾಗಬಹುದು. ಇದು ವೈವಾಹಿಕ ಬದುಕಿನ ಅಂತ್ಯಕ್ಕೆ ಕಾರಣವಾಗಬಹುದು. ದಾಂಪತ್ಯ ದ್ರೋಹದ ನಂತರ ಮದುವೆಯನ್ನು ಮರುನಿರ್ಮಾಣ ಮಾಡುವುದು ಒಂದು ಸವಾಲಿನ ಪ್ರಕ್ರಿಯೆಯಾಗಿದೆ ಎಂಬ ಅಭಿಪ್ರಾಯವನ್ನು ಮನೋವೈದ್ಯರು ವ್ಯಕ್ತಪಡಿಸುತ್ತಾರೆ.











Click it and Unblock the Notifications