Skin Care: ಚಳಿಗಾಲದಲ್ಲಿ ಬಿಸಿ ನೀರು ಡೇಂಜರ್‌: ಚರ್ಮದ ಆರೋಗ್ಯ ಕಾಪಾಡುವುದು ಹೇಗೆ?

ವಾತಾವರಣದಲ್ಲಿ ಬದಲಾವಣೆಗಳು ಆದಾಗ ಅದರ ಪರಿಣಾಮಗಳು ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ. ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರ ಹೀಗೆ ಕಾಣಿಸಿದರೆ, ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಕಾಡಬಹುದು. ಆದರೆ ಚಳಿಗಾಲದಲ್ಲಿ ಮಾತ್ರ ನೇರವಾಗಿ ನಮ್ಮ ಚರ್ಮದ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ ಚರ್ಮದ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯವಾಗುತ್ತದೆ.

ಕೆಲವರಿಗೆ ಚಳಿಗಾಲದಲ್ಲಿಯೇ ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಮುಂಜಾನೆ ಚಳಿಗೆ ಹೊರಗೆ ಹೋಗಿ ಕೆಲಸ ಮಾಡುವವರು, ಧೂಳಿನಲ್ಲಿ ಓಡಾಡುವವರು, ಎಚ್ಚರಿಕೆ ವಹಿಸದೆ ಹೋದರೆ ಕಾಲು, ಹಿಮ್ಮಡಿ, ತುಟಿ ಹೀಗೆ ಮೈಯ್ಯಲ್ಲಿನ ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಬಿರುಕುಗಳು ಹೆಚ್ಚಾಗಿ ಅದರಿಂದ ರಕ್ತ ಸೋರಬಹುದು, ಇದು ನೋವನ್ನು ತರಬಹುದು. ಹೀಗಾಗಿ ಚಳಿಗಾಲದಲ್ಲಿ ಚರ್ಮದ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದು, ಕಾಳಜಿ ವಹಿಸುವುದು ಹೀಗೆ ಎಲ್ಲವನ್ನೂ ಮಾಡಬೇಕಾಗುತ್ತದೆ.

Effective Tips To Protect Your Skin During Winter Season

ಹಾಗಾದರೆ ಚಳಿಗಾಲದಲ್ಲಿ ಯಾವ ರೀತಿಯಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ತಜ್ಞರು ಹಲವು ರೀತಿಯ ಸಲಹೆಗಳನ್ನು ನೀಡಿದ್ದಾರೆ. ಆ ಪ್ರಕಾರ ಹೇಳುವುದಾದರೆ ಕೆಲವರದು ಒಣ ಚರ್ಮವಿರುತ್ತದೆ. ಅಂಥವರು ಹೆಚ್ಚಾಗಿ ಮುಖ ತೊಳೆಯಬಾರದು. ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಮ್ನ್ನು ಬಳಸಬೇಕು ಹೀಗೆ ಮಾಡುವುದರಿಂದ ತ್ವಚೆಯ ಮೇಲಿರುವ ಕೊಬ್ಬಿನ ಪದರವನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಜತೆಗೆ ಕ್ರಮ ತೇವಾಂಶ ಹಿಡಿದಿಡಲು ಸಹಕಾರಿಯಾಗಿರುತ್ತದೆ.

ಹೆಚ್ಚು ಬಿಸಿ ನೀರನ್ನು ಬಳಸಬೇಡಿ

ಮಧ್ಯಾಹ್ನದ ವೇಳೆಯಲ್ಲಿ ಹೊರ ಹೋದಾಗ ಸೂರ್ಯನ ಕಿರಣ ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಅಡ್ಡ ಪರಿಣಾಮಗಳಾಗಬಹುದು ಇದನ್ನು ತಡೆಯಲು ಅಥವಾ ಸೂರ್ಯನ ಕಿರಣದ ತೀಕ್ಷಣೆಯಿಂದ ರಕ್ಷಿಸಲು ಸನ್ ಕ್ರೀನ್ ಬಳಸಬಹುದು. ಚಳಿಗಾಲದಲ್ಲಿ ತುಂಬಾ ಬಿಸಿ ಇರುವ ನೀರು ಹಿತವೆನಿಸಿದರೂ ಅದು ಚರ್ಮಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹೆಚ್ಚು ಬಿಸಿಯಾದ ನೀರನ್ನು ಬಳಸದೆ ಕಡಿಮೆ ಬಿಸಿ ಇರುವ ನೀರನ್ನು ಬಳಸ ಬೇಕು.

ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಲೇಪಿಸಿ ಸ್ನಾನ ಮಾಡಿದರೆ ಮೈ ಒಡೆಯುವುದು ಕಡಿಮೆಯಾಗಲು ಸಾಧ್ಯವಾಗುತ್ತದೆ. ಎಣ್ಣೆಯ ಜೊತೆಗೆ ಬೇವಿನ ಪುಡಿ ಅಥವಾ ಅರಿಶಿನ ಸೇರಿಸಿ ಹಚ್ಚಿದರೆ ಚರ್ಮದ ನವೆಯನ್ನು ತಡೆಗಟ್ಟಬಹುದು. ಸ್ನಾನದ ನಂತರ ಕ್ರೀಮ್ ಇರುವ ಮಾಯಿಶ್ಚರೈಸಿಂಗ್ ಉಪಯೋಗಿಸಬೇಕು. ತ್ವಚೆಗೆ ಬರೀ ಲೋಶನ್ ಹಚ್ಚಿದರೆ ಸಾಕಾಗದು. ಹೆಚ್ಚಿನ ನೀರನ್ನು ಕುಡಿಯಬೇಕು. ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ ೮ ಲೋಟ ನೀರನ್ನು ಕುಡಿಯಲೇ ಬೇಕು.

Effective Tips To Protect Your Skin During Winter Season

ವಿಟಮಿನ್ 'ಸಿ' ಆಹಾರ ಪದಾರ್ಥ ಸೇವಿಸಿ

ವಾಲ್ನಟ್ ಕೆನೋಲಾ ಎಣ್ಣೆ, ಆಗಸೇ ಬೀಜವನ್ನು ಹೆಚ್ಚಾಗಿ ಉಪಯೋಗಿಸಬೇಕು. ಹಸಿ ತರಕಾರಿ, ವಿಟಮಿನ್ 'ಸಿ' ಇರುವ ಹಸಿರು ಎಲೆ ತರಕಾರಿಯನ್ನು ಆಹಾರದಲ್ಲಿ ಉಪಯೋಗಿಸಬೇಕು. ಜಂಕ್ ಆಹಾರ, ಕಾಫಿ ಸೋಡಾ ಸೇವನೆ ಕಡಿಮೆ ಮಾಡಬೇಕು. ಬಿಸಿ ನೀರು ಸ್ನಾನ ಒಳ್ಳೆಯದು. ಆದರೆ ಬಿಸಿ ನೀರಿಗೆ ಕೊಬ್ಬರಿ ಎಣ್ಣೆ ಒಂದು ತೊಟ್ಟು ಹಾಕಿ ಉಪಯೋಗಿಸಬಹುದು.

ಹಿಮ್ಮಡಿ ಒಡೆಯುವುದನ್ನು ತಡೆಯಲು ಹೂ ಬಿಸಿ ನೀರಿಗೆ ಲ್ಯಾವೆಂಡರ್ ತೈಲದ ಎರಡು ಹನಿ ಸೇರಿಸಿ ಪಾದವನ್ನು ಹತ್ತು ನಿಮಿಷ ಮುಳುಗಿಸಿಡುವುದು. ನಂತರ ಚೆನ್ನಾಗಿ ಉಜ್ಜಿ ತೊಳೆದು ನಿರ್ಜೀವ ಚರ್ಮ ತೆಗೆದು ಮೆತ್ತನೆಯ ಬಟ್ಟೆಯಿಂದ ಪಾದ ಒರೆಸಿಕೊಳ್ಳಬೇಕು. ವ್ಯಾಸಲಿನ್ ಹಚ್ಚಿ ಸಾಕ್ಸ್ ಧರಿಸಿ ಓಡಾಡುವುದರಿಂದಲೂ ಹಿಮ್ಮಡಿ ಮತ್ತು ಪಾದದ ಬಿರುಕು ತಡೆಯಬಹುದು.

Photo credit:This is an AI generated aticle image through WISE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+