ಗ್ರಾಮೀಣ ಭಾಗಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ನರ್ಸ್‌ಗಳ ಸ್ಥಿತಿ ಇದು
ಕೋಲ್ಕತ್ತಾ, ಜೂನ್ 08: ಕೊರೊನಾ ಸೋಂಕು ಎಲ್ಲರ ಬದುಕನ್ನೂ ನರಕಕ್ಕೆ ದೂಡಿದೆ. ಒಂದೆಡೆ ಸೋಂಕಿನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಸೋಂಕಿನಿಂದ ಜನರನ್ನು ಕಾಪಾಡಲು ವೈದ್ಯರು, ನರ್ಸ್‌ಗಳು ಕಷ್ಟಪಡುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದ್ದು ನರ್ಸ್‌ಗಳೇ ಆ ಅಂತರವನ್ನು ತುಂಬುತ್ತಿದ್ದಾರೆ, ಶುಶ್ರೂಷೆ ಮಾಡುತ್ತಿದ್ದಾರೆ. ಒಂದೆಡೆ ತಮಗೂ ಸೋಂಕು ತಗುಲುವ ಭಯ, ನಿತ್ಯ ರೋಗಿಗಳ ಶುಶ್ರೂಷೆಯಿಂದಾಗಿ ಸಾಕಷ್ಟು ಒತ್ತಡ ಅನುಭವಿಸುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ತಾವು ಅನುಭವಿಸಿರುವ ಅನುಭವವನ್ನು ನರ್ಸ್ ಮೃದುಲಾ ಬ್ಯಾನರ್ಜಿ ಬಿಚ್ಚಿಟ್ಟಿದ್ದಾರೆ. ಪನಾಗಢ ಗ್ರಾಮೀಣ ಆಸ್ಪತ್ರೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇದು ಪಶ್ಚಿಮ ಬಂಗಾಳದ ಪಶ್ಚಿಮ್ ಬರ್ಧಮಾನ್ ಜಿಲ್ಲೆಯಲ್ಲಿದೆ.

ಜೂನ್ 04ರಂದು ಡಜನ್ ಗಟ್ಟಲೇ ಕೊರೊನಾ ಸೋಂಕಿತರು ಆಸ್ಪತ್ರೆಯ ಕೋವಿಡ್ ಕೇಂದ್ರದ ಹೊರಗೆ ಕುಳಿತಿದ್ದರು.''ಕಳೆದ ವರ್ಷವೂ ಕೊರೊನಾ ಸೋಂಕು ಕಂಡಿರುವ ಗ್ರಾಮಸ್ಥರು ಕೊರೊನಾ ಸೋಂಕಿನ ಲಕ್ಷಣಗಳ ಬಗ್ಗೆ ಚೆನ್ನಾಗಿ ಅರಿತಿದ್ದಾರೆ. ಲಕ್ಷಣಗಳು ಕಂಡು ಬಂದ ತಕ್ಷಣ ಅವರೇ ಸ್ವತಃ ಬಂದು ಪರೀಕ್ಷೆಗೆ ಒಳಪಡುತ್ತಾರೆ'' ಎಂದು ಮೃದುಲಾ ಹೇಳಿದರು.
ಕೊರೊನಾ ಸೋಂಕು ವಿರುದ್ಧದ ಹೋರಾಟದಲ್ಲಿ ನರ್ಸ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ, ಆಸ್ಪತ್ರೆಗಳಲ್ಲಿ ವೈದ್ಯರು ಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ, ರೋಗಿಗಳ ಶುಶ್ರೂಷೆಯನ್ನು ನರ್ಸ್‌ಗಳೇ ಮಾಡಬೇಕಿದೆ.

''ಇನ್ನು ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಶೌಚಾಲಯಗಳಿಲ್ಲ, ಇಂಟರ್‌ನೆಟ್ ಸೇವೆಗಳಿಲ್ಲ ಹೀಗಿದ್ದರೂ ಕೂಡ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕಿದೆ ಹೀಗಾಗಿ ಮನೆಯಲ್ಲಿ ಕೆಲಸದ ಕುರಿತು ವಿರೋಧದ ಮಾತನ್ನೂ ಕೇಳಬೇಕಾಗುತ್ತದೆ''.

ನರ್ಸಿಂಗ್ ಸಹಾಯಕರಾದ ಅರ್ನಬ್ ಮಾತನಾಡಿ, 'ಕೋವಿಡ್ ರೋಗಿಗಳ ಆಮ್ಲಜನಕ ಕುರಿತು ನಿಗಾ ಇಡಬೇಕು, ವೈದ್ಯರಿಗೆ ಶಸ್ತ್ರ ಚಿಕಿತ್ಸೆ ವೇಳೆ ಸಹಾಯ ಮಾಡಬೇಕು ಹೀಗೆ ಹಲವಾರು ಕೆಲಸಗಳಿರುತ್ತವೆ, ಮೊದಲು ರಕ್ತ ನೋಡಿದರೆ ಭಯವಾಗುತ್ತಿತ್ತು, ಆದರೆ ಕೊರೊನಾ ಎರಡನೇ ಅಲೆ ಬಳಿಕ ಎಲ್ಲವೂ ಅಭ್ಯಾಸವಾಗಿದೆ'' ಎನ್ನುತ್ತಾರೆ.












Click it and Unblock the Notifications