ಸುಮಲತಾ ಅಂಬರೀಶ್ ಪರ ಯಶ್ ಚುನಾವಣಾ ಪ್ರಚಾರ? ಕೆಜಿಎಫ್ ಸ್ಟಾರ್ ಶಾಕಿಂಗ್ ಉತ್ತರ ಇಲ್ಲಿದೆ!
ನಿಮಗೆಲ್ಲಾ 2019ರ ಲೋಕಸಭೆ ಚುನಾವಣೆ ಗೊತ್ತಿದೆ ತಾನೆ? ಯಾಕಂದ್ರೆ ಇದು ಬರೀ ಎಲೆಕ್ಷನ್ ಆಗಿರಲಿಲ್ಲ, ಬದಲಿಗೆ ಕರ್ನಾಟಕದಲ್ಲಿ ದೊಡ್ಡ ಯುದ್ಧವನ್ನೇ ಸಾರಿದಂತೆ ಇತ್ತು. ಅದ್ರಲ್ಲೂ ಆಗಿನ ಸಮ್ಮಿಶ್ರ ಸರ್ಕಾರ ಕೂಡ ಲೋಕಸಭೆ ಚುನಾವಣೆ ನಂತರ ಬಿದ್ದು ಹೋಯ್ತು. ಹೀಗೆ 2019ರ ಲೋಕಸಭೆ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದರು, ಆಗ ಸುಮಲತಾ ಅವರ ಗೆಲುವಿಗಾಗಿ ಹೋರಾಟ ಮಾಡಿದ್ದ ಯಶ್ ಅವರು ಈಗ ಏನ್ ಹೇಳಿದ್ದಾರೆ ಗೊತ್ತೆ?
ಕನ್ನಡಿಗರ ಪಾಲಿನ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾಲವಾದ ನಂತರ ಮಂಡ್ಯದಲ್ಲಿ, ದೊಡ್ಡ ರಾಜಕೀಯ ಯುದ್ಧವೇ ಆರಂಭ ಆಗಿತ್ತು. ಅದ್ರಲ್ಲೂ ಸುಮಲತಾ ಅಂಬರೀಶ್ ಅವರು ತಾವು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನಿಂತೇ ನಿಲ್ಲುತ್ತೇನೆ ಅಂತಾ ಸವಾಲು ಹಾಕಿ ಎಲೆಕ್ಷನ್ ಫೇಸ್ ಮಾಡಿದ್ದರು. ಹೀಗಿದ್ದಾಗಲೇ ದೊಡ್ಡ ರಾಜಕೀಯ ಕಿತ್ತಾಟ ಶುರುವಾಗಿತ್ತು. ಆಗಲೇ, ಜೋಡೆತ್ತುಗಳ ರೀತಿ ರಾಕಿಂಗ್ ಸ್ಟಾರ್ ಯಶ್ & ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಾಗಿಯೆ ನಿಂತು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದರು.

ಯಶ್ ಅವರ ಹೇಳಿಕೆ ವೈರಲ್
2019ರಲ್ಲಿ ಹೀಗೆ ಯಶ್ ಅವರು ಬೆಂಬಲ ನೀಡಿದ್ದಕ್ಕೆ ಪ್ರಮುಖ ಕಾರಣ ಇತ್ತು, ಅಂಬರೀಶ್ ಅವರಿಗಾಗಿ ಯಶ್ ಅವರು ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಈ ಬಾರಿ, ಯಶ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡ್ತಾರಾ? ಈ ಬಗ್ಗೆ ಸ್ವತಃ ಯಶ್ ಏನ್ ಹೇಳಿದ್ರು? ಯಶ್ ಅವರ ಹೇಳಿಕೆ ಈಗ ಎಲ್ಲೆಲ್ಲೂ ವೈರಲ್ ಆಗಲು ಕಾರಣ ಏನು? ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಚುನಾವಣೆಗೆ ಬೆಂಬಲ ನೀಡುತ್ತಾರಾ? ಇಲ್ವಾ?
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದವು. 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು. ಬಿಜೆಪಿಗೆ ಇದು ಟಾಸ್ಕ್ ಆಗಿದ್ದಾಗಲೇ ಅಭ್ಯರ್ಥಿಯನ್ನ ಹಾಕದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಬೆಂಬಲ ನೀಡಿತ್ತು.
ಆಗ ಯಶ್ ಅವರು ಹಾಗೂ ದರ್ಶನ್ ಅವರು ಪ್ರಚಾರ ಮಾಡಿ ಸುಮಲತಾ ಅಂಬರೀಶ್‌ರ ಗೆಲುವಿನಲ್ಲಿ ಪಾತ್ರ ವಹಿಸಿದ್ದರು. ಆದರೆ ಈ ಬಾರಿ ಅಂದ್ರೆ 2024ರ ಲೋಕಸಭೆ ಚುನಾವಣೆ ವೇಳೆ ನಟ ಯಶ್, ಸುಮಲತಾ ಅವರ ಪರ ಪ್ರಚಾರ ನಡೆಸಲಿದ್ದಾರಾ? ಈ ಬಗ್ಗೆ ಯಶ್‌ರ ಉತ್ತರ ತುಂಬಾ ಸರಳವಾಗಿತ್ತು! ಆ ಮಾಹಿತಿ ಇಲ್ಲಿದೆ ಮುಂದೆ ಓದಿ.
This side of him 😂😂😂😂😂😂😂#Yashboss #ToxicTheMovie @TheNameIsYash pic.twitter.com/kWqHZWaxf6
— Agashtya (@sachi_1933) February 14, 2024
ಎಲ್ಲಿಗೂ ಹೋಗಲ್ಲ ಅಂದ್ರು ಯಶ್!
ಇಂದು ಬೆಂಗಳೂರಲ್ಲಿ ಗೆಳೆಯನ ಜಿಮ್ ಓಪನಿಂಗ್ ವೇಳೆ ಹಾಜರಿದ್ದ ನಟ ಯಶ್, ಸುಮಲತಾ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ನೀಡಿದರು. ಹಾಗೇ ನಾನು ಯಾವುದೇ ಅಭ್ಯರ್ಥಿ ಪರ ಚುನಾವಣೆ ಪ್ರಚಾರಕ್ಕೆ ಅಂತ ಹೋಗಲ್ಲ, ನನ್ನ ಗುರಿಯೇ ಬೇರೆ ಇದೆ ಅಂತಾ ಹೇಳಿದ್ದಾರೆ. ಈ ಮೂಲಕ ಯಶ್ ಅವರು ತಮ್ಮ ಗುರಿ ಸಿನಿಮಾ ಮಾತ್ರ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಈ ಮೂಲಕ ದೇಶಕ್ಕೆ ದೇಶವೇ ಯಶ್ ಅವರ ಈ ನಿರ್ಧಾರವನ್ನು ಸ್ವಾಗತಿಸುತ್ತಿದೆ. ಅದರಲ್ಲೂ ರಾಜಕೀಯ ನಮಗೆ ಬೇಡ ಅಂತಾ ಯಶ್ ಅವರು ಹೇಳಿರುವುದು ದೊಡ್ಡ ಸಂಚಲನ ಸೃಷ್ಟಿಸಿದೆ.
ಏನೋ ದೊಡ್ಡದಾಗಿದೆ ರಾಕಿ ಐಡಿಯಾ
ಯಶ್-19 'ಟಾಕ್ಸಿಕ್' ಫಸ್ಟ್ ಲುಕ್‌ನ ನೋಡುತ್ತಿದ್ದರೆ, ನಟ ಯಶ್ ಬೇರೆ ಏನೋ ದೊಡ್ಡದಾಗಿ ಮಾಡುತ್ತಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಸಿನಿಮಾ ರಂಗವನ್ನು ಶೇಕ್ ಮಾಡಿರುವ ಈ ನಟ ಹಾಲಿವುಡ್ ರಣ ರಂಗದಲ್ಲಿ ಖದರ್ ತೋರಿಸೋದಕ್ಕೆ ಸಜ್ಜಾಗಿದ್ದಾರೆ. ಹೀಗೆ ಕನ್ನಡ ನೆಲದ ನಟ ಜಾಗತಿಕವಾಗಿ ಖ್ಯಾತಿ ಪಡೆಯುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ಯಶ್ ಅವರು ರಾಜಕೀಯ ಬೇಡ ಅಂದಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.












Click it and Unblock the Notifications