Bigg Boss: ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಕೊನೆಯ ಕಳಪೆ-ಉತ್ತಮ ಸಿಕ್ಕಿದ್ದು ಇವರಿಗೇ

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಟಾಸ್ಕ್‌ಗಳು ಹೆಚ್ಚಾಗಿ ಇತ್ತು. ಹೀಗಾಗಿ ಎಲ್ಲಾ ಟಾಸ್ಕ್‌ಗಳಲ್ಲಿ ಹೆಚ್ಚಾಗಿ ಆಡಿರುವುದು ಮೋಕ್ಷಿತಾ ಮತ್ತು ಧನ್‌ರಾಜ್. ಇವರಿಬ್ಬರೂ ಕೂಡ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಹೋಲಿಸಿದರೆ ಹೆಚ್ಚು ಟಾಸ್ಕ್‌ಗಳನ್ನು ಆಡಿದ್ದಾರೆ. ಭವ್ಯಾ ಅವರು ಕೂಡ ಹೆಚ್ಚಾಗಿ ಟಾಸ್ಕ್‌ಗಳನ್ನು ಆಡಿದ್ದು ಆ ಟಾಸ್ಕ್‌ಗಳಲ್ಲಿ ಸಿಕ್ಕಾಪಟ್ಟೆ ಡಾಮಿನೆಟ್ ಮಾಡಿದ್ದು ಕಂಡುಬಂದಿದೆ. ಹಾಗಾದರೆ ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಕೊನೆಯ ಕಳಪೆ ಮತ್ತು ಕೊನೆಯ ಉತ್ತಮ ಯಾರಿಗೆ ಸಿಕ್ಕಿದೆ? ಇದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ತಿಳಿಯೋಣ.

ಭವ್ಯಾ ಗೌಡ ಆಟದಲ್ಲಿ ಸರಿಯಾಗಿ ಊಹಿಸಿ 230 ಅಂಕಗಳನ್ನು ಪಡೆದುಕೊಂಡಿದ್ದರು. ಇನ್ನೂ ಮೋಕ್ಷಿತಾ ಅವರು ಟಾಸ್ಕ್ ಆಡಿ ಎರಡು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಮೊದಲನೇ ಟಾಸ್ಕ್‌ ಗೆದ್ದು ಅವರೇ ಮೊದಲನೇ ಸ್ಥಾನದಲ್ಲಿ ಇದ್ದರು. ಹೀಗೆ ಟಾಸ್ಕ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಟಾಸ್ಕ್‌ ವಿಚಾರದಲ್ಲಿ ಉತ್ತಮ ಆಟ ಆಡಿದ್ದು ಮೋಕ್ಷಿತಾ ಅವರು.

who got the final bad-good rank of bigg boss kannada season 11

ಧನ್‌ರಾಜ್‌ ಕೂಡ ಚೆನ್ನಾಗಿ ಆಡಿ ಎರಡು ಆಟದಲ್ಲಿ ಬ್ಯಾಕ್‌ ಟು ಬ್ಯಾಕ್ ಜಯ ಗಳಿಸಿದರು. ಮೂರನೇ ಟಾಸ್ಕ್‌ನಲ್ಲೂ ಧನ್‌ರಾಜ್ ಜಯ ಗಳಿಸಿದರು. ಆದರೆ ಅವರು ಕನ್ನಡಿ ನೋಡಿ ಆಟ ಆಡಿದ್ದರಿಂದ ಅದನ್ನು ಕ್ಯಾನ್ಸಲ್ ಮಾಡಲಾಗಿದೆ. ಈ ಮೋಸದ ಆಟದ ವೀಡಿಯೋವನ್ನು ಮನೆಯಲ್ಲಿ ಪ್ರಸಾರ ಕೂಡ ಮಾಡಲಾಯಿತು. ಹೀಗಾಗಿ ಇಲ್ಲಿ ಧನ್‌ರಾಜ್‌ ಅವರಿಗೆ ಉತ್ತಮ ಸಿಗೋದು ಅನುಮಾನವಿದೆ. ಹೀಗೆ ಮೋಸದ ಆಟ ಆಡಲಿಲ್ಲ ಅಂತಾಗಿದ್ದರೆ ಈ ವಾರದ ಉತ್ತಮ ಧನ್‌ರಾಜ್‌ ಅವರಿಗೇ ಸಿಗುತ್ತಿತ್ತು. ಹೀಗಾಗಿ ಧನ್‌ರಾಜ್ ಅವರಿಗೆ ಉತ್ತಮ ಸಿಗುವುದು ಕಷ್ಟಯಿದೆ.

ಈ ವಾರದ ಉತ್ತಮ ಯಾರಿಗೆ?

ಇನ್ನೂ ಟಾಸ್ಕ್‌ನಲ್ಲಿ ಉತ್ತಮವಾಗಿ ಆಡಿ, ಉತ್ತಮ ಪ್ರದರ್ಶನ ನೀಡಿದ ಮೋಕ್ಷಿತಾ ಅವರಿಗೆ ಈ ವಾರದ ಉತ್ತಮ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಇವರನ್ನು ಬಿಟ್ಟರೆ ಭವ್ಯಾ ಅವರಿಗೆ ಉತ್ತಮ ಸಿಗಬೇಕಾಗಿತ್ತು. ಆದರೆ ಎಲ್ಲಾ ಟಾಸ್ಕ್‌ನಲ್ಲಿ ಗೆಲ್ಲುತ್ತಾ ಬಂದ ಭವ್ಯಾ ಈ ವಾರ ಗೆದ್ದರೆ ಅದರಲ್ಲಿ ವಿಶೇಷವೇನು ಅನಿಸುವುದಿಲ್ಲ.

ಆದರೆ ಮೋಕ್ಷಿತಾ ಅವರು ಈ ಹಿಂದಿನ ಟಾಸ್ಕ್‌ಗಳನ್ನು ಆಡುವುದರಿಂದ ಹಿಂಜರಿಯುತ್ತಿದ್ದರು. ಆದರೀಗ ಅವರು ಕಂ ಬ್ಯಾಕ್ ಆಗಿ ಉತ್ತಮ ಆಟ ಆಡಿದ್ದಾರೆ. ಹೀಗಾಗಿ ಅವರಿಗೆ ಈ ವಾರದ ಉತ್ತಮ ಹೋಗುವ ಎಲ್ಲಾ ಸಾಧ್ಯತೆಗಳು ಇವೆ. ಮೋಕ್ಷಿತಾ ಅವರಿಗೆ ನೀರನ್ನು ಕಂಡರೆ ಭಯ ಇದ್ದರೂ ಕೂಡ ಈಜುಕೊಳದಲ್ಲಿ ಇಳಿದು ಆಟ ಆಡಿದರು. ಅಲ್ಲದೆ ಅವರು ಹಾಕಿದ ಎಫರ್ಟ್‌ ಕೂಡ ಕಂಡು ಬಂದಿದೆ.

ಈ ವಾರದ ಕಳಪೆ ಯಾರಿಗೆ?

ಈ ವಾರದ ಕಳಪೆಗೆ ಧನ್‌ರಾಜ್‌ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಯಾಕೆಂದರೆ ಅವರು ಆಟದಲ್ಲಿ ಮೋಸ ಮಾಡಿ ಗೆದ್ದಿದ್ದಾರೆ. ಇದು ಯಾರಿಗೂ ಕೂಡ ತಿಳಿದು ಬಂದಿರಲಿಲ್ಲ. ಇದರಿಂದಾಗಿ ಬೇರೆಯವರಿಗೆ ಚಾನ್ಸ್ ತಪ್ಪಿ ಹೋಗಿದೆ. ಇವರ ಮೋಸದ ಆಟದಿಂದ ಬೇರೆಯವರು ಆಡುವ ಅವಕಾಶವೂ ಕೈ ತಪ್ಪಿ ಹೋಯ್ತು. ಇದರಿಂದಾಗಿ ಈ ವಾರ ಧನ್‌ರಾಜ್ ಅವರಿಗೆ ಕಳಪೆ ನೀಡಲು ಹೆಚ್ಚು ಜನ ಟಾರ್ಗೇಟ್ ಮಾಡುವ ಸಾಧ್ಯತೆ ಇದೆ.

ಆದರೆ ಈ ವಾರ ಬಿಗ್‌ಬಾಸ್‌ ಕಳಪೆ ಹಾಗೂ ಉತ್ತಮವನ್ನು ತುಂಬಾ ವಿಭಿನ್ನವಾಗಿ ನಡೆಸಿರುವ ಮಾಹಿತಿ ಇದೆ. ಇದನ್ನು ಈಗಿರುವ ಸ್ಪರ್ಧಿಗಳು ಮಾಡಿಲ್ಲ. ಈ ಹಿಂದೆ ಇದ್ದ ಹಳೆಯ ಸ್ಪರ್ಧಿಗಳು ಈ ಪ್ರಕ್ರಿಯೆಯನ್ನು ಮಾಡಿದ್ದಾರೆ.

ಹೌದು.. ಇಂದು ಬಿಗ್‌ಬಾಸ್‌ ಮನೆಗೆ ಬಂದ ಹಳೆಯ ಸ್ಪರ್ಧಿಗಳಾದ ಶಿಶಿರ್, ಯಮುನಾ, ಮಾನಸಾ, ಗೋಲ್ಡ್‌ ಸುರೇಶ್, ಹಂಸ, ಅನುಷಾ, ರಂಜಿತ್ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಈ ಏಳು ಜನ ಈ ವಾರದ ಉತ್ತಮ ಹಾಗೂ ಕಳಪೆಯನ್ನು ಮನೆಯ ಸ್ಪರ್ಧಿಗಳಿಗೆ ನೀಡಿದ್ದಾರೆ. ಅದು ಈ ವಾರವನ್ನು ಪರಿಗಣಿಸಿ ಅಲ್ಲ ಬಿಗ್‌ಬಾಸ್‌ನ ಎಲ್ಲಾ ವಾರಗಳನ್ನು ಪರಿಗಣಿಸಿ ಈ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಉತ್ತಮ ಕೊಡಲು ರೆಡ್ ಹಾರ್ಟ್ ನೀಡಬೇಕು. ಕಳಪೆಗೆ ಕಪ್ಪು ಹಾರ್ಟ್‌ ನೀಡಬೇಕು. ಈ ಕಪ್ಪು ಹಾರ್ಟ್ಗೆ ಸುತ್ತಲು ತಂತಿ ಬೇಲಿ ಇರುತ್ತದೆ. ಇದರಲ್ಲಿ ಅತೀ ಹೆಚ್ಚು ಜನ ಕಪ್ಪು ಹಾರ್ಟ್‌ ಅನ್ನು ಮಂಜು ಅವರಿಗೆ ನೀಡುತ್ತಾರೆ. ಇನ್ನೂ ಹೆಚ್ಚು ರೆಡ್ ಹಾರ್ಟ್ ಅನ್ನು ಹನುಮಂತ ಹಾಗೂ ತ್ರಿವಿಕ್ರಮ್‌ಗೆ ನೀಡಲಾಗಿದೆ. ಒಟ್ಟಿನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಈ ವಾರದ ಕಳಪೆ ಹಾಗೂ ಉತ್ತಮ ಯಾರು ಎನ್ನುವುದನ್ನು ನಿಖರವಾಗಿ ತಿಳಿಯಲು ಇಂದಿನ ಎಪಿಸೋಡ್‌ ನೋಡಲೇಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+