ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನಕ್ಕೆ ಕಾರಣವೇನು? ಯಾರು ಈ ಪವಿತ್ರ ಗೌಡ?
ನಟ ದರ್ಶನ್ ಅವರನ್ನ ಇದೀಗ ಕೊಲೆ ಪ್ರಕರಣ ಆರೋಪದಲ್ಲಿ ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇದೇ ಸಮಯದಲ್ಲಿ ಈ ಕೇಸ್‌ನಲ್ಲಿ ಪವಿತ್ರ ಗೌಡ ಹೆಸರನ್ನ ಕೂಡ ಎಳೆದು ತರಲಾಗುತ್ತಿದ್ದು, ಹಾಗಾದ್ರೆ ಯಾರು ಈ ಪವಿತ್ರ ಗೌಡ? ಅಸಲಿಗೆ ದರ್ಶನ್‌ರ ಬಂಧನಕ್ಕೆ ಕಾರಣ ಏನು? ದರ್ಶನ್ & ಪವಿತ್ರ ಗೌಡ ನಡುವೆ ಏನು ಸಂಬಂಧ ಇತ್ತು? ಬನ್ನಿ ತಿಳಿಯೋಣ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಾಳಲ್ಲಿ ಬಿರುಗಾಳಿ ಎದ್ದಿದೆ. ಪದೇ ಪದೇ ಹೀಗೆ ದರ್ಶನ್ ತಮ್ಮ ಬಾಳಲ್ಲಿ ಸಮಸ್ಯೆ ಎದುರಿಸುತ್ತಿದ್ದು. ಈಗ ಬೇರೆಯದ್ದೇ ಗಂಭೀರ ಆರೋಪ ಕೇಳಿಬಂದಿದೆ ಅದು ಏನಂದ್ರೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕೂಡ ಭಾಗಿಯಾಗಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ ನಟ ದರ್ಶನ್ ಅವರ ಜೊತೆಯಲ್ಲಿ ಪವಿತ್ರ ಗೌಡ ಹೆಸರು ಕೂಡ ಈಗ ತಳುಕು ಹಾಕಿಕೊಂಡಿದೆ. ಹಾಗಾದ್ರೆ ಅಸಲಿಗೆ ಯಾರು ಈ ಪವಿತ್ರ ಗೌಡ? ಪವಿತ್ರ ಗೌಡ & ನಟ ದರ್ಶನ್ ನಡುವೆ ಏನು ಸಂಬಂಧ? ಈಗ ಕೊಲೆ ಆಗಿರುವ ರೇಣುಕಾ ಸ್ವಾಮಿ ಘಟನೆಯಲ್ಲಿ ಪವಿತ್ರ ಗೌಡ ಹೆಸರು ಬಂದಿದ್ದು ಯಾಕೆ? ಮುಂದೆ ಓದಿ.

ಪವಿತ್ರ ಗೌಡ ಬಗ್ಗೆ ಮಾತನಾಡಿದ್ದಕ್ಕೆ ಕೊಲೆ?
ದರ್ಶನ್ ಅವರ ವಿರುದ್ಧ ಏನೇನೋ ಆರೋಪಗಳು ಕೇಳಿಬಂದಿದ್ದವು, ಆದರೆ ಇದೀಗ ಕೊಲೆ ಆರೋಪವೂ ಕೇಳಿಬಂದಿದೆ. ಅದರಲ್ಲೂ ಪವಿತ್ರ ಗೌಡ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್‌ನ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಭೀಕರವಾಗಿ ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿ ನೇರವಾಗಿ ನಟ ದರ್ಶನ್ ಅವರ ವಿರುದ್ಧ ಈ ರೀತಿಯ ಆರೋಪ ಕೇಳಿಬಂದಿದ್ದು, ಇದೀಗ ಪೊಲೀಸರು ನಟ ದರ್ಶನ್‌ರ ಸಮೇತ ಒಟ್ಟು 10 ಜನರನ್ನು ಮೈಸೂರಿನಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಾಗಾದ್ರೆ ಪವಿತ್ರಾ ಗೌಡ ಅವರ ಹಿನ್ನೆಲೆ ಏನು? ಮುಂದೆ ಓದಿ.
ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ಫೈಟ್!
ಅಂದಹಾಗೆ ಈ ಹಿಂದೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರ ಗೌಡ ಜಗಳ ದೊಡ್ಡ ಕಂಟಕ ತಂದಿತ್ತು. ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಆತ್ಮೀಯತೆ ಇದ್ದ ಕಾರಣ ಈ ರೀತಿ ಜಗಳ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಜಗಳ ಶುರುವಾದಾಗ ಈಗ ಕೊಲೆ ಆಗಿರುವ ರೇಣುಕಾಸ್ವಾಮಿ, ಪವಿತ್ರ ಗೌಡ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದೇ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಹೊಡೆದು, ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ದರ್ಶನ್ ಅವರು ಕೂಡ ಈ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ದಿಢೀರ್ ನಟ ದರ್ಶನ್ ಅವರನ್ನ ಅರೆಸ್ಟ್ ಮಾಡಿ ಮೈಸೂರಿನಿಂದ ಕರೆತರಲಾಗುತ್ತಿದೆ, ಈ ವಿಚಾರವಾಗಿ ವಿಚಾರಣೆ ಕೂಡ ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ ಎನ್ನಲಾಗಿದೆ.
ಅಭಿಮಾನಿಗಳ ಉಗ್ರ ಹೋರಾಟ ಶುರು!
ದರ್ಶನ್ ಅಭಿಮಾನಿಗಳು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ, ಹೀಗಾಗಿ ಪೊಲೀಸರು ಕೂಡ ಪರಿಸ್ಥಿತಿ ನಿಭಾಸಲು ಸಜ್ಜಾಗಿದ್ದಾರೆ. ಅದರಲ್ಲೂ ದರ್ಶನ್‌ರ ಮನೆ ಇರುವ ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯು ಕೈಮೀರುತ್ತಿದೆ. ಆರ್‌ಆರ್ ನಗರದಲ್ಲಿ ದರ್ಶನ್ ಅವರ ಫೋಟೋ ಇರುವ ಬಾವುಟ ಹಿಡಿದು ದರ್ಶನ್ ಅವರ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿ ಒಂದೇ ಕಡೆ ಸೇರಿದ್ದು, ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಪೊಲೀಸರು ಕೂಡ ಈ ಕುರಿತು ಕಟ್ಟೆಚ್ಚರ ವಹಿಸಿ, ಪರಿಸ್ಥಿತಿ ಹಿಡಿತಕ್ಕೆ ತರಲು ಯತ್ನಿಸುತ್ತಿದ್ದಾರೆ.
'ದರ್ಶನ್‌ಗೆ ಸಾವಿನ ಶಿಕ್ಷೆ ಕೊಡಿ'
ದರ್ಶನ್ & ಪವಿತ್ರ ಗೌಡ ಅವರಿಂದಲೇ ನನ್ನ ಮಗನ ಸಾವು ಆಗಿದೆ, ಹೀಗಾಗಿ ನನ್ನ ಮಗನಂತೆ ದರ್ಶನ್ & ಪವಿತ್ರ ಗೌಡ ಕೂಡ ಸಾಯಬೇಕು ಎಂದಿದ್ದಾರೆ ಮೃತ ರೇಣುಕಾಸ್ವಾಮಿ ಪೋಷಕರು. ನಿನ್ನೆ ಪೂರ್ತಿ ಬಿಕ್ಕಿ, ಬಿಕ್ಕಿ ಅತ್ತಿರುವ ರೇಣುಕಾಸ್ವಾಮಿ ಅವರ ಪೋಷಕರು & ಪತ್ನಿ, ದರ್ಶನ್‌ನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದು. ಅದ್ರಲ್ಲೂ ಯಾವ ರೀತಿ ನನ್ನ ಮಗ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆಯೋ, ಅದೇ ರೀತಿ ದರ್ಶನ್‌ಗೆ ಕೂಡ ಶಿಕ್ಷೆ ಕೊಡಿ. ಹಾಗೇ ಪವಿತ್ರಾ ಗೌಡಗೆ ಕೂಡ ಇದೇ ರೀತಿ ಕಠಿಣ ಶಿಕ್ಷೆ ನೀಡಬೇಕು ಅಂತಿದ್ದಾರೆ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ.












Click it and Unblock the Notifications